ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಡಿ ವಿವಾದ; ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಲ್ಲಿ ಖಂಡನಾ ನಿರ್ಣಯ

|
Google Oneindia Kannada News

ಬೆಳಗಾವಿ, ಮಾರ್ಚ್ 26: ಕರ್ನಾಟಕದ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರ ಈಗ ಮತ್ತೆ ಗಡಿ ವಿಚಾರವಾಗಿ ಕ್ಯಾತೆ ತೆಗೆಯುತ್ತಿದೆ. ಮಹಾರಾಷ್ಟ್ರ ಸರ್ಕಾರದ ಸಚಿವರೇ ಗಡಿ ವಿವಾದದ ಬಗ್ಗೆ ಆಗಾಗ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಜೊತೆಗೆ ಎಂಇಎಸ್, ಶಿವಸೇನೆಯಂತಹ ಸಂಘಟನೆಗಳು ಕಿರಿಕ್ ಮಾಡುತ್ತವೇ ಇರುತ್ತವೆ.

ಇದೀಗ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲೇ ಆಡಳಿತಾರೂಢ ಶಿವಸೇನೆ ಸರ್ಕಾರ ಗಡಿ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದು, ಅಷ್ಟೇ ಅಲ್ಲದೇ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೇ ಖಂಡನಾ ನಿರ್ಣಯ ಕೈಗೊಂಡಿದೆ.

ಬಸವರಾಜ ಬೊಮ್ಮಾಯಿ ವಿರುದ್ಧ ಖಂಡನಾ ನಿರ್ಣಯ
ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದದ ಕುರಿತಂತೆ ಶುಕ್ರವಾರ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ.

Maharashtra Pass Condemning Resolution Against Karnataka CM Basavaraj Bommai Statement on Border Dispute

ಈ ವಿಷಯ ಪ್ರಸ್ತಾಪಿಸಿದ ಶಿವಸೇನೆ ಶಾಸಕ ದಿವಾಕರ್ ರಾವುಟೆ, ಅಕ್ಕಲಕೋಟೆ ಮತ್ತು ಸೊಲ್ಲಾಪುರದಂತಹ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದೆ. ಹೀಗಾಗಿ ಬೆಳಗಾವಿ, ಕಾರವಾರ ಮತ್ತು ನೆರೆಯ ಪ್ರದೇಶಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಅಂತಾ ಪ್ರಸ್ತಾಪಿಸಿದರು. ಈ ವೇಳೆ ಕರ್ನಾಟಕ ಸಿಎಂ ಹೇಳಿಕೆ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು.

ಮೇಲ್ಮನೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ
ವಿಷಯದ ಗಂಭೀರತೆಯನ್ನು ಪರಿಗಣಿಸಿ ಸಭಾಪತಿ ರಾಮರಾಜೇ ನಾಯ್ಕ್ ನಿಂಬಾಳ್ಕರ್, ""ಕರ್ನಾಟಕ ಸರಕಾರ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗಳನ್ನು ಖಂಡಿಸುವ ಪ್ರಸ್ತಾವವನ್ನು ನಾನು ಮುಂದಿಡುತ್ತೇನೆ. ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಪ್ರಕರಣದ ಮೇಲೆ ಪ್ರಭಾವ ಬೀರುವ ಹೇಳಿಕೆ ನೀಡಬಾರದಿತ್ತು,'' ಎಂದು ಹೇಳಿದರು. ಬಳಿಕ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿರುದ್ಧದ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

Maharashtra Pass Condemning Resolution Against Karnataka CM Basavaraj Bommai Statement on Border Dispute

ಏನಿದು ಗಡಿ ವಿವಾದ?
ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಗಡಿ ವಿಚಾರವಾಗಿ ಆಗಾಗ ವಿವಾದಗಳು ಏರ್ಪಡುತ್ತಲೇ ಇರುತ್ತವೆ. ಉಭಯ ರಾಜ್ಯಗಳ ನಡುವೆ 1956ರಿಂದಲೂ ಗಡಿ ಸಮಸ್ಯೆ ಇದೆ.

Recommended Video

ಇವತ್ತು Metro ಸಂಚಾರ ಸ್ಥಗಿತ:ಎಲ್ಲೆಲ್ಲಿ ಗೊತ್ತಾ? | Oneindia Kannada

1956ರಲ್ಲಿ ಹಂಚಿ ಹೋಗಿದ್ದ ಭಾಗಗಳೆಲ್ಲವನ್ನೂ ಏಕೀಕರಣಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ಬಾಂಬೆ ಪ್ರಾಂತ್ಯ ಸೇರಿ ಹಲವು ಪ್ರಾಂತ್ಯಗಳಲ್ಲಿ ಕನ್ನಡ ಮಾತನಾಡುವ ಕೆಲ ಪ್ರದೇಶಗಳು ಕರ್ನಾಟಕಕ್ಕೆ ಸೇರಿದವು. ಆದರೆ, ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲೇ ಉಳಿದವು. ಅದಾದ ಬಳಿಕ ಬೆಳಗಾವಿ, ಬೀದರ್, ಕಾರವಾರ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ವಿವಾದ ಸೃಷ್ಟಿಸಿತು.

ವರದಿ ತಿರಸ್ಕರಿಸಿದ್ದ ಮಹಾರಾಷ್ಟ್ರ
ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ 1960ರ ಜೂನ್ 5ರಂದು ನಾಲ್ವರು ಸದಸ್ಯರನ್ನೊಳಗೊಂಡ ಆಯೋಗವನ್ನು ರಚಿಸಿತು. ಇದರಲ್ಲಿ ಇಬ್ಬರು ಸದಸ್ಯರನ್ನು ಕರ್ನಾಟಕದಿಂದ ಹಾಗೂ ಇನ್ನಿಬ್ಬರು ಸದಸ್ಯರನ್ನು ಮಹಾರಾಷ್ಟ್ರದಿಂದ ಆಯ್ಕೆ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರೆ ಪರಿಣಿತರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪನ್ನು ನೀಡಿತು. ಆದರೆ, ಮಹಾರಾಷ್ಟ್ರ ಈ ಆಯೋಗದ ತೀರ್ಪನ್ನು ಒಪ್ಪದೆ, ತಿರಸ್ಕರಿಸಿತು.

ಮಹಾಜನ್ ಆಯೋಗ ರಚನೆ
ಮತ್ತೆ 1966ರಲ್ಲಿ ಮಹಾಜನ್‌ ಸಮಿತಿ ರಚಿಸಲಾಯಿತು. ಮಹಾಜನ್‌ ವರದಿಯೂ ಬೆಳಗಾವಿ ಕರ್ನಾಟಕ ರಾಜ್ಯದಲ್ಲೇ ಉಳಿಯಬೇಕು ಎಂದು ಶಿಫಾರಸು ಮಾಡಲಾಯಿತು. ಆದರೆ, ಈ ತೀರ್ಪನ್ನು ಕೂಡ ಮಹಾರಾಷ್ಟ್ರ ಒಪ್ಪಲಿಲ್ಲ. ಅಂದಿನಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಗಡಿ ವಿವಾದ ಮುಂದುವರಿದಿದೆ.

English summary
The Condemning Resolution was made in the Maharashtra Vidhan Parishad on Friday over the border dispute between Maharashtra and Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X