ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ಬಜೆಟ್ ಅಧಿವೇಶನದಲ್ಲಿ ಬೆಳಗಾವಿ ಇಬ್ಭಾಗ ಘೋಷಣೆ?

By Kiran B Hegde
|
Google Oneindia Kannada News

ಬೆಂಗಳೂರು, ಜ. 9: ರಾಜ್ಯದ ಅತಿದೊಡ್ಡ ಜಿಲ್ಲೆ ಎನ್ನಿಸಿಕೊಂಡಿರುವ ಬೆಳಗಾವಿಯನ್ನು ಶೀಘ್ರ ಇಬ್ಭಾಗ ಮಾಡಲಾಗುವುದು. ಈ ಮೂಲಕ ಆಡಳಿತವನ್ನು ಜನರ ಮನೆ ಬಾಗಿಲಿಗೆ ಒಯ್ಯಲು ಯತ್ನಿಸಲಾಗುವುದು ಎಂದು ರಾಜ್ಯ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿ ಶ್ರೀನಿವಾಸ ಪ್ರಸಾದ ಈ ವಿಷಯ ತಿಳಿಸಿದರು. ಮುಂದಿನ ವಿಧಾನಸಭೆ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಇಬ್ಭಾಗ ಮಾಡುವ ಕುರಿತು ಘೋಷಣೆ ಹೊರಡಿಸಲಾಗುವುದು. ಈಗಿನ ಬೆಳಗಾವಿ ಜೊತೆಗೆ ಚಿಕ್ಕೋಡಿ ಅಥವಾ ಗೋಕಾಕ ಜಿಲ್ಲೆಯನ್ನು ರಚಿಸಲಾಗುವುದು. ಚಿಕ್ಕೋಡಿಯನ್ನೇ ಜಿಲ್ಲೆಯನ್ನಾಗಿಸಲು ಹೆಚ್ಚು ಒತ್ತಾಯ ಇದೆ ಎಂದು ಸಚಿವರು ತಿಳಿಸಿದರು. [ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ]

sp

ಪ್ರಸ್ತುತ ಬೆಳಗಾವಿಯಲ್ಲಿ 10 ತಾಲೂಕುಗಳಿವೆ. ಮಹಾನಗರ ಪಾಲಿಕೆ ಬಿಟ್ಟು 17 ನಗರ ಸಭೆಗಳಿವೆ. 20 ಪಟ್ಟಣ ಪಂಚಾಯಿತಿಗಳು ಹಾಗೂ 485 ಗ್ರಾಮ ಪಂಚಾಯಿತಿಗಳು ಇವೆ. ಆದ್ದರಿಂದ ಸುಗಮ ಆಡಳಿತಕ್ಕಾಗಿ ಹೆಚ್ಚಿನ ತಾಲೂಕು ಹಾಗೂ ಹೋಬಳಿಗಳನ್ನು ರಚಿಸಲಾಗುವುದು ಎಂದು ವಿ ಶ್ರೀನಿವಾಸ ಪ್ರಸಾದ ತಿಳಿಸಿದರು. [ಬೆಳಗಾವಿಯಲ್ಲಿ ಆತಂಕಮಯ ವಾತಾವರಣ]

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ 43 ಹೊಸ ತಾಲೂಕುಗಳನ್ನು ರಚಿಸುವ ಘೋಷಣೆ ಹೊರಡಿಸಿದ್ದರು. ಆದರೆ, ಅದಿನ್ನೂ ಜಾರಿಗೆ ಬಂದಿಲ್ಲ. [ಬೀದಿನಾಯಿಗಳಿಗೆ 5 ತಿಂಗಳ ಮಗು ಬಲಿ]

English summary
Belagavi district will be bifurcated so as to take the administration to the doorsteps of the people, Revenue Minister V. Srinivas Prasad said. The bifurcation would be announced during the coming budget session of the legislature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X