ಹೆಣ್ಣೆಂದು ಪುಟ್ಟ ಕಂದನ ಚೀಲದಲ್ಲಿ ಬಿಟ್ಟು ಹೋದರು
ಬೆಳಗಾವಿ, ಜುಲೈ 29: ಹೆಣ್ಣು ಮಗು ಎಂಬ ಕಾರಣಕ್ಕೆ ಹಸುಗೂಸೊಂದನ್ನು ಬ್ಯಾಗ್ ನಲ್ಲಿ ಇಟ್ಟು ಹೋಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಚೀಲವೊಂದರಲ್ಲಿ ಪುಟ್ಟ ಕಂದಮ್ಮನನ್ನು ಇರಿಸಿ ಜಿಲ್ಲಾಸ್ಪತ್ರೆಯ ಕಟ್ಟೆಯ ಮೇಲೆ ಇಟ್ಟು ಹೋಗಿದ್ದಾರೆ. ಮಗುವಿನ ಹೊಕ್ಕಳಿಗೆ ಪ್ಲ್ಯಾಸ್ಟಿಕ್ ದಾರವನ್ನು ಕಟ್ಟಿದ್ದಾರೆ. ಮಗು ಅಳುತ್ತಿರುವ ಶಬ್ದವನ್ನು ಕೇಳಿ ಸ್ಥಳಕ್ಕೆ ಬಂದವರು ಚೀಲದೊಳಗೆ ಮಗುವಿದ್ದುದನ್ನು ನೋಡಿದ್ದಾರೆ.

ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು, ಪರಿಶೀಲಿಸಿದ್ದಾರೆ. ಸದ್ಯಕ್ಕೆ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೋಷಕರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.













Click it and Unblock the Notifications