15 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ: ಬೆಳಗಾವಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಬೆಳಗಾವಿ, ನವೆಂಬರ್ 23: ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಕಾಗವಾಡದ ಶಿರಗುಪ್ಪಿಯಲ್ಲಿ ಉಪಚುನಾವಣೆ ಪ್ರಚಾರ ನಡೆಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು ಮಾತನಾಡುತ್ತಿದ್ದರು.

"ಯಾವುದೇ ಅಪೇಕ್ಷೆ ಇಲ್ಲದೆ 17 ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರು ರಾಜಿನಾಮೆ ನೀಡಿದ್ದರಿಂದ ಇಂದು ನಿಮ್ಮ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಈ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಆಯ್ಕೆಯಾದ ಬಳಿ ಅವರನ್ನು ಮಂತ್ರಿಯಾಗಿ ಮಾಡುತ್ತೇನೆ. ಅಥಣಿಯಲ್ಲಿ ಮಹೇಶ ಕುಮಟಳ್ಳಿ ನ್ನೂ ಸಹ ಮಂತ್ರಿ ಮಾಡುತ್ತೇವೆ" ಎಂದು ಯಡಿಯೂರಪ್ಪ ಭರವಸೆ ನೀಡಿದರು.

"ಚುನಾವಣಾ ಮುಗಿದ ಬಳಿಕ ನಾನೇ ಮಹಾರಾಷ್ಟ್ರ ಸಿಎಂ ಬೇಟಿ ನೀಡಿತ್ತೆನೆ. ಕೃಷ್ಣ ನದಿಗೆ ನೀರು ಬಿಡಲು ಮನವಿ ಮಾಡಿಕೊಳ್ಳುತ್ತೇನೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ" ಎಂದು ಸಿಎಂ ಹೇಳಿದರು. "ನಿಮ್ಮ ಯಡಿಯೂರಪ್ಪ ಸಿಎಂ ಆಗಿರು ಸಂದರ್ಭದಲ್ಲಿ ವೀರಶೈವ ಸಮಾಜದ ಯಾವುದೇ ಒಂದು ಓಟು ಆಕಡೆ ಈಕಡೆ ಹೋಗದಂತೆ ನೋಡಿಕೊಳ್ಳಬೇಕು" ಎಂದು ವೀರಶೈವ ಮುಖಂಡರಿಗೆ ಬಿಎಸ್ ವೈ ಹೇಳಿದರು.

BS Yediyurappa In Belagavi Told, BJP Will Win More 15 Seats In Upcoming By elections

"ಕಾಂಗ್ರೆಸ್ ಟೀಕೆಗೆ ಟಿಪ್ಪಣಿ ಗೆಳಿಗೆ ಉತ್ತರ ಕೊಡಲ್ಲ. ಇದಕ್ಕೆ ಉತ್ತರ ಮತದಾರರೇ ಕೊಡ್ತಾರೆ. ಕಳೆದ ಚುನಾವಣೆಯಲ್ಲಿ ಹಗುರವಾಗಿ ಮಾತನಾಡಿದರು ಆದರೆ ನಾನು ಹೇಳಿದಂತೆ ಆಗಿದೆ" ಎಂದು ಅವರು ಹೇಳಿದರು. "ನೆರೆ ಸಂತ್ರಸ್ತರು ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಾಮ ಬೇಡಿಕೆ ಅವಶ್ಯಕತೆ ಅನುಸಾರ ಸ್ಥಳಾಂತರ ಮಾಡಲಾಗುತ್ತದೆ. ಪ್ರವಾಹದಿಂದ ರಸ್ತೆಗಳ ಹಾಳಾಗಿವೆ. ಅಭಿವೃದ್ಧಿಗಾಗಿ ಪ್ರಯಾಣಿಕ ಪ್ರಯತ್ನ ಮಾಡಲಾಗುತ್ತದೆ. ಚುನಾವಣಾ ಸಂದರ್ಬದಲ್ಲಿ ಯಾವುದೇ ಭರವೆ ನೀಡಲ್ಲ. ನೀರಾವರಿ, ರೈತರ ಅಭಿವೃದ್ಧಿ ಗಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. 15 ಕ್ಷೇತ್ರದಲ್ಲಿ ಆಯ್ಕೆಯಾದ ಶಾಸಕರಿಗೆ ಮಂತ್ರಿ ಸ್ಥಾನ ಕೊಡ್ತೆವಿ. ಅದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ಆ ಭರವಸೆ ನೀಡಿದ್ದೇನ" ಎಂದು ಯಡಿಯೂರಪ್ಪ ಹೇಳಿದರು.

