ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಧ್ವಜಸ್ತಂಭ ಇಡಲು ಪ್ರಯತ್ನ; ಬೆಳಗಾವಿಯಲ್ಲಿ ಹೈಡ್ರಾಮ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 28; ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜಸ್ತಂಭ ಇಡಲು ಪ್ರಯತ್ನ ನಡೆಸಲಾಗಿದೆ. ಕನ್ನಡ ಪರ ಸಂಘಟನೆಗಳ ಪ್ರಯತ್ನಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದಾರೆ.

ಸೋಮವಾರ ಏಕಾಏಕಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಧ್ವಜ ಇರುವ ಸ್ತಂಭವನ್ನು ಪಾಲಿಕೆ ಕಚೇರಿ ಮುಂದೆ ಸ್ಥಾಪನೆ ಮಾಡಲು ಪ್ರಯತ್ನ ನಡೆಸಿದರು. ಆಗ ಪೊಲೀಸರು ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಬೆಳಗಾವಿ; ಅಭ್ಯರ್ಥಿಗಳ ಚಿಹ್ನೆ ಬದಲು, ಚುನಾವಣೆ ಮುಂದೂಡಿಕೆ ಬೆಳಗಾವಿ; ಅಭ್ಯರ್ಥಿಗಳ ಚಿಹ್ನೆ ಬದಲು, ಚುನಾವಣೆ ಮುಂದೂಡಿಕೆ

ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭವನ್ನು ಕಾರ್ಯಕರ್ತರು ನಿಲ್ಲಿಸಿದರು.
ಇದರಿಂದಾಗಿ ಮಹಾನಗರ ಪಾಲಿಕೆ ಎದುರು ಹೈಡ್ರಾಮಾ ನಡೆಯಿತು. ಪೊಲೀಸರು ಮೊಳೆ, ಸುತ್ತಿಗೆಗಳನ್ನು ವಶಕ್ಕೆ ಪಡೆದುಕೊಂಡರು.

ಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷ ಬೆಳಗಾವಿ ಪಾಲಿಕೆ ಚುನಾವಣೆ ಕಣಕ್ಕಿಳಿಯಲಿದೆ ಎಐಎಂಐಎಂ ಪಕ್ಷ

Hydrama In Belgaum City Corporation Office

ಕನ್ನಡ ಹೋರಾಟಗಾರರು ಧ್ವಜಸ್ತಂಭ ಅಳವಡಿಸಿ ನಾಡಗೀತೆ ಹಾಡಿದರು. ಪೊಲೀಸರು ಅವರನ್ನು ಸ್ಥಳದಿಂದ ಕಳಿಸಲು ಪ್ರಯತ್ನ ನಡೆಸಿದರು. ಆಗ ವಾಗ್ವಾದ ಆರಂಭವಾಯಿತು. ಕ್ಷಣಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

'ಕನ್ನಡ ವಿವಿ ಉಳಿಸಿ' ಕರವೇ ಅಭಿಯಾನಕ್ಕೆ ನಾಡಿನ ಮಠಾಧೀಶರ ಬೆಂಬಲ'ಕನ್ನಡ ವಿವಿ ಉಳಿಸಿ' ಕರವೇ ಅಭಿಯಾನಕ್ಕೆ ನಾಡಿನ ಮಠಾಧೀಶರ ಬೆಂಬಲ

Hydrama In Belgaum City Corporation Office

ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ಪರ ಸಂಘಟನೆಗಳ ಸದಸ್ಯರು ಇತಿಹಾಸ ಬರೆದರು. ಪೊಲೀಸರು ಮತ್ತು ಹೋರಾಟಗಾರರ ನಡುವೆ ಜಟಾಪಟಿ ಮುಂದುವರೆದಿದೆ.

English summary
Kannada activist try to install Kannada flag in Belgaum City Corporation Office. Police not allowed for it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X