ಕಾಂಗ್ರೆಸ್ ಶಾಸಕನ ಸಹೋದರನಿಂದ ಜೀವ ಬೆದರಿಕೆ: ಆರೋಪ
ಬೆಳಗಾವಿ, ಫೆಬ್ರವರಿ 28: ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಅವರ ಸಹೋದರ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹರ್ಷವರ್ಧನ ಪಾಟೀಲ್ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರೊಂದಿಗೆ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಅವರು ಅನಧಿಕೃತ ಕಸಾಯಿ ಖಾನೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಶಾಸಕ ಫಿರೋಜ್ ಸೇಠ್ ಸಹೋದರ ರಾಜು ಸೇಠ್ ಜೀವ ಬೆದರಿಕೆ ಒಡ್ಡಿದ್ದಾರೆ ಹಾಗೂ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.
ಸೆವೆನ್ ಸ್ಟಾರ್ ಕೋಲ್ಡ್ ಸ್ಟೋರೇಜ್ ಅನಧಿಕೃತ ಕಸಾಯಿ ಖಾನೆ ಬಗ್ಗೆ ವಕೀಲ ಹರ್ಷವರ್ಧನ್ ಪಾಟೀಲ್ ಅವರು ಅನಿಮಲ್ ವೆಲ್‌ಫೇರ್ ಬೋರ್ಡ್‌ಗೆ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮೊದಲಿಗೆ ಶಾಸಕ ಫಿರೋಜ್ ಸೇಠ್ ಸಹೋದರ ರಾಜು ಸೇಠ್ ಅವರು ಹರ್ಷವರ್ಧನ್‌ಗೆ 75 ಲಕ್ಷ ರೂಪಾಯಿ ಹಣದ ಆಮಿಷ ಒಡ್ಡಿದರು ಅದನ್ನು ತಿರಸ್ಕರಿಸಿದ ಕಾರಣ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರು ಹೇಳಿದರು.

ವಕೀಲ ಹರ್ಷವರ್ಧನ್‌ಗೆ ಬೆಂಬಲ ಸೂಚಿಸಿರುವ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಹರ್ಷವರ್ಧನ್‌ಗೆ ಭದ್ರತೆ ಕಲ್ಪಿಸುವಂತೆ ಕಮಿಷನರ್‌ಗೆ ಸೂಚಿಸಿರುವುದಾಗಿ ಹೇಳಿದರು. ಅಷ್ಟೆ ಅಲ್ಲದೆ ನಧಿಕೃತ ಕಸಾಯಿಖಾನೆ ವಿಚಾರವನ್ನ ಸಂಸತ್ತಿನ ಪ್ರಸ್ತಾಪಿಸುವೆ. ಕೇಂದ್ರ ಗೃಹಮಂತ್ರಿಗಳ ಗಮನಕ್ಕೆ ಈ ವಿಚಾರ ತರುವುದಾಗಿ ಸಂಸದ ಅಂಗಡಿ ಹೇಳಿದ್ದಾರೆ.












Click it and Unblock the Notifications