ವಿದೇಶಕ್ಕೆ ಹೋಗೋ ಮೋದಿಗೆ ಕರ್ನಾಟಕಕ್ಕೆ ಬರಲು ಟೈಮಿಲ್ವ?; ಸಿದ್ದು ಪ್ರಶ್ನೆ

Recommended Video

      ವಿದೇಶಕ್ಕೆ ಹೋಗೋ ಮೋದಿಗೆ ಕರ್ನಾಟಕಕ್ಕೆ ಬರಲು ಟೈಮಿಲ್ವ?; ಸಿದ್ದು ಪ್ರಶ್ನೆ | Oneindia Kannada

      ಬೆಳಗಾವಿ, ಆಗಸ್ಟ್ 28: "ರಾಜ್ಯದಲ್ಲಿ ಭೀಕರ ಪ್ರವಾಹ ಸಂಭವಿಸಿದ್ದರೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ತುರ್ತಾಗಿ 5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಮೋದಿಗೆ ವಿದೇಶಕ್ಕೆ ಹೋಗೋಕೆ ಸಮಯ ಸಿಗುತ್ತೆ, ಕರ್ನಾಟಕಕ್ಕೆ ಭೇಟಿ ನೀಡಲು ಟೈಮ್ ಇಲ್ಲವೆ?" ಎಂದು ಪ್ರಶ್ನಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

      ಪ್ರವಾಹದ ಪರಿಹಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾತನಾಡಿದ ಅವರು, "ಕೇಂದ್ರದಿಂದ ರಾಜ್ಯದ ಪ್ರವಾಹ ಪರಿಸ್ಥಿತಿಗೆ ಅನುದಾನವನ್ನು ಬಿಡುಗಡೆ ಮಾಡಬೇಕು. ಅಮಿತ್ ಶಾ, ನಿರ್ಮಲಾ ಸೀತಾರಾಂ ಕಾಟಾಚಾರಕ್ಕೆ ಇಲ್ಲಿಗೆ ಬಂದು ಹೋಗಿದ್ದಾರೆ. ನೆರೆ ಪರಿಸ್ಥಿತಿಗೆ ಬಿಜೆಪಿ ಸ್ಪಂದಿಸದೇ ಇದ್ದರೆ, ಬೀದಿಗೆ ಇಳಿದು ಹೋರಾಟ ಮಾಡ್ತಿವಿ" ಎಂದು ಎಚ್ಚರಿಕೆ ನೀಡಿದರು.

      Modi Dont Have Time To Visit Karnataka Asked Siddaramaiah In Belagavi

      ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಕುರಿತೂ ಮಾತನಾಡಿದರು. "ಇಂದಿರಾ ಕ್ಯಾಂಟೀನ್ ಯೋಜನೆ ಬಡವರಿಗಾಗಿ ಮಾಡಿದ್ದು. ಕ್ಯಾಂಟೀನ್ ನಿಲ್ಲಿಸಬಾರದು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯುತ್ತೇನೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜತಗೆ ಮಾತುಕತೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ" ಎಂದು ದೂರಿದರು.

      "ಬಿಜೆಪಿಗೆ 5 ವರ್ಷ ಸರ್ಕಾರ ನಡೆಸಲು ಜನಾಭಿಪ್ರಾಯ ಇಲ್ಲ. ಅನೈತಿಕವಾದ ಶಿಶು ಬಿಜೆಪಿ ಸರ್ಕಾರ" ಎಂದು ಆಕ್ರೋಶಗೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+