ಬೆಳಗಾವಿಯಲ್ಲಿ ಕೋತಿಯ ಮೃತದೇಹ ಕಂಡು ಕಣ್ಣೀರಿಟ್ಟ ಗೂಳಿ
ಬೆಳಗಾವಿ, ಮೇ 11: ಸತ್ತ ಕೋತಿಯ ಮೃತದೇಹ ಕಂಡು ಗೂಳಿ ಕಣ್ಣೀರಿಟ್ಟು ಅಂತಿಮ ವಿದಾಯ ಹೇಳಿದ ಹೃದಯಸ್ಪರ್ಶಿ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದಿದೆ.
ಅಲಂಕರಿಸಿದ ಸತ್ತ ಕೋತಿಯ ಮುಂದೆ ಗೂಳಿ ನಿಂತು ಕಣ್ಣೀರು ಹಾಕಿ ಕಾಲಿಗೆ ನಮಿಸಿರುವ ದೃಶ್ಯ ಮನ ಕಲುಕುವಂತಿತ್ತು. ಮೂಖ ಪ್ರಾಣಿಯ ರೋದನೆ ಕಂಡು ಅಲ್ಲಿದ್ದ ಜನರು ಭಾವುಕರಾದರು.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕೋತಿ ಸಾವಿಗೀಡಾಗಿತ್ತು. ಸತ್ತಿರುವ ಕೋತಿಯನ್ನು ಹೂವಿನಿಂದ ಅಲಂಕರಿಸಿ ಕುರ್ಚಿಯ ಮೇಲೆ ಕೂರಿಸಲಾಗಿತ್ತು. ಆಗ ಗೂಳಿಯು ಕೋತಿ ಮುಂದೆ ನಿಂತು ಕಣ್ಣೀರು ಹಾಕಿದ್ದು ವಿಶೇಷವಾಗಿತ್ತು.

ಇದನ್ನು ಕಂಡು ಅಲ್ಲಿಯ ಜನರು ಒಂದು ಕ್ಷಣ ಬಾಯಿ ಮೇಲೆ ಬೆರಳಿಟ್ಟು ನಿಬ್ಬೆರಗಾದರು. ನಂತರ ಸಾರ್ವಜನಿಕರಿಂದ ಕೋತಿ ಅಂತ್ಯಸಂಸ್ಕಾರ ಮಾಡಲಾಯಿತು.












Click it and Unblock the Notifications