ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ : ಬಿಪಿಎನ್ ರಾವತ್
ಬೆಳಗಾವಿ, ನವೆಂಬರ್ 3 : 'ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಜಮ್ಮು ಮತ್ತು ಕಾಶ್ಮೀರ ಇಂದು ಮತ್ತು ಎಂದೆಂದಿಗೂ ಭಾರತದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ' ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವರ್ ಹೇಳಿದರು.
ಬೆಳಗಾವಿಯ ಸೈನಿಕ ತರಬೇತಿ ಶಿಬಿರಕ್ಕೆ ಶುಕ್ರವಾರ ಬಿಪಿನ್ ರಾವರ್ ಭೇಟಿ ನೀಡಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಜಮ್ಮು ಮತ್ತು ಕಾಶ್ಮೀರ ಹಿಂದೆ, ಇಂದು ಎಂದೆಂದಿಗೂ ಭಾರತದ್ದೆ, ಇದರಲ್ಲಿ ಎರಡು ಮಾತಿಲ್ಲ' ಎಂದರು.

'ಡೋಕ್ಲಾಮ್ ಗಡಿ ಪ್ರದೇಶಗಳಿಂದ ಎರಡೂ ದೇಶಗಳ ಸೈನಿಕರನ್ನು ಹಿಂಪಡೆದಿಲ್ಲ. ಭಾರತ ಮತ್ತು ಚೀನಾ ದೇಶದ ಸೈನಿಕರು ಗಡಿಯಿಂದ ಸ್ಪಲ್ಪ ಅಂತರದಲ್ಲಿದ್ದಾರೆ' ಎಂದು ಸ್ಪಷ್ಟಪಡಿಸಿದರು.

ಸೈನಿಕರ ಆತ್ಮಹತ್ಯೆ ಪ್ರಕರಣದ ಬಗೆಗಿನ ಪ್ರಶ್ನೆಗೆ ಉತ್ತರ ನೀಡಿದ ಅವರು, 'ಸೈನಿಕರು ಕೂಡಾ ಎಲ್ಲರಂತೆ ಮನುಷ್ಯರು. ಸೇನೆಯಲ್ಲಿ ಸೈನಿಕರಿಗೆ ಯಾವುದೇ ಕಿರುಕುಳವಿಲ್ಲ. ಕೆಲವೊಮ್ಮೆ ಕೌಟುಂಬಿಕ ಒತ್ತಡದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಆಗುತ್ತಿವೆ' ಎಂದರು.
'ಸೇನೆಯ ಆಧುನೀಕರಣಕ್ಕೆ ಆದ್ಯತೆ ನೀಡಲಾಗಿದೆ. ಸೇನೆಯ ಆಧುನೀಕರಣಕ್ಕೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇಲ್ಲ. ಭಾರತೀಯ ಸೇನೆ ಎಲ್ಲ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ' ಎಂದು ಹೇಳಿದರು.












Click it and Unblock the Notifications