ಗೋವಾ ಸಚಿವರು ಸುಳ್ಳು ಹೇಳುತ್ತಿದ್ದಾರೆ:ಎಂ.ಬಿ.ಪಾಟೀಲ್
ಬೆಳಗಾವಿ, ಜನವರಿ 15: ಗೋವಾ ನೀರಾವರಿ ಸಚಿವ ವಿನೋದ ಪಾಳೇಕರ ಶನಿವಾರ ಬೆಳಗಾವಿಯ ಕಣಕುಂಬಿಗೆ ಭೇಟಿ ನೀಡಿ ಕಳಸಾ ನಾಲಾ ಕಾಮಗಾರಿ ಪರಿಶೀಲಿಸಿ ಕರ್ನಾಟಕ ಸುಪ್ರಿಂ ಆದೇಶ ದಿಕ್ಕರಿಸಿ ಕಾಮಗಾರಿ ಮಾಡುತ್ತಿದೆ ಎಂದು ಆರೋಫ ಮಾಡಿದ ಬೆನ್ನಲ್ಲೆ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಕಳಸಾ ನಾಲಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಸಮಯ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್ ಅವರು ಗೋವಾ ರಾಜ್ಯದ ಆರೋಪದಂತೆ ಕಳಸಾ ನಾಲಾದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ, ಗೋವಾ ಸಚಿವ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಮಹದಾಯಿಯಿಂದ ಲಭ್ಯವಿರುವ ಒಟ್ಟು 200 ಟಿಎಂಸಿ ಅಡಿ ನೀರಿನಲ್ಲಿ 50 ಟಿಎಂಸಿ ಅಡಿ ನೀರು ರಾಜ್ಯದಲ್ಲಿ ಉತ್ಪತ್ತಿಯಾಗುತ್ತದೆ, ಗೋವಾ ಕೇವಲ 7 ಟಿಎಂಸಿ ಬಳಸಿ ಉಳಿದ ನೀರನ್ನು ಸಮುದ್ರದ ಪಾಲು ಮಾಡುತ್ತದೆ ಎಂದು ವಿವರಿಸಿದರು.
ನಾವು ಡ್ಯಾಮ್ ನಿರ್ಮಿಸಿಲ್ಲ. ಎರಡು ತಡೆಗೋಡೆ ನಿರ್ಮಿಸಲಾಗಿದೆ ಅಷ್ಟೆ ಇದರಿಂದ ನೀರು ನಮ್ಮ ಕಡೆ ಹರಿಯಲು ಸಾಧ್ಯವಿಲ್ಲ. ನೀರು ಬಳಸಬೇಕಾದರೆ ಪಂಪ್ ಹೌಸ್ ನಿರ್ಮಾಣ ಮಾಡಬೇಕಾಗುತ್ತದೆ. ಗೋವಾ ನೀರಾವರಿ ಸಚಿವ ವಿನೋದ ಪಾಳೇಕರ ಅವರು ಹಳೆಯ ಕಾಮಗಾರಿ ಪರಿಶೀಲಿಸಿ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸಿದ್ದಾರೆ ಎಂದರು.
ಎಂ.ಬಿ.ಪಾಟೀಲ್ ಭೇಟಿ ಸಮಯ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಅಶೋಕ ಪಟ್ಟಣ, ಗಣೇಶ ಹುಕ್ಕೇರಿ ಹಾಜರಿದ್ದರು.

ಸ್ವಾಭಿಮಾನ ಕೆಣಕುವ ಹೇಳಿಕೆ
ಗೋವಾ ಸಚಿವರು ರಾಜ್ಯಕ್ಕೆ ಆಗಮಿಸಿದ ಸಂದರ್ಭ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ . ಶಿಷ್ಟಾಚಾರ ಪ್ರಕಾರ ಸ್ಥಳೀಯ ಜನಪ್ರತಿನಿಧಿಗಳನ್ನು ಕೆಳಿಕೊಂಡು ಬರಬೇಕು ಇದಲ್ಲದೇ ರಾಜ್ಯದ ಜನರ ಸ್ವಾಭಿಮಾನ ಕೆಣಕುವಂತಹ ಹೇಳಿಕೆ ನೀಡಿದ್ದಾರೆ, ಕೂಡಲೆ ಗೋವಾ ಸಚಿವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಎಂ.ಬಿ.ಪಾಟೀಲ್ ಒತ್ತಾಯಿಸಿದರು.

