ನನ್ನ ಮೌನವೂ ವೀಕ್ನೆಸ್ ಅಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಈ ಹೇಳಿಕೆಯ ಉದ್ದೇಶವೇನು?, ಇಲ್ಲಿದೆ ಮಾಹಿತಿ
ಬೆಳಗಾವಿ, ಅಕ್ಟೋಬರ್, 21: ಇತ್ತೀಚೆಗಷ್ಟೇ ನನ್ನ ಮೌನ ವೀಕ್ನೆಸ್ ಅಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಇನ್ನು ಈ ಹೇಳಿಕೆ ವಿಚಾರಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದು, ನನ್ನ ಮೌನವೂ ವೀಕ್ನೆಸ್ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದ್ದು, ಜಿಲ್ಲಾ ರಾಜಕಾರಣದ ಬಗ್ಗೆ ಬೆಳಗಾವಿ ಮಾಧ್ಯಮಗಳಿಗೆ ಗೊತ್ತಿದೆ. ಬೇರೆ ಜಿಲ್ಲೆಯ ವರದಿಗಾರರು ಪ್ರಶ್ನೆ ಕೇಳಿದರೆ ಉತ್ತರ ಕೊಡುತ್ತಿದ್ದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಣ್ಣ ಸಮಸ್ಯೆಯಿಲ್ಲ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಾವೆಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಮೈಸೂರು ಪ್ರವಾಸದ ಲಿಸ್ಟ್‌ನಲ್ಲಿ ನಾನೂ ಇದ್ದೆ. ನಾನೇ ನಮ್ಮ ಜಿಲ್ಲೆಯ ರಾಜು ಕಾಗೆ, ಮಹಾಂತೇಶ ಕೌಜಲಗಿ ಜೊತೆಗೆ ಮಾತನಾಡಿದ್ದೆ. ಎಲ್ಲರೂ ಸೇರಿ ಮೈಸೂರು ಪ್ರವಾಸಕ್ಕೆ ಹೋಗಲು ತೀರ್ಮಾನಿಸಿದ್ದೇವು. ಇದನ್ನು ಬಂಡಾಯ ಎಂದು ಬಿಂಬಿಸುವುದು ಸರಿಯಲ್ಲ. ಅಲ್ಲದೆ ಮೈಸೂರಿನಲ್ಲಿ ಮಹಿಳಾ ದಸರಾ ಉದ್ಘಾಟನೆ ನಾನೇ ಮಾಡಬೇಕಿತ್ತು. ಆದರೆ ಬಾಯ್ಲರ್ ಉದ್ಘಾಟನೆ ಮಾಡಬೇಕಿತ್ತು. ಸಹೋದರ ಕರೆದ ಅದಕ್ಕೆ ನಾನು ಬೆಳಗಾವಿಗೆ ಮರಳಿ ನಂತರ ಭದ್ರಾವತಿಗೆ ಹೋದೆ ಎಂದರು.

ಮೈಸೂರು ಪ್ರವಾಸ ಕ್ಯಾನ್ಸಲ್ ಆಗಿದ್ದೇಕೆ ಎಂದು ನನಗೆ ಗೊತ್ತಿಲ್ಲ, ಸತೀಶ್ ಅವರನ್ನು ಕೇಳಿ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಗೆ ಬಂದಾಗ ಯಾರದರೂ ಶಾಸಕರು ಸ್ವಾಗತಕ್ಕೆ ಬರಬೇಕಿತ್ತು ಎಂದರು.
ಇನ್ನೂ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಅಂತಾ ಸತೀಶ್ ಹೇಳ್ತಾನೆ ಅವರ ಗುಂಪು ಬೇರೆ ನಮ್ಮ ಗುಂಪು ಬೇರೆ ಅಂತಾ ಸತೀಶ್ ಜಾರಕಿಹೊಳಿ ಹೇಳಿದರೂ ಒಂದು ಪಕ್ಷ ಅಂದ್ರೆ ಬಣಗಳು ಇರುತ್ತವೆ. ಜೆಡಿಎಸ್‌ನಲ್ಲಿ ಎರಡು ಬಣ, ಬಿಜೆಪಿಯಲ್ಲಿ ಮೂರು ಬಣಗಳಿವೆ ಅಂತಾ ಹೇಳುವ ಮೂಲಕ ಬಣ ರಾಜಕಾರಣ ಒಪ್ಪಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣವಿದೆ ಅಂತಾ ಒಪ್ಪಿಕೊಂಡಿದ್ದಾರೆ. ಅತ್ತ ನನ್ನ ಮೌನ ನನ್ನ ವಿಕ್ನೆಸ್ ಅಲ್ಲಾ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ ಅವರು ನಮ್ದು ಏನೂ ಇಲ್ಲ. ಸುತ್ತಿ ಹಾಕಿ ಯಾಕೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ತೆಗೆದುಕೊಂಡು ಹೋಗ್ತೀರಾ. ಲಕ್ಷ್ಮೀ ಹೆಬ್ಬಾಳ್ಕರ್ ವಿರೋಧ ಮಾಡೊದಾದರೆ ಎಂಎಲ್ಸಿ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡ್ತಿರಲಿಲ್ಲ ಎಂದರು.
ಈಗಲೂ ಲಕ್ಷ್ಮೀ ಹೆಬ್ಬಾಳ್ಕರ್ ಗುಂಪು ನಮ್ಮ ಗುಂಪು ಬೇರೆ ಬೇರೆ ಇರಬಹುದು ಚುನಾವಣೆ ಬಂದಾಗ ನಾವು ಒಂದಾಗುತ್ತೇವೆ. ನೇರವಾಗಿ ಹೆಬ್ಬಾಳ್ಕರ್ ಗುಂಪು ಬೇರೆ ತಮ್ಮ ಗುಂಪು ಬೇರೆಯಿದೆ ಅಂತಾ ಹೇಳಿದರು. ಸರ್ಕಾರದಲ್ಲಿ ಎಲ್ಲಾ ನಾವು ಹೇಳಿದ್ದು ಆಗಬೇಕು ಅಂತೇನಿಲ್ಲ. ಒಂದೊಂದು ಸಲ ಫೇಲ್ ಆಗುತ್ತೆ. ಎಲ್ಲರ ಮಾತೂ ನಾಯಕರು ಕೇಳಬೇಕಾಗುತ್ತೆ ಎಂದು ಮಾರ್ಮಿಕವಾಗಿ ತೀರುಗೇಟು ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಡಿಕೆಶಿ ಬೆಳಗಾವಿ ಪ್ರವಾಸ ಬೆನ್ನಲ್ಲೇ ಮತ್ತೆ ಕಾಂಗ್ರೆಸ್ ಪಾಳಯದಲ್ಲಿ ಬಣ ರಾಜಕೀಯ ಕಿಚ್ಚು ಹೊತ್ತಿಕೊಂಡಿದೆ. ಸತೀಶ್, ಲಕ್ಷ್ಮೀ ಇಬ್ಬರೂ ನಮ್ಮ ಮೌನ ವಿಕ್ನೆಸ್ ಅಲ್ಲಾ ಅನ್ನೋ ಹೇಳಿಕೆ ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ಸಾಕ್ಷಿಯಾಗಲಿದೆ. ಒಟ್ಟಿನಲ್ಲಿ ಈವರೆಗೆ ಒಳಗೊಳಗೆ ಇದ್ದ ಕಿತ್ತಾಟ ಇದೀಗ ಬೀದಿಗೆ ಬಂದಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ, ಬೆಳಗಾವಿ ಬಂಡಾಯ ಬೇಗುದಿ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.












Click it and Unblock the Notifications