• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಳಿಗಾಲ ಅಧಿವೇಶನಕ್ಕೆ ಪ್ರಿಯಾಂಕಾ ಗಾಂಧಿ ಕರೆ ತಂದ 'ಪ್ರಭು'

By Mahesh
|

ಸುವರ್ಣ ವಿಧಾನಸೌಧ, ಡಿ.10: ಸದನದಲ್ಲಿ ಡರ್ಟಿ ಪಿಕ್ಚರ್ ವೀಕ್ಷಣೆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಅಪಖ್ಯಾತಿ ಗಳಿಸಿದ ಬಿಜೆಪಿ ನಾಯಕರ ಸಾಲಿಗೆ ಈಗ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌವಾಣ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಸುವರ್ಣ ವಿಧಾನ ಸೌಧದಲ್ಲಿ ನಡೆದಿರುವ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಬುಧವಾರ ಪ್ರಭು ಚೌವಾಣ್ ಎರಡು ಬಾರಿ ಮಾಧ್ಯಮಗಳ ಗಮನ ಸೆಳೆದರು. ಬೆಳಗ್ಗೆ ಕಸದ ಬುಟ್ಟಿಯನ್ನು ಸದನದೊಳಗೆ ತಂದು ಪ್ರತಿಭಟನೆ ನಡೆಸಿದ್ದ ಪ್ರಭು ಅವರು ಮಧ್ಯಾಹ್ನದ ವೇಳೆ ಸದನದಲ್ಲಿ ಮೊಬೈಲ್ ಫೋನ್ ದುರ್ಬಳಕೆ ಮಾಡಿಕೊಂಡ ಪ್ರಕರಣ ಬಯಲಾಗಿದೆ.

ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಶಾಸಕರಾದ ಪ್ರಭು ಚೌವಾಣ್ ಅವರು ಸದನದ ಕಲಾಪ ನಡೆಯುತ್ತಿರುವ ವೇಳೆ ಮೊಬೈಲ್ ಫೋನ್ ಬಳಕೆ ಮಾಡಿದ್ದಾರೆ. ಮೊಬೈಲ್ ಫೋನ್ ನಲ್ಲಿ ಹಿಂದಿ/ಮರಾಠಿ ಭಾಷೆಯಲ್ಲಿದ್ದ ಸುದ್ದಿಯೊಂದನ್ನು ಜೂಮ್ ಮಾಡಿ ನೋಡಿದ್ದಾರೆ.

ಈ ದೃಶ್ಯ ಖಾಸಗಿ ಸುದ್ದಿವಾಹಿನಿ ಛಾಯಾಗ್ರಾಹಕರ ಕಣ್ಣಿಗೆ ಬಿದ್ದಿದೆ. ಇವರುಗಳು ಕೂಡಾ ಶಾಸಕ ಪ್ರಭು ಅವರ ಮೊಬೈಲಿಗೆ ಜೂಮ್ ಹಾಕಿದ್ದಾರೆ. ಈ ಸಮಯಕ್ಕೆ ಸರಿಯಾಗಿ ಪ್ರಭು ಅವರ ಮೊಬೈಲ್ ಪರದೆ ಮೇಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರ ಚಿತ್ರ ಕಾಣಿಸಿಕೊಂಡಿದೆ. [ಬೆಳಗಾವಿ : ಸದನದಲ್ಲಿ ಕ್ಯಾಂಡಿ ಕ್ರಷ್ ಆಟ]

ಬಾಬ್ ಕಟ್ ಮಾಡಿಸಿಕೊಂಡು ಬಿಳಿ ಬಣ್ಣದ ಶರ್ಟ್ ಧರಿಸಿರುವ ಪ್ರಿಯಾಂಕಾ ಗಾಂಧಿ ಅವರ ಚಿತ್ರವನ್ನು ಕಂಡ ಪ್ರಭು ಅವರು ಜೂಮ್ ಮಾಡಿದ್ದಾರೆ. ಮತ್ತೊಮ್ಮೆ ಚಿತ್ರದ ಮೇಲೆ ಮೆಲ್ಲಗೆ ತಟ್ಟಿದ