ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿನಯ್‌ ಕುಲಕರ್ಣಿಗೆ ಬೆಳಗಾವಿ ಜವಾಬ್ದಾರಿ: ಡಿ.ಕೆ.ಶಿವಕುಮಾರ್‌

|
Google Oneindia Kannada News

ಬೆಳಗಾವಿ, ನವೆಂಬರ್‌ 7: ಬಿಜೆಪಿಯವರು ನನ್ನನ್ನು ಕ್ರಿಮಿನಲ್‌ ಮಾಡಿದ್ದಾರೆ, ಸೋನಿಯಾ ಗಾಂಧಿ ಅವರನ್ನು ಕ್ರಿಮಿನಲ್‌ ಮಾಡಿದ್ದಾರೆ, ರಾಹುಲ್‌ ಗಾಂಧಿ ಅವರನ್ನು ಕ್ರಿಮಿನಲ್‌ ಮಾಡಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಯಾರ್ಯಾರು ಬೆಳೆಯುತ್ತಾರೆ. ಯಾರು ಬಲಿಷ್ಠರಾಗಿರುತ್ತಾರೆ. ಯಾರು ಅವರಿಗೆ ಭಯ ಎನಿಸುತ್ತಾರೆ. ಅವರ ಮೇಲೆ ಕೇಸ್‌ಗಳನ್ನು ಹಾಕುವುದು, ತೊಂದರೆ ಕೊಡುವುದನ್ನು ಬಿಜೆಪಿಯವರು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ: ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಸಚಿವ ವಿನಯ್‌ ಕುಲಕರ್ಣಿ ಹುಟ್ಟಹಬ್ಬ ಆಚರಣೆಗೆ ಬೆಳಗಾವಿಗೆ ಬಂದಿರುವ ಅವರು ಮಾತನಾಡಿ, ವಿನಯ್‌ ಕುಲಕರ್ಣಿ ಅವರ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ, ಬಿ ರಿಪೋರ್ಟ್ ಸಲ್ಲಿಸಲು ಅಂತಿಮ ಹಂತದಲ್ಲಿತ್ತು. ಹೀಗಿರುವಾಗ ರಾಜಕೀಯ ಉದ್ದೇಶದಿಂದ ಬಿಜೆಪಿ ನಾಯಕರು ಪ್ರಕರಣವನ್ನು ಬಿಜೆಪಿ ನಾಯಕರು ಸಿಬಿಐಗೆ ನೀಡಿದ್ದಾರೆ. ಇನ್ನು ಸಿಬಿಐ ಹೇಗೆ ಕೆಲಸ ಮಾಡುತ್ತದೆ ಎಂದು ನಾನು ವಿವರಿಸಿ ಹೇಳಬೇಕಿಲ್ಲ. ನಾವೇನು ಕಣ್ಣುಮುಚ್ಚಿ ಕೂತಿಲ್ಲ, ನಾನೇನು ಕಣ್ಣು ಮುಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂದು ಬಿಜೆಪಿ ಸರ್ಕಾರ ಹಾಗೂ ಸಿಬಿಐ ತನಿಖೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯವರು ಶಿಕ್ಷಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ

ಬಿಜೆಪಿಯವರು ಶಿಕ್ಷಕರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ

ಸಿಎಂ ಸಮಾವೇಶಕ್ಕೆ ಶಿಕ್ಷಕರು ಕಡ್ಡಾಯವಾಗಿ ಬರಬೇಕು ಎನ್ನುವ ಬಗ್ಗೆ ಮಾತನಾಡಿದ ಅವರು, ಬಿಜೆಪಿಯವರು ಪ್ರತಿಯೊಬ್ಬರನ್ನೂ ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಸಮಾವೇಶವನ್ನು ಜನರನ್ನು ಸೇರಿಸಿ ಮಾಡಲಿ, ಕಾರ್ಯಕರ್ತರನ್ನು ಸೇರಿಸಿ ಮಾಡಲಿ, ಅದನ್ನು ಬಿಟ್ಟು ಸಿಎಂ ಕಾರ್ಯಕ್ರಮಕ್ಕೆ ಶಿಕ್ಷಕರು ಯಾಕೆ ಬೇಕು. ಅವರು ಶಿಕ್ಷಕರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಕು. ಇವರ ಭಾಷಣವನ್ನು ಶಿಕ್ಷಕರು ಕೇಳಬೇಕು ಎಂದು ಈ ರೀತಿಯಾಗಿ ಮಾಡುತ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ದಿನ ಬೇಕಿದ್ದರೆ, ಶಿಕ್ಷಕರನ್ನು ಕರೆದು ಅವರಿಗೆ ಸನ್ಮಾನ ಅಥವಾ ಗೌರವ ನೀಡುವುದನ್ನು ಮಾಡಲಿ, ಈಗ ಯಾಕೆ ಶಿಕ್ಷಕರು ಬೇಕು ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಸೇರ್ಪಡೆಯಾದವರ ಜಿಲ್ಲಾವಾರು ಪಟ್ಟಿ ನೀಡುತ್ತೇವೆ

