ಒಂದೇ ಕುಟುಂಬದ ನಾಲ್ವರ ಬಲಿ ತೆಗೆದುಕೊಂಡ ವಿದ್ಯುತ್ ತಂತಿ
ರಾಮದುರ್ಗ, ಏಪ್ರಿಲ್ 4: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕೆ. ತಿಮ್ಮಾಪುರದಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಘಟನೆಯಲ್ಲಿ ಎರಡು ಎತ್ತುಗಳು ಸಹ ವಿದ್ಯುತ್ ಸ್ಪರ್ಶದಿಂದ ಶಾಕ್ ಹೊಡೆದು ಮೃತಪಟ್ಟಿವೆ.
ಮೃತಪಟ್ಟವರನ್ನು ಕೆ. ತಿಮ್ಮಾಪುರದ ರೇವಪ್ಪ ಕಲ್ಲೋಳಿ (35), ರತ್ನವ್ವ ಕಲ್ಲೋಳಿ (30), ಅವರ ಮಗ ಸಚಿನ್ (8) ಮತ್ತು ರೇವಪ್ಪ ಅವರ ಅಣ್ಣನ ಮಗ ಕೃಷ್ಣ (8) ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸುರಿದ ಮಳೆ ಮತ್ತು ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಹೆಸ್ಕಾಂ ಕಚೇರಿಗೆ ಮಾಹಿತಿ ನೀಡಿದ್ದರೂ ಅವರು ಸ್ಪಂದಿಸಿರಲಿಲ್ಲ ಎಂದು ದೂರಲಾಗಿದೆ. ಗುರುವಾರ ಮುಂಜಾನೆ ಜಮೀನಿಗೆಂದು ಕುಟುಂಬದ ಸದಸ್ಯರು ತೆರಳಿದ್ದರು. ಆಗ ಮಾರ್ಗಮಧ್ಯೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದಾರೆ. ಅದರಲ್ಲಿ ವಿದ್ಯುತ್ ಹರಿಯುತ್ತಿದ್ದರಿಂದ ಎಲ್ಲರೂ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾರೆ. ಅವರ ಜತೆಯಲ್ಲಿದ್ದ ಎತ್ತುಗಳಿಗೂ ವಿದ್ಯುತ್ ತಗುಲಿದೆ.
ಕಟಕೋಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications