ಕನ್ನಡದ ಮಿಸ್ಟರ್ ಬೀನ್ ಗೆ ಬಿಗ್ ಬಾಸ್ ಕನಸು

ಬೆಳಗಾವಿ ಮಾರ್ಚ್ 11: ಕನ್ನಡದ ಮಿಸ್ಟರ್ ಬೀನ್ ಎಂದೇ ಖ್ಯಾತಿ ಪಡೆದ ಮಂಜುನಾಥ ರೇಳೆಕರ್ ವಾಟ್ಸಾಪ್, ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ. ಅದ್ಭುತ ನಟನೆಗೆ ಹೆಸರಾದ ಇವರ ನಟನೆಯ ವಿಡಿಯೋಗಳು ಯೂಟ್ಯೂಬ್ ನಲ್ಲೂ ಸಿಕ್ಕುತ್ತಿವೆ.

ಬಿಗ್ ಬಾಸ್ ರಿಯಾಲಿಟಿ ಶೋಕ್ಕೆ ಭಾಗವಹಿಸುವ ಮಹದಾಸೆ ಹೊಂದಿರುವ ಮಂಜುನಾಥ್ ರೇಳೆಕರ್ ಬೆಳಗಾವಿ ಜಿಲ್ಲೆಯ ಮೂಡಲಿಗಿಯವರು. ಅದಕ್ಕೆಂದೇ ಅವರ ಸ್ವವಿವರಗಳನ್ನೊಳಗೊಂಡ ದಾಖಲೆಪತ್ರ ಕಲರ್ಸ್ ಕನ್ನಡ ಕಚೇರಿಗೆ ಈಗಾಗಲೇ ತಲುಪಿದೆ. ಬಿಗ್ ಬಾಸ್ ಸ್ಪರ್ಧಿಯಾಗುವ ಅವಕಾಶಕ್ಕಾಗಿ ಅವರು ಕಾತರದಿಂದ ಕಾಯುತ್ತಿದ್ದಾರೆ.

Manjunath Relekar wants to participate in Bigboss

ಕಲರ್ಸ್ ಕನ್ನಡ ತನಗೆ ಬಿಗ್ ಬಾಸ್ ಸ್ಪರ್ಧಿಯಾಗಲು ಅವಕಾಶ ನೀಡಿದರೆ ತಾನು ಬಿಗ್ ಬಾಸ್ ಮನೆಯಲ್ಲಿರುವಷ್ಟು ದಿನ ಕನ್ನಡ ನಾಡಿನ ಜನತೆಯನ್ನು ನಕ್ಕು ನಲಿಸುತ್ತೇನೆ, ಎನ್ನುತ್ತಾರೆ ಮಂಜುನಾಥ್. ಈಗಾಗಲೆ ಹಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ನಾಡಿನ ಜನತೆಗೆ ಪರಿಚಿತರು.

Manjunath Relekar wants to participate in Bigboss

ಕನ್ನಡದ ಮಿಸ್ಟರ್ ಬೀನ್ ಬಿಗ್‌ಬಾಸ್ ಮನೆಗೆ ಆಯ್ಕೆ ಆಗ್ತಾರಾ? ಕರ್ನಾಟಕ ಜನತೆಗೆ ಮನರಂಜನೆ ನಿಡ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+