ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್

Recommended Video

      ರಮೇಶ್ ಜಾರಕಿಹೊಳಿ ಕೆನ್ನೆ ಸವರಿದ ಎಚ್ ಡಿ ಕೆ | ಈ ಕಡೆ ಸತೀಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ

      ಬೆಳಗಾವಿ, ಸೆಪ್ಟೆಂಬರ್ 15: ಬೆಳಗಾವಿ ರಾಜಕೀಯ ಜಿದ್ದಾಜಿದ್ದಿನ ಕಾದಾಟ ಶನಿವಾರ ಹೊಸ ಪ್ರಹಸನಗಳಿಗೆ ಸಾಕ್ಷಿಯಾಯಿತು.

      ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ.

      ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಅವರು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಲೇಔಟ್‌ನಲ್ಲಿ ಆಯೋಜಿಸಿರುವ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

      ರಮೇಶ್ ಕೆನ್ನೆ ಸವರಿದ ಕುಮಾರಸ್ವಾಮಿ

      ರಮೇಶ್ ಕೆನ್ನೆ ಸವರಿದ ಕುಮಾರಸ್ವಾಮಿ

      ಬೆಳಗಾವಿಗೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತೆರಳಿದ್ದರು. ತಮಗೆ ಹೂವಿನ ಬೊಕ್ಕೆ ನೀಡಿದ ರಮೇಶ್ ಅವರನ್ನು ಕುಮಾರಸ್ವಾಮಿ ನಗುತ್ತಾ ಗಲ್ಲ ಸವರಿ ಮಾತನಾಡಿಸಿದರು. ಬೊಕ್ಕೆ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಮತ್ತೆ ಎರಡೂ ಕೈಗಳಿಂದ ಕೆನ್ನೆ ಸವರಿದರು. ಇದರಿಂದ ರಮೇಶ್ ಸ್ವಲ್ಪ ಮುಜುಗರಕ್ಕೆ ಒಳಗಾದಂತೆ ಕಂಡುಬಂದರೂ ನಗುತ್ತಾ ಮಾತನಾಡಿದರು.

      ರಮೇಶ್‌ಗೆ ಆಮಂತ್ರಣವೇ ಇಲ್ಲ

      ರಮೇಶ್‌ಗೆ ಆಮಂತ್ರಣವೇ ಇಲ್ಲ

      ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಯೋಜಿಸಿರುವ ಕುಮಾರಸ್ವಾಮಿ ಅವರ ಅಭಿನಂದನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಿಲ್ಲ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ರಮೇಶ್ ಅವರ ಹೆಸರನ್ನು ಮುದ್ರಿಸಿಲ್ಲ. ಇದರಿಂದ ಈ ಇಬ್ಬರು ನಾಯಕರ ವೈಮನಸ್ಸು ಮತ್ತೆ ಬಹಿರಂಗವಾಗಿದೆ.

      ಕುಮಾರಸ್ವಾಮಿ ಅವರನ್ನು ವಿಮಾನ ನಿಲ್ದಾಣದಿಂದ ಸ್ವಾಗತಿಸಲು ರಮೇಶ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ತೆರಳಿದ್ದರು. ಆದರೆ, ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದ ಬಳಿಕ ರಮೇಶ್ ಜಾರಕಿಹೊಳಿ ಖಾಸಗಿ ಕಾರ್‌ನಲ್ಲಿ ಅಲ್ಲಿಂದ ನಿರ್ಗಮಿಸಿದರು.

      ಸತೀಶ್-ಲಕ್ಷ್ಮಿ ಅಕ್ಕಪಕ್ಕ

      ಸತೀಶ್-ಲಕ್ಷ್ಮಿ ಅಕ್ಕಪಕ್ಕ

      ಇನ್ನೊಂದೆಡೆ ಮನಸ್ತಾಪ ಹೊಂದಿದ್ದರೂ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕ ಕುಳಿತು ಅಚ್ಚರಿ ಮೂಡಿಸಿದರು. ಕಾನೂನು ವಿಶ್ವವಿದ್ಯಾಲಯದ ಕೆಎಲ್‌ಎಸ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅಕ್ಕಪಕ್ಕದ ಕುರ್ಚಿಗಳಲ್ಲಿ ಕುಳಿತು ಕೆಲ ಕಾಲ ಮಾತನಾಡಿದರು.

      ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಂಸದ ಪ್ರಕಾಶ್ ಹುಕ್ಕೇರಿ ಮುಂತಾದವರು ಭಾಗವಹಿಸಿರುವ ಈ ಕಾರ್ಯಕ್ರಮದಲ್ಲಿಯೂ ರಮೇಶ್ ಜಾರಕಿಹೊಳಿ ಪಾಲ್ಗೊಂಡಿಲ್ಲ.

      ಬಿಜೆಪಿಯವರು ಸಂಪರ್ಕಿಸಿಲ್ಲ

      ಬಿಜೆಪಿಯವರು ಸಂಪರ್ಕಿಸಿಲ್ಲ

      ಸಿದ್ದರಾಮಯ್ಯ ಅವರಿಗೂ ನಮ್ಮ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಅವರನ್ನು ರಾಜಕೀಯ ಕಾರಣಗಳಿಗೆ ಭೇಟಿ ಮಾಡುವುದಿಲ್ಲ. ಬೇರೆ ವಿಚಾರಗಳಿಗೆ ಭೇಟಿ ಮಾಡುತ್ತೇನೆ.

      ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ವಿಚಾರದಿಂದ ಸಂತೋಷವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

      ಬಿಜೆಪಿಯವರು ಸಂಪರ್ಕಿಸಿಲ್ಲ

      ಬಿಜೆಪಿಯವರು ಸಂಪರ್ಕಿಸಿಲ್ಲ

      ರಾಜ್ಯದಲ್ಲಿ ಆಪರೇಷನ್ ಕಮಲದ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗುತ್ತದೆ. ನಮಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮ್ಮನ್ನು ಬಿಜೆಪಿಯವರು ಸೇರಿದಂತೆ ಯಾರೂ ಸಂಪರ್ಕ ಮಾಡಿಲ್ಲ.

      ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆಗಳು ಆಗುವುದಿಲ್ಲ. ಐದು ವರ್ಷ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರಲಿದೆ. ನಾನು ಮೊದಲಿನಿಂದಲೂ ಕಾಂಗ್ರೆಸ್‌ ಪರ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+