ಬೆಳಗಾವಿ ಬಿಗ್ ಬಜಾರ್ ಮೇಲೆ ಆಹಾರ ಸಂರಕ್ಷಣಾಧಿಕಾರಿಗಳ ದಾಳಿ
ಬೆಳಗಾವಿ, ಜೂನ್ 15 : ಅವಧಿ ಮೀರಿದ ಬಿಸ್ಕಟ್ ಮಾರಾಟ ಆರೋಪದಡಿ ಬೆಳಗಾವಿಯಲ್ಲಿರವ ಬಿಗ್ ಬಜಾರ್ ಮಾರ್ಕೆಟ್ ಮೇಲೆ ಗುರುವಾರ ಬೆಳಗ್ಗೆ ಆಹಾರ ಸಂರಕ್ಷಣಾಧಿಕಾರಿಗಳು ದಾಳಿ ಮಾಡಿದ್ದಾರೆ.
ಬಿಗ್ ಬಜಾರ್ ನಲ್ಲಿ ಅವಧಿ ಮೀರಿದ ಬಿಸ್ಕಟ್ ಪಾಕೇಟ್ ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಹಕರೊಬ್ಬರು ಆಹಾರ ಸಂರಕ್ಷಣಾಧಿಕಾರಿಗಳಿಗೆ ಬುಧವಾರ ಮಾಹಿತಿ ನೀಡಿದ್ದರು. ಈ ಹಿನ್ನಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಅವಧಿ ಮೀರಿದ ಟೇಸ್ಟೀ ಎಂಬ ಹೆಸರಿನ ಎರಡು ಪಾಕೇಟ್ ಬಿಸ್ಕಟನ್ನು ವಶಕ್ಕೆ ಪಡೆದು 5 ಸಾವಿರ ರು. ದಂಡ ವಿಧಿಸಿದ್ದಾರೆ.

ತಿಂಡಿ ತಿನಿಸುಗಳ ಮಾರಾಟ ಅವಧಿ ಮುಕ್ತಾಯದ ಬಳಿಕ ಅವುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಇಂತಹ ಕಾನೂನು ಬಾಹಿರವಾಗಿ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ನೀವೂ ಸಹ ಆಹಾರ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಬಹುದು.











Click it and Unblock the Notifications