ಕಾಂಗ್ರೆಸ್‌ ಸೇರ್ಪಡೆಯಾದವರ ಜಿಲ್ಲಾವಾರು ಪಟ್ಟಿ ನೀಡುತ್ತೇವೆ

ಜನಾರ್ದನ್‌ ರೆಡ್ಡಿ ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್‌, ಸದ್ಯ ನನ್ನ ಬಳಿ ಯಾರು ಸಂಪರ್ಕದಲ್ಲಿಲ್ಲ. ಇವರನ್ನು ಹೊರತುಪಡಿಸಿ ಅನೇಕ ಜನರು ನನ್ನ ಸಂಪರ್ಕದಲ್ಲಿದ್ದಾರೆ. ಕೆಲವರು ಪಕ್ಷ ಸೇರ್ಪಡೆಗೆ ಅರ್ಜಿ ಹಾಕಲಿದ್ದಾರೆ. ಕೆಲವರು ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ತೆಗೆದುಕೊಳ್ಳಲಿದ್ದಾರೆ. ಅವರೆಲ್ಲಾ ಬಂದಾಗ ಜಿಲ್ಲಾವಾರು ಅದರ ಪಟ್ಟಿ ನೀಡುತ್ತೇವೆ. ನಮ್ಮ ನಾಯಕತ್ವದಲ್ಲಿ, ನಮ್ಮ ತತ್ವದಲ್ಲಿ, ನಮ್ಮ ಪಕ್ಷದಲ್ಲಿ, ನಮ್ಮ ಸಿದ್ಧಾಂತದಲ್ಲಿ, ಯಾರಿಗೆ ನಂಬಿಕೆ ಇದೆ ಅವರು ಪಕ್ಷಕ್ಕೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಲಿ ಎಂದಿದ್ದಾರೆ.

ಪಕ್ಕದ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ವಿಜಯ್‌ ಕುಲಕರ್ಣಿ ಹುಟ್ಟುಹಬ್ಬ

ಪಕ್ಕದ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ವಿಜಯ್‌ ಕುಲಕರ್ಣಿ ಹುಟ್ಟುಹಬ್ಬ

ಇನ್ನು ಕೊಲೆ ಆರೋಪ ಹೊತ್ತಿರುವ ವಿನಯ್‌ ಕುಲಕರ್ಣಿ ಹುಟ್ಟುಹಬ್ಬ ಆಚರಣೆ ಬಗ್ಗೆ ಮಾತನಾಡಿದ ಅವರು, ಅವರ ಕಾರ್ಯಕರ್ತರು ಅವರ ನಾಯಕ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಾರೆ. ಅವರು ಮಾಡಿದಂತಹ ಸೇವೆಗೆ ಆಚರಣೆ ಮಾಡುತ್ತಾರೆ. ನ್ಯಾಯಾಲಯದಲ್ಲಿ ವಿನಯ್‌ ಕುಲಕರ್ಣಿ ಅವರ ಕ್ಷೇತ್ರಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಹೀಗಾಗಿ ಪಕ್ಕದ ಕ್ಷೇತ್ರದಲ್ಲಿ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ನಾನು ಕೇಧರಾನಾಥ್‌ನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡೆ. ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು. ಅದೇ ರೀತಿ ವಿನಯ್‌ ಕುಲಕರ್ಣಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ವಿನಯ್‌ ಕುಲಕರ್ಣಿ ಶಾಸಕರಾಗಿದ್ದವರು. ಹೀಗಾಗಿ ಪಕ್ಷದಿಂದ ಬೆಳಗಾವಿ ಕ್ಷೇತ್ರದ ಜವಾಬ್ದಾರಿಯನ್ನು ವಿನಯ್‌ ಕುಲಕರ್ಣಿಯವರಿಗೆ ನೀಡಿದ್ದೇವೆ. ಅವರು ನಮ್ಮ ಉಪಾಧ್ಯಕ್ಷರು ನನ್ನ ಕೈಕೆಳಗೆ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮತ್ತೆ ಜನರ ಸಂಪರ್ಕ ಸಾಧಿಸಲು ಹುಟ್ಟುಹಬ್ಬ

ಮತ್ತೆ ಜನರ ಸಂಪರ್ಕ ಸಾಧಿಸಲು ಹುಟ್ಟುಹಬ್ಬ

ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿರುವ ವಿನಯ್ ಕುಲಕರ್ಣಿ ಇಂದು ಬೆಳಗಾವಿಯ ಕಿತ್ತೂರಿನಲ್ಲಿ ಅದ್ಧೂರಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಪ್ರಕರಣ ಹಿನ್ನೆಲೆಯಲ್ಲಿ ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಇಲ್ಲ. ಹೀಗಾಗಿ ಕಿತ್ತೂರಿನಲ್ಲಿ ಅದ್ಧೂರಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ವಿನಯ್‌ ಕುಲಕರ್ಣಿ ಮತ್ತೆ ಜನರ ಸಂಪರ್ಕ ಸಾಧಿಸಲು ಹುಟ್ಟುಹಬ್ಬದ ನೆಪದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಕುಮಾರ್ ಹಾಗೂ ವಿವಿಧ ಮಠಾಧೀಶರು ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು ಭಾಗಿಯಾಗಿದ್ದಾರೆ.

ಚಂದ್ರು ಪ್ರಕರಣ: ಭಾವೋದ್ವೇಗ ಬೇಡ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರಚಂದ್ರು ಪ್ರಕರಣ: ಭಾವೋದ್ವೇಗ ಬೇಡ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

English summary
KPCC President D.K Shivakumar Lashes Out At BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X