ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಹತ್ಯೆ
ಬೆಳಗಾವಿ, ಫೆಬ್ರವರಿ, 15: ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (68) ಅವರನ್ನು ಇಂದು (ಫೆಬ್ರವರಿ 15) ಆಟೋ ಚಾಲಕನೊಬ್ಬ ಕೊಲೆಗೈದಿದ್ದಾನೆ. ಹಾಗಾದರೆ ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಯಾಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗೋವಾದ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರನ್ನು ಶನಿವಾರ ಅಂದರೆ ಇಂದು ಹಾಡಹಗಲೇ ಖಡೇ ಬಜಾರ್‌ನಲ್ಲಿ ಆಟೋ ಚಾಲಕ ಹಲ್ಲೈಗೈದು ಕೊಲೆ ಮಾಡಿದ್ದಾನೆ. ಇನ್ನು ಪ್ರಕರಣ ಸಂಬಂಧ ಅಟೋ ಚಾಲಕ ಆರೋಪಿ ಸುಭಾಶ್ ನಗರ ನಿವಾಸಿ ಮುಜಾಹಿನ್‌ನನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಸದ್ಯ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನದ ಹೊತ್ತಿಗೆ ಖಡಬಝರ್ ಲಾಡ್ಜ್ ಬಳಿ ಆಟೋಗೆ ಲಾವೋ ಮಾಮಲೇದಾರ್ ಕಾರು ಟಚ್ ಆಗಿದೆ. ಇದೇ ವಿಚಾರಕ್ಕೆ ಆಟೋ ಚಾಲಕ ಜಗಳಕ್ಕಿಳಿದಿದ್ದಾನೆ. ಬಳಿಕ ಆಟೋ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತ ವೇಳೆ ಆಟೋ ಚಾಲಕ ಅಲ್ಲೂ ಜಗಳ ಶುರು ಮಾಡಿದ್ದಾನೆ.
ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೋ ಮಾಮಲೇದಾರ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಗೋಮಾಂತಕ ಪಕ್ಷದಿಂದ 2012ರಲ್ಲಿ ಚುನಾಯಿತರಾಗಿದ್ದ ಲಾವೋ ಜಯ ಸಾಧಿಸಿದ್ದರು.
ವಿದ್ಯಾರ್ಥಿಯ ಕೊಲೆ: ಪ್ರೀತಿ, ಪ್ರೇಮ, ಕುಟುಂಬದ ವಿಚಾರ ಸೇರಿದಂತೆ ಹಲವು ವಿಚಾರಕ್ಕೆ ಕೊಲೆ ಮಾಡಿರುವ ಘಟನೆಗಳನ್ನು ಸಾಮಾನ್ಯವಾಗಿ ಎಲ್ಲಾರೂ ಕೇಳಿರುತ್ತೀರ. ಆದರೆ ಇದೀಗ ವಿಚಿತ್ರವೆಂಬಂತೆ ಶಾಲೆಗೆ ರಜೆ ಸಿಗಲೆಂದು 2ನೇ ತರಗತಿ ಮಗುವನ್ನು ವಿದ್ಯಾರ್ಥಿ ಕೊಲೆ ಮಾಡಿ ಘಟನೆಯೊಂದು ನಡೆದಿದೆ. ಹಾಗಾದರೆ ಎಲ್ಲಿ ಹಾಗೂ ಇದು ಬಯಲಿಗೆ ಬಂದಿದ್ದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ,
ಉತ್ತರ ಪ್ರದೇಶದ ಹತ್ರಾಸ್‌ನ ಖಾಸಗಿ ಶಾಲೆಯೊಂದರಲ್ಲಿ ಕೆಲ ತಿಂಗಳ ಹಿಂದೆ 2ನೇ ತರಗತಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆ ಆಗಿತ್ತು. ಆಗ ಶಾಲೆಯ ಯಶಸ್ಸಿಗಾಗಿ ಮಾಟ, ಮಂತ್ರ ಮಾಡಿ ಅಲ್ಲಿನ ಮ್ಯಾನೇಜರ್ ಮಗುವನ್ನು ಬಲಿ ನೀಡಿದ್ದಾನೆ ಎಂದೂ ಹೇಳಲಾಗಿತ್ತು. ಆದರೆ, ಈ ಪ್ರಕರಣದ ಹಿಂದಿನ ಅಸಲಿ ಸತ್ಯ ಏನೆಂಬುದು ಹೊರಬಿದ್ದಿದೆ.
ವಿದ್ಯಾರ್ಥಿಯನ್ನು ಬಲಿ ನೀಡಲಾಗಿಲ್ಲ. ಬದಲಿಗೆ ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ರಜೆಗೋಸ್ಕರ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಈ ವಿಷಯ ಉಲ್ಲೇಖೀಸಿ, ಶಾಲೆಯ ವಿದ್ಯಾರ್ಥಿ ಮರಣ ಹೊಂದಿದರೆ ಶಾಲೆಗಳು ರಜೆ ಘೋಷಿಸುತ್ತವೆ ಎಂಬುದಕ್ಕಾಗಿ 8ನೇ ತರಗತಿ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕೊಲೆ ಆರೋಪಿ ಬಂಧನ: ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಾಗ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋನಿಯಾಗಾಂಧಿ ನಗರದ ನಿವಾಸಿಯಾದ ಕುಮಾರ್ ಬೆಟಗೇರಿ (57) ಎಂಬಾತ ಮೃತ ವ್ಯಕ್ತಿ. ದೇವಾಂಗಪೇಟೆ ನಿವಾಸಿಯಾದ ಗೌಸ್ ಮೊಹಮ್ಮದ್ ನದಾಫ್ (40) ಎಂಬಾತ ಬಂಧಿತ ಆರೋಪಿ. ಗೌಸ್ ಮೊಹಮ್ಮದ್ ಡಿಸೆಂಬರ್ 22ರಂದು ಸುಳ್ಳ ರೋಡ್ ಇಂದ್ರಪ್ರಸ್ಥ ಲೇಔಟ್‌ನಲ್ಲಿ ಕುಮಾರ್ ಬೆಟಗೇರಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ್ ಅವರ ನೇತೃತ್ವದಲ್ಲಿ, ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆಎಸ್ ಹಟ್ಟಿ ಮತ್ತವರ ಠಾಣೆಯ ಅಧಿಕಾರಿ ಸಿಬ್ಬಂದಿಯನ್ನ ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಪ್ರಕರಣದ ಆರೋಪಿಯಾದ ದೇವಾಂಗಪೇಟೆಯ ಗೌಸ್ ಮೊಹಮ್ಮದ್ ನದಾಫ್ ಎಂಬಾತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಮೃತನಿಂದ ಸುಲಿಗೆ ಮಾಡಿದ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications