ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಸ್ವಾರ್ಥವಿಲ್ಲ: ಕತ್ತಿ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕವನ್ನು ವಿಭಜಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದಾನೆ, ಅಚಲವಾಗಿದ್ದೇನೆ. ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ. ನನ್ನ ಹೋರಾಟ ಮಾತ್ರ ಕೈಬಿಡುವುದಿಲ್ಲ ಎಂದರು.[ಕತ್ತಿ ವಿರುದ್ಧ ನಾಯಕರು ಗರಂ]
ಹೋರಾಟಗಾರರ ಮನೆತನದಲ್ಲೇ ಹುಟ್ಟಿದ ನಾನು, ಅಖಂಡ ಕರ್ನಾಟಕದ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಮಾತನಾಡುವವರಿಂದ ಪಾಠ ಕಲಿಯಬೇಕಿಲ್ಲ. ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿದರೆ ನಾನು ಸುಮ್ಮನಿರುವುದಿಲ್ಲ. ಹೋರಾಟ ಮಾಡಿಯೇ ತೀರುತ್ತೇನೆ. ಇದು ಪಕ್ಷದ ಅಜೆಂಡಾವಲ್ಲ ನನ್ನ ವೈಯಕ್ತಿಕ ಹೋರಾಟ, ಸ್ವಾರ್ಥ ಸಾಧನೆ ಏನು ಇಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಅನುವು ಮಾಡಿಕೊಡಿ ಇಷ್ಟೇ ನಮ್ಮ ಬೇಡಿಕೆ ಎಂದರು.
matte rajya vingadane bagge katti matadiddare namma pakshadavre adaru avarige nanna dikkara eddannu yava kannadiganu oppuvudilla stop it
— jaggesh (@jaggesh2) September 13, 2014 ನನ್ನ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಹೋರಾಟ ಮಾಡಿಯೇ ತೀರುತ್ತೇನೆ. ಯಾವುದೇ ರಾಜಕೀಯ ದುರು ದ್ದೇಶದಿಂದ ಈ ಹೋರಾಟದ ಹಾದಿಯನ್ನು ಹಿಡಿದಿಲ್ಲ ಎಂದರು. ಕಡೆಗಣಿಸಲಾಗಿರುವ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಬಗ್ಗೆ ಯಾರೂ ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯ. ಆದ್ದರಿಂದ ಈ ದೃಢ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ರಾಜ್ಯ ವಿಂಗಡನೆ ಕುರಿತು ಮಾತನಾಡಿದ್ದ ಮಾಜಿ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ನಟ ಮತ್ತು ಎಂಎಲ್‌ಸಿ ಸದಸ್ಯ ಜಗ್ಗೇಶ್ ಅವರು ಕಿಡಿಕಾರಿದ್ದರು.
Cinema mandi kannada bhavuta sc nalli hididare saladu kannadakke dhakke bandaga sollethabeku agale kannadambe makkalu swabhimanigalagi..
— jaggesh (@jaggesh2) September 14, 2014 ಉಮೇಶ್ ಕತ್ತಿ ಹುಳಿ ಇದ್ದಂತೆ, ಕನ್ನಡಿಗರು ಹಾಲು ಇದ್ದಂತೆ. ಹೀಗಾಗಿ ಕತ್ತಿ ಅವರ ಬಗ್ಗೆ ಎಚ್ಚರದಿಂದಿರಬೇಕು. ಅಖಂಡ ಕರ್ನಾಟಕವನ್ನು ಒಡೆಯುವ ಮಾತುಗಳನ್ನಾಡುತ್ತಿರುವ ಉಮೇಶ್ ಕತ್ತಿ ಅವರಂತಹವರ ಬಗ್ಗೆ ನಾವು ಎಚ್ಚರದಿಂದಿರಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.












Click it and Unblock the Notifications