ಧರ್ಮ ಹುಟ್ಟಿರುವುದು ಮಾನವನ ಏಳಿಗೆಗೆ:ಖರ್ಗೆ

ಮುಗಳಖೋಡ, ಜನವರಿ 15: ಮುಗಳಖೋಡ ಜಿಡಗಾ ಮಠದಲ್ಲಿ ನಡೆದ ಸಂಕಲ್ಪ ಯಾತ್ರೆಗೆ ನಿನ್ನೆ ತೆರೆ ಬಿತ್ತು. ಸಮಾರೋಪ ಸಮಾರಂಭದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.

'ಧರ್ಮ ಮನುಷ್ಯನಿಗೆ ಬೇಕು, ಧರ್ಮ ಮನುಷ್ಯನ ಕಲ್ಯಾಣಕ್ಕಾಗಿ ಹುಟ್ಟಿದೆ, ಅನೇಕ ಧರ್ಮಗಳು ಹುಟ್ಟಿದ್ದು ಮನುಷ್ಯನ ಎಳಿಗೆಗಾಗಿ ಎಂದ ಅವರು ಒಂದೇ ಸೂರಿನಡಿ ಲಕ್ಷಮತದ ಭಕ್ತರನ್ನು ಕೂಡಿಸುವ ಯಾವುದೇ ಮಠವನ್ನು ನಾನು ಕರ್ನಾಟಕದಲ್ಲಿ ನೋಡಿಲ್ಲ, ಆ ಕಾರ್ಯ ಮಗಳಖೋಡ ಮಠದಲ್ಲಿ ಆಗಿದೆ' ಎಂದರು.

ಮುಗಳಖೋಡ ಮಠದೊಂದಿಗೆ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು 'ನನ್ನ ತಂದೆ ಮುಗಳಖೋಡ ಮಠದ ಪರಮ ಭಕ್ತರಾಗಿದ್ದರು, ಅವರಿಗೆ ಸಂಬಳ ಬರುತ್ತಿದ್ದಂತೆ ಮಠಕ್ಕೆ ಬಂದು ಬಿಡುತ್ತಿದ್ದರು' ಎಂದರು.

Mallikarjun kharge visited Mugulakhoda Matha

'ನನ್ನ ಜೀವನದಲ್ಲಿ ಇನ್ನೊಮ್ಮೆ ಈ ಮಠಕ್ಕೆ ಬರುತ್ತೆನೊ ಇಲ್ಲವೊ ಗೊತ್ತಿಲ್ಲ, ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ನನಗೆ ಖುಷಿ ತಂದಿದೆ ಎಂದ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ವಯಸ್ಸಾಗುತ್ತಿದೆ ಎಂದು ಒಪ್ಪಿಕೊಂಡರು.

ಡಾ.ಮುರಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮುಗಳಖೋಡ ಅಕ್ಕಪಕ್ಕದ 5 ಗ್ರಾಮಗಳನ್ನು ದತ್ತು ಸ್ವೀಕರಿಸಿ ರಾಜ್ಯದ ಮಾದರಿ ಗ್ರಾಮವನ್ನಾಗಿ ರೂಪಿಸುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+