• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಾಲ ತೀರಿಸದೇ ಹೋಗುವವಳು ನಾನಲ್ಲ, ಕುಮಟಳ್ಳಿಗೆ ಹೆಬ್ಬಾಳ್ಕರ್ ಟಾಂಗ್

|
   Lakshmi Hebbalkar ready to give answer to Mahesh Kumathalli

   ಬೆಳಗಾವಿ, ನವೆಂಬರ್ 26: ಅನರ್ಹ ಶಾಸಕ, ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನನ್ನ ಬಗ್ಗೆ ತುಂಬಾ ಮಾತನಾಡಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ. ಸಾಲವನ್ನು ಚುಕ್ತಾ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ

   ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಕುಮಟಳ್ಳಿಯವರ ಆರೋಪಗಳಿಗೆ ಜನರ ಮುಂದೆಯೇ ಉತ್ತರ ಕೊಡುತ್ತೇನೆ. ಏಕೆಂದರೆ ಅವರು ನನ್ನ ಬಗ್ಗೆ ಬಹಳ ಮಾತನಾಡಿದ್ದಾರೆ. ಉತ್ತರ ಕೊಡದೇ ಹೋಗುವುದಿಲ್ಲ ಎಂದರು.

   ತನ್ನನ್ನು ಭಾರೀ ಅಂತರದಿಂದ ಸೋಲಿಸಿದ್ದ ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆತನ್ನನ್ನು ಭಾರೀ ಅಂತರದಿಂದ ಸೋಲಿಸಿದ್ದ ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ

   ಅಥಣಿ ಉಪ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಯಾರ ಸಾಲ ಇಟ್ಟುಕೊಂಡು ಅಭ್ಯಾಸವಿಲ್ಲ, ಸಾಲ ಹೊತ್ತುಕೊಂಡು ಹೋಗುವವಳು ನಾನಲ್ಲ, ಎಲ್ಲವನ್ನು ಚುಕ್ತಾ ಮಾಡುತ್ತೇನೆ ಎಂದು ಹೇಳಿದ್ದಾರೆ.

   ನೆರೆ ಸಂಭವಿಸಿದಾಗ ನಿನ್ನ ತರಹ ನಾನು ಓಡಿ ಹೋಗಲಿಲ್ಲ, ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ. ಕಾಂಗ್ರೆಸ್ ಬಿಟ್ಟು ಹೋಗಿದ್ದರು ಪರವಾಗಿರಲಿಲ್ಲ, ಆದರೆ ಜನರ ಕಷ್ಟಗಳೊಂದಗೆ ಇದ್ದಿದ್ದರೆ ಭಲೇ ಎನ್ನುತ್ತಿದ್ದೆ. ಅವರ ಕಷ್ಟಗಳಿಗೆ ಸ್ಪಂದಿಸಿದ್ದರೆ ನೀನು ಓಡಿ ಹೋಗಿದ್ದರೂ ಜನರು ನಿನ್ನನ್ನು ಕ್ಷಮಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

   ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ತಲೆದಂಡ?ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆ: ಡಿಸಿಎಂ ಲಕ್ಷ್ಮಣ್ ಸವದಿ ತಲೆದಂಡ?

   ಹಣದ ಆಸೆಗೆ ನೀನು ಹೋಗಿದ್ದು, ಕಾಂಗ್ರೆಸ್ ಪಕ್ಷ ನಿನಗೆ ಎರಡು ಬಾರಿ ಟಿಕೆಟ್ ನೀಡಿತ್ತು, ಆದರೂ ನೀನು ಬೆನ್ನಿಗೆ ಚೂರಿ ಹಾಕಿ ಹೋದೆ ಎಂದರು. ಈಗ ಚುನಾವಣೆ ಬಂದಿದೆ ಅದಕ್ಕೆ ಮನೆ ಮನೆಗೆ ಹೋಗುತ್ತಿದ್ದೀಯಾ ಎಂದು ಟೀಕಿಸಿದರು.

   English summary
   Disqualified MLA, Athani BJP candidate Mahesh Kumaratalli Has Spoken A Lot About Me. I Have To Answer Them. Said Lakshmi Hebbalkar
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X