• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಡಿ ಖ್ಯಾತೆ ತೆಗೆದ ಮಹಾರಾಷ್ಟ್ರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

|

ಬೆಳಗಾವಿ, ಫೆಬ್ರವರಿ 03: ಉದ್ದೇಶಪೂರ್ವಕವಾಗಿ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ ವಿರುದ್ಧ ಸುಪ್ರೀಂಕೋರ್ಟ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ನಿರ್ಣಯ ಮಾಡಲಾಗಿದೆ.

ಬೆಳಗಾವಿ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಸಹ ಮಹಾರಾಷ್ಟ್ರದ ಕೆಲವು ನಾಯಕರು ಗಡಿ ಪ್ರವೇಶಿಸಿ ಗದ್ದಲ ಎಬ್ಬಿಸುವ ಯತ್ನ ಮಾಡಿದ್ದರು. ಬೆಳಗಾವಿ ಗಡಿ ವಿವಾದ ಸುಪ್ರೀಂ ಮುಂದೆ ಇದೆ. ಹೀಗಿದ್ದಾಗಲೂ ಮಹಾರಾಷ್ಟ್ರದ ನಾಯಕರು ಗಡಿ ವಿವಾದಕ್ಕೆ ತುಪ್ಪು ಸುರಿಯುವ ಯತ್ನ ಮಾಡಿದ್ದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗಡಿ ಹಾಗೂ ಜಲ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ.ಕೆ. ಎಲ್‌. ಮಂಜುನಾಥ, 'ನಿಷೇಧದ ನಡುವೆಯೂ ಬೆಳಗಾವಿ ಗಡಿ ಪ್ರವೇಶಿಸಿದ ಮಹಾರಾಷ್ಟ್ರ ನಾಯಕರ ಮಾಹಿತಿ ಲಭ್ಯವಾಗಿದ್ದು, ಸುಪ್ರೀಂನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು' ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಸಚಿವ ಸಂಜಯ್ ರಾವತ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಶಾಸಕರುಗಳು ಉದ್ದೇಶಪೂರ್ವಕವಾಗಿ ಬೆಳಗಾವಿ ಗಡಿ ಪ್ರವೇಶಿಸಿ ಗದ್ದಲ ಎಬ್ಬಿಸಿದ್ದರು. ಬೆಳಗಾವಿ ಪೊಲೀಸರು ಅಂಥಹವರನ್ನು ವಶಕ್ಕೆ ಪಡೆದು ಮರಳಿ ಮಹಾರಾಷ್ಟ್ರಕ್ಕೆ ಕಳುಹಿಸಿತ್ತು.

English summary
Maharashtra political leaders enter Belgaum border deliberately, Karnataka organization to file condemn of court case against Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X