• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣೇಶನ ವಿಗ್ರಹಕ್ಕೆ ವಿದ್ಯುತ್ ಪ್ರವಹಿಸಿ ನಾಲ್ವರ ಸಾವು

By Srinath
|

ಬೆಳಗಾವಿ, ಸೆಪ್ಟೆಂಬರ್ 19: ಮುಜರಾಯಿ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ್ ಬಾಬಣ್ಣ ಹುಕ್ಕೇರಿ ಅವರು ಹೆಚ್ಚು ಆಸ್ಥೆ, ಮುತುವರ್ಜಿ ವಹಿಸಿ ಈ ಬಾರಿ ತಮ್ಮೂರಿನಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಬೇಕೆಂದು ಊರಿಗೆ ಮುಂಚೆ ಮೂರ್ನಾಲ್ಕು ಕೋಟಿ ಚಂದಾ ನೀಡಿ ತಾವೇ ಸಾರಥ್ಯವಹಿಸಿದ್ದರು. ಆದರೆ ಆ ಸಂಭ್ರಮದ ಮಧ್ಯೆ ದುರ್ಘಟನೆಯೊಂದು ನಡೆದು ಇಡೀ ಬೆಳಗಾವಿಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.

ಗಣೇಶನ ಮೆರವಣಿಗೆ ವೇಳೆ ವಿಗ್ರಹಕ್ಕೆ ಹೈಟೆನ್ಶನ್ ವಿದ್ಯುತ್ ವೈರ್ ತಗುಲಿ ಇಬ್ಬರು ಮಕ್ಕಳು, ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತೂಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬುಧವಾರ ರಾತ್ರಿ ನಡೆದಿದೆ. ಗಣಪತಿ ವಿಸರ್ಜನೆ ಉತ್ಸವದ ವೇಳೆ ಮಳೆ ಸುರಿಯುತ್ತಿದ್ದುದೂ ವಿದ್ಯುತ್ ಪ್ರವಾಹವನ್ನು ಹೆಚ್ಚಿಸಿದೆ ಎನ್ನಲಾಗಿದೆ.

ಇಲ್ಲಿನ ಸದಾಶಿವ ನಗರದ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ಕಾಂಪ್ಲೆಕ್ಸ್‌ ಎದುರಿನ ಎಪಿಎಂಸಿ ರಸ್ತೆಯಲ್ಲಿ 28 ಅಡಿ ಎತ್ತರದ ಕಾಗದದ ಗಣಪತಿಯನ್ನು ಸುರಿಯುತ್ತಿರುವ ಮಳೆಯಲ್ಲಿ ಟ್ರಾಕ್ಟರಿನಲ್ಲಿ ಕೊಂಡೊಯ್ಯುತ್ತಿರುವಾಗ ಗಣೇಶನ ಕಿರೀಟಕ್ಕೆ ವೈರ್ ತಗುಲಿ ವಿದ್ಯುತ್ ಎಲ್ಲಡೆ ಹರಿದು ವಾಹನದಲ್ಲಿದ್ದವರಿಗೆ ಶಾಕ್ ತಗುಲಿದೆ.

ಗಂಗಪ್ಪ ಮೊದಲಿ (52), ಗೀತಾ ಗಜಾನನ ಸಪ್ನೆ (42) ಮತ್ತು ಈಕೆಯ ಪುತ್ರ ಸುಜನ್ ಗಜಾನನ ಸಪ್ನೆ (10) ಸ್ಥಳದಲ್ಲಿಯೇ ಮೃತಪಟ್ಟರು. ಪ್ರಜ್ವಲ್ ಅನಿಲ ಮಾಳಿ (16) ಸಿವಿಲ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆರು ಜನರನ್ನು ಕೆಎಲ್‌ ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದುರಂತ ಸಂಭವಿಸುತ್ತಿದ್ದಂತೆ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಜನರನ್ನು ಚದುರಿಸಿ ಗಣೇಶ ವಿಗ್ರಹವನ್ನು ಮರಳಿ ಮಂಟಪಕ್ಕೆ ಕಳುಹಿಸಲಾಯಿತು. ಮಳೆ ಸುರಿಯುತ್ತಿರುವುದರಿಂದ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಸಚಿವ ಪ್ರಕಾಶ್ ಹುಕ್ಕೇರಿ ದುರಂತ ತಿಳಿದು ಕಂಬನಿ ಮಿಡಿದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belgaum Ganesha immersion procession turns tragedy electrocution 4 dead. A day of festivities turned into tragedy as four people, including a woman and two children, were electrocuted and seven others suffered burns when a Ganesha idol they were carrying for immersion on a tractor trolley came in contact with a high-tension wire here on Wednesday. The incident occurred at Sadashiv Nagar when members of Ganesh Utsav Mandal were pulling the trolley on the first main road. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more