ನಂತರ ಶಿರಗುಪ್ಪಿಯ ಕೆ ಎಲ್ ಇ ಕಾಲೇಜ್ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಅವರೊಂದಿಗೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಡಿಸಿಎಂ ಲಕ್ಷ್ಮಣ ಸವದಿ. ‌ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಡಾ. ಪ್ರಭಾಕರ್ ಕೋರೆ "ಕಾಗವಾಡ ಚುನಾವಣಾ 5 ವರ್ಷಕ್ಕೆ ಬರಬೇಕಾಗಿತ್ತು. ಆದರೆ ಉಪ ಚುನಾವಣಾ ಬಂದಿದೆ. ಕಳೆದ ಚುನಾವಣೆಯಲ್ಲಿ ಇನ್ನಷ್ಟು ಆರಿಸಿ ತಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನೆರೆ ಸಂತ್ರಸ್ತರಿಗೆ ಕರ್ನಾಟಕ ನ್ಯಾಯ ಸಮ್ಮತ ಪರಿಹಾರ ನೀಡಿದ್ದಾರೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಬೇಕಾದರೆ ಶ್ರೀಮಂತ ಪಾಟೀಲ ರನ್ನು ಆರಿಸಿ ತನ್ನಿ. ಶ್ರೀಮಂತ ಪಾಟೀಲ ರನ್ನು ಆರಿಸಿ ತಂದರೆ ಸಿಎಂ ಯಡಿಯೂರಪ್ಪ ರನ್ನು ಆರಿಸಿ ತಂದಂತೆ. ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಗೆ ಮತ ನೀಡಿ ಆರಿಸಿ ತನ್ನಿ" ಎಂದರು.

ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ ಅಂಗಡಿ, "ರಾಜ್ಯದಲ್ಲಿ ಉಪ ಚುನಾವಣಾಯಲ್ಲಿ ಬಿಜೆಪಿ ಅಭ್ಯರ್ಥಿ ಗಳಿಗೆ ಆಶೀರ್ವಾದ ಮಾಡಿ. ಮೂರು ಕ್ಷೇತ್ರದ ಅಭ್ಯರ್ಥಿಗಳ ಆರಿಸಿ ತನ್ನಿ. ರಾಜ್ಯದ ಅಭಿವೃದ್ಧಿ ಗೆ ಸಹಕಾರ ನೀಡಿ. ಯಡಿಯೂರಪ್ಪಗೆ ಬಲ ನೀಡಿ" ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, "ರಾಜ್ಯ ರಾಜಕಾರಣದಲ್ಲಿ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣ ಪ್ರಮುಖ ಪಾತ್ರವಹಿಸುತ್ತದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸ್ಥಿರವಾಗಲು ಬೆಳಗಾವಿ ರಾಜಕಾರಣ ಮುಖ್ಯ. ಯಡಿಯೂರಪ್ಪ ಸಿಎಂ ಆಗಲು ಬೆಳಗಾವಿ ರಾಜಕಾರಣ ಮುಖ್ಯ ಕಾರಣ. ಕೇಂದ್ರ ದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ನೀರಾವರಿ ಸೇರಿದಂತೆ ಅಭಿವೃದ್ಧಿ ಗಾಗಿ ಬಿಜೆಪಿ ಸರ್ಕಾರ ಆದ್ಯತೆ ನೀಡಿದೆ. ಅಭಿವೃದ್ಧಿ ಆಗಬೇಕಾದ ರೆ ಬಿಜೆಪಿ ಯಿಂದ ಮಾತ್ರ ಸಾಧ್ಯ ಎಂದು ಶೆಟ್ಟರ್" ಹೇಳಿದರು.

BS Yediyurappa In Belagavi Told, BJP Will Win More 15 Seats In Upcoming By elections

"ಶ್ರೀಮಂತ ಪಾಟೀಲ್ ತ್ಯಾಗ ದಿಂದ ಇಂದು ರಾಜ್ಯದಲ್ಲಿ ಅಧಿಕಾರ ಬಂದಿದೆ. ಯಡಿಯೂರಪ್ಪ ಸಿಎಂ ಆಗಿ ಮುಂದೆವರಿಯಲು ಶ್ರೀಮಂತ ಪಾಟೀಲ ಆರಿಸಿ ತನ್ನಿ" ಎಂದು ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿದರು.
ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ‌ಪಾಟೀಲ್ ಗೆ ಹೇಳಿದ್ದೇವೆ.

"ನಮ್ಮ ಕ್ಷೇತ್ರ ಬಿಟ್ಟು ಕೊಡುತ್ತೇವೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತಾ ಹೇಳಿದ್ದೇವೆ. ಶ್ರೀಮಂತ ಪಾಟೀಲ್ ನಮ್ಮ ಪಕ್ಷ ಕ್ಕೆ ಬಂದಿದ್ದಾರೆ‌. ಅವರಿಗೆ ಬೆಂಬಲ ನೀಡೊಣ. ಅವರನ್ನು ಆರಿಸಿ ಕೊಡೋಣ ಈ ಕ್ಷೇತ್ರದ ಅಭಿವೃದ್ಧಿ ಮಾಡೋಣ. ಶ್ರೀಮಂತ ಪಾಟೀಲ ಆಯ್ಕೆಯಾದ ಬಳಿಕ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ನಮ್ಮನ್ನು ಕಡೆಗಣಿಸುತ್ತಾರೆ ಅಂತಾ ಅನುಮಾನ ಇರಬಹುದು. ಆದರೆ ನಿಮ್ಮ ಲಕ್ಷ್ಮಣ ಸವದಿ ನಿಮಗೆ ಮಾತು ಕೊಡ್ತಾನೆ. ನಿಮ್ಮ‌ಕಾಲಲ್ಲಿ ಮುಳ್ಳು ಮುರಿದರೆ ಲಕ್ಷ್ಮಣ ಸವದಿ ಕಣ್ಣಲ್ಲಿ ನೀರು ಬರುತ್ತೆ ಅಂತಾ ತಿಳಿದುಕೊಳ್ಳಿ. ಹಳೆ ಬಿಜೆಪಿ ಹೊಸ ಬಿಜೆಪಿಎಂದು ಸವದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+