ಬೆಳಗಾವಿಯಲ್ಲಿ ಸಿಕ್ಕಿಬಿದ್ದವರ ಬಳಿ 36 ವಿಡಿಯೋಗಳು ಇವೆ

ಬೆಳಗಾವಿ, ಡಿಸೆಂಬರ್ 08 : ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಹಾಗೂ ರಾಜ್ಯದ ನಿರ್ಬಂಧಿತ ಸ್ಥಳಗಳ ಫೋಟೋ ತೆಗೆದ ಆರೋಪದ ಮೇಲೆ ಬಂಧಿತರಾಗಿರುವ ಮಹಮ್ಮದ್ ಎಜಾಜ್ ಬಿಹಾರಿ ಮತ್ತು ಆತನ ಸಹಚರ ಹಲವು ವಿಡಿಯೋಗಳನ್ನು ತೆಗೆದಿರುವುದು ತನಿಖೆ ವೇಳೆ ಬಯಲಾಗಿದೆ.

ಬೆಂಗಳೂರು, ಮೈಸೂರು, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಸ್ಥಳಗಳ ವಿಡಿಯೋಗಳು ಬಂಧಿತರ ಬಳಿ ಪತ್ತೆಯಾಗಿವೆ. ಬಂಧಿತರಿಂದ ಸುಮಾರು 36 ವಿಡಿಯೋ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. [ಉಗ್ರರ ಕರಿನೆರಳು ಬೆಳಗಾವಿಯ ಮೇಲೂ ಬಿತ್ತೇ?]

belagavi

ಉರ್ದು ನಿಯತಕಾಲಿಕೆ ಸಂಪಾದಕ ಮಹಮ್ಮದ್ ಎಜಾಜ್ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದು, ಪತ್ರಿಕೆಯ ಸಂಗ್ರಹಕ್ಕಾಗಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆಯಲಾಗಿದೆ ಎಂದು ಹೇಳಿದ್ದಾನೆ. ಬಿಹಾರಿ ಮತ್ತು ಮಹ್ಮದ್‌ ಹುಸೇನ್‌ ಅಲಿ ಖುರೇಷಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಳಗಾವಿ 3ನೇ ಜೆಎಂಎಫ್‌ಸಿ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. [ಉಗ್ರಗಾಮಿ ಸಂಘಟನೆ ಸೇರೋದ್ರಲ್ಲಿ ಕರ್ನಾಟಕವೇ ಫಸ್ಟ್!]

ಅಂತಿಮ ನಿರ್ಧಾರಕ್ಕೆ ಬಂದಿಲ್ಲ : ಫೋಟೋ ತೆಗೆದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಒನ್ ಇಂಡಿಯಾಕ್ಕೆ ಜೊತೆ ಮಾತನಾಡಿದ್ದು, 'ಇಲ್ಲಿಯ ತನಕ ಯಾವುದೇ ಅಂತಿಮ ತೀರ್ಮಾನಕ್ಕೆ ನಾವು ಬಂದಿಲ್ಲ. ಫೋಟೋ ಮತ್ತು ವಿಡಿಯೋಗಳನ್ನು ಏಕೆ ತೆಗೆಯಲಾಗಿದೆ? ಎಂಬ ಬಗ್ಗೆ ವಿವರವಾದ ತನಿಖೆಯ ಅಗತ್ಯವಿದೆ' ಎಂದು ಹೇಳಿದ್ದಾರೆ.

ಬಿಹಾರಿ ನೇಮಕ ಮಾಡಿಕೊಂಡಿದ್ದ : ಇದುವರೆಗಿನ ತನಿಖೆಯಿಂದ ಮಹ್ಮದ್‌ ಹುಸೇನ್‌ ಅಲಿ ಖುರೇಷಿಯನ್ನು
ಬಿಹಾರಿ ಫೋಟೋ ಮತ್ತು ವಿಡಿಯೋ ತೆಗೆಯಲು ನೇಮಕ ಮಾಡಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದನೆ ಕೃತ್ಯ ನಡೆಸಲು ವಿಡಿಯೋ ಮತ್ತು ಫೋಟೋ ತೆಗೆದಿದ್ದಾರೆ ಎಂಬ ಖಚಿತವಾದ ತೀರ್ಮಾನಕ್ಕೆ ಪೊಲೀಸರು ಇನ್ನೂ ಬಂದಿಲ್ಲ.

ಮಹಮ್ಮದ್ ಎಜಾಜ್ ಬಿಹಾರಿ ಮೂಲತಃ ಬಿಹಾರದವನಾಗಿದ್ದು ಹಲವು ವರ್ಷಗಳ ಹಿಂದೆಯೇ ಕಲಬುರಗಿಗೆ ಬಂದು ವಾಸ್ತವ್ಯ ಹೂಡಿದ್ದ. ಉರ್ದು ಪತ್ರಿಕೆಯನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪತ್ರಿಕೆಗಾಗಿ ಮಾತ್ರವಾದರೆ ನಿಷೇಧಿತ ಸ್ಥಳಗಳ ಚಿತ್ರಗಳನ್ನು ಮಾತ್ರ ಏಕೆ ಸಂಗ್ರಹಿಸುತ್ತಿದ್ದರು? ಎಂದು ಕಲಬುರಗಿ ಮತ್ತು ಬೆಳಗಾವಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+