ಕ್ಷಮೆ ಕೇಳಲೇ ಬೇಕು
ಕನ್ನಡಿಗರು ಹರಾಮಿಗಳು ಎಂದು ಗೋವಾ ಸಚಿವ ನೀಡಿರುವ ಹೇಳಿಕೆಗೆ ತೀರ್ವ ಆಕ್ರೋಶ ವ್ಯಕ್ತಪಡಿಸಿ ಗೋವಾ ಸಚಿವ ಬಳಿಸಿದ ಶಬ್ಧ ಕೆಟ್ಟ ಬಳಸಿದ್ದಾರೆ ಎಂದ ಅವರು ಕನ್ನಡಿಗರ ಸ್ವಾಭಿಮಾನ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.

ಕಠಿಣ ನಿರ್ಧಾರ ಕೈಗೊಳ್ಳುತ್ತೇವೆ
ಗೋವಾ ಸಚಿವ ಪಾಳೇಕರ ಬಳಸಿದ ಶಬ್ಧವನ್ನು ತೀವ್ರವಾಗಿ ಖಂಡಸುತ್ತೇವೆ ಎಂದ ಅವರು ಗೋವಾ ಸಚಿವ ಪಾಳೇಕರ ಮಾತ್ರ ಅಲ್ಲ ಅಲ್ಲಿನ ಸಿಎಂ ಮನೋಹರ ಪರಿಕ್ಕರ್ ಅವರು ಕೂಡಾ ಕನ್ನಡಿಗರ ಕ್ಷಮೆ ಕೇಳಬೇಕು. ಗೋವಾ ಸಿಎಂ ಕ್ಷಮೆ ಕೇಳದಿದ್ದರೆ ಕರ್ನಾಟಕ ಕಠಿಣವಾದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಜನರ ಗಮನ ಸೆಳೆಯಲು ಈ ಹೇಳಿಕೆ
ಗೋವಾ ಮುಖ್ಯಮಂತ್ರಿ ಮತ್ತು ಯಡಿಯೂರಪ್ಪ ಪತ್ರ ವ್ಯವಹಾರ ನಡೆಸಿದ್ದರು ಆದರೆ ಅದು ಪ್ರಚಾರ ತಂತ್ರ ಅಷ್ಟೆ ಎಂದು ಎಂ.ಬಿ.ಪಾಟೀಲ್, ಈಗ ಗೋವಾ ಜನರ ಗಮನ ಬೇರೆಡೆ ಸೆಳೆಯವ ಕೆಲಸ ಸಚಿವ ಪಾಳೇಕರ್ ಮತ್ತು ಗೋವಾ ಸರ್ಕಾರ ಮಾಡುತ್ತಿದೆ. ಮಹದಾಯಿ ನಾಟಕ ನೋಡಿ ಗೋವಾ ಜನರು ಬೇಸತ್ತಿದ್ದಾರೆ. ಅದಕ್ಕಾಗಿ ಗೋವಾ ಸಚಿವ ಈ ರೀತಿ ಕೀಳು ಹೇಳಿಕೆ ನೀಡಿದ್ದಾರೆ ಎಂದರು.

ನೀರು ಪಡೆದೇ ಪಡೆಯುತ್ತೇವೆ
ಯಡಿಯೂರಪ್ಪ ಮತ್ತು ಮನೋಹರ ಪರಿಕ್ಕರ್ ಮಾಡಿದ 'ಮಹಾ' ನಾಟಕದಲ್ಲಿ ಅಮಿತ್ ಶಾ ಸೂತ್ರಧಾರ, ಮನೊಹರ ಪರಿಕ್ಕರ , ಯಡಿಯೂರಪ್ಪ ಮುಖ್ಯ ಪಾತ್ರಧಾರಿಗಳು ಎಂದು ಸಚಿವ ಎಂ.ಬಿ.ಪಾಟೀಲ್ ಕರ್ನಾಟಕದ ಪಾಲಿನ ನೀರನ್ನು ಪಡಿಯೋಕೆ ನಾವು ಸನ್ನದ್ದರಾಗಿದ್ದಿವಿ. ಗೋವಾ ಸರ್ಕಾರದ ನಾಟಕವನ್ನು ಟ್ರಿಬ್ಯುನಲ್ ಮುಂದೆ ಬಿಚ್ಚುಡುತ್ತೇವೆ ಎಂದರು.











Click it and Unblock the Notifications