ಬೆಳಗಾವಿ: ಆಸ್ತಿಗಾಗಿ ತನ್ನ ಇಬ್ಬರು ಸಹೋದರರನ್ನು ಕೊಂದ ಹಿರಿಯ ಸಹೋದರ
ಬೆಳಗಾವಿ, ಜುಲೈ 11 : ಸಹೋದರರ ಆಸ್ತಿ ವಿವಾದ ಇಬ್ಬರ ಸಾವಿನಲ್ಲಿ ಅಂತ್ಯಗೊಂಡಿದೆ. ಹಿರಿಯ ಸಹೋದರ ತನ್ನ ಇಬ್ಬರ ಕಿರಿಯ ಸಹೋದರರನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು (ಮಂಗಳವಾರ) ಬೆಳಗಾವಿ ತಾಲೂಕಿನ ಅಲರವಾಡ ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ವೇಳೆ ರಸೂಲ್ ಮುಲ್ಲಾ ಎನ್ನುವಾತ ತನ್ನ ಇಬ್ಬರು ಸಹೋದರರಾದ ಮಹಮ್ಮದ್ ಮುಲ್ಲಾ (40) ಗೌಸ್ ಮುಲ್ಲಾ (35) ಎನ್ನುವರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ರಸೂಲ್ ಮುಲ್ಲಾ ಎನ್ನುವಾತ ತನ್ನ ಇಬ್ಬರು ಸಹೋದರನ್ನು ಕೊಂದ ಆರೋಪಿ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಮುಲ್ಲಾ ಹಾಗೂ ಆರೋಪಿ ರಸೂಲ್ ಮುಲ್ಲಾ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.
ಇದು ವಿಕೋಪಕ್ಕೆ ತಿರುಗಿದ್ದು, ರಸೂಲ್ ಮುಲ್ಲಾ ಕೈಯಲ್ಲಿದ್ದ ಕುಡುಗೋಲಿನಿಂದ ತನ್ನ ಸಹೋದರ ಮಹಮ್ಮದ್ ಮುಲ್ಲಾನನ್ನು ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ಮಹಮ್ಮದ್ ಮುಲ್ಲಾನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದ ಮತ್ತೊಬ್ಬ ಸಹೋದರ ಗೌಸ್ ಮುಲ್ಲಾನನ್ನು ಸಹ ರಸೂಲ್ ಹತ್ಯೆ ಮಾಡಿದ್ದಾನೆ.
ಆರೋಪಿ ರಸೂಲ್ ಮುಲ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಬಗ್ಗೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ್ ಹಾಗೂ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.












Click it and Unblock the Notifications