• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ: ಆನ್‌ಲೈನ್‌ ಮೂಲಕ ಕೆ‌.ಕಲ್ಯಾಣ್ ಪತ್ನಿ ಅಶ್ವಿನಿಗೆ ಕೌನ್ಸಿಲಿಂಗ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಅಕ್ಟೋಬರ್ 4: ಪ್ರೇಮಕವಿ, ಗೀತ ರಚನೆಕಾರ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿ ಅಶ್ವಿನಿ ಅವರನ್ನು ಖ್ಯಾತ ಮನರೋಗ ತಜ್ಞ ಡಾ.ಸಂದೀಪ್ ಪಾಟೀಲ್ ಕೌನ್ಸಿಲಿಂಗ್ ಮಾಡುತ್ತಿದ್ದಾರೆ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅವರನ್ನು ಕಳೆದ ಒಂದೂವರೆ ಗಂಟೆಯಿಂದ ಮನರೋಗ ತಜ್ಞ ಡಾ.ಸಂದೀಪ್ ಪಾಟೀಲ್ ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.

ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ: ಪತ್ನಿ ಆರೋಪಕ್ಕೆ ಕೆ.ಕಲ್ಯಾಣ್ ಸ್ಪಷ್ಟನೆ

ಎರಡು ಕಡೆಯ ಕುಟುಂಬಸ್ಥರು ಮಾಳಮಾರುತಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ಕೆ.ಕಲ್ಯಾಣ್ ಸೋದರ ಮತ್ತು ಅತ್ತಿಗೆ, ಕಲ್ಯಾಣ್ ಪತ್ನಿ ಅಶ್ವಿನಿಯ ದೊಡ್ಡಮ್ಮ ಸೇರಿದಂತೆ ಕುಟುಂಬಸ್ಥರ ಆಗಮಿಸಿದ್ದಾರೆ.

ಮಾಳಮಾರುತಿ ಸಿಪಿಐ ಬಿ.ಆರ್ ಗಡ್ಡೇಕರ್ ಜೊತೆಗೆ ಚರ್ಚೆ ನಡೆಯುತ್ತಿದ್ದು, ಪೊಲೀಸ್ ಠಾಣೆಯಲ್ಲಿರುವ ಅಶ್ವಿನಿ ಜತೆಗೆ ಕುಟುಂಬಸ್ಥರು ಮಾತುಕತೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಇಬ್ಬರ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ. ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಕೆ.ಕಲ್ಯಾಣ್ ದಾಂಪತ್ಯದ ಕಲಹಕ್ಕೆ ಅಂತ್ಯ ಹಾಡಲು ಉಭಯ ಕುಟುಂಬಸ್ಥರಿಂದ ಮಾತುಕತೆ ನಡೆದಿದೆ. ಈ ಮಾತುಕತೆಯಲ್ಲಿ ಚಿತ್ರ ಸಾಹಿತಿ ಕೆ.ಕಲ್ಯಾಣ್ ಸಹ ಉಪಸ್ಥಿತರಿದ್ದರು.

English summary
Psychologist Dr Sandeep Patil is counselling K Kalyan's wife Ashwini at Malamaruti Police Station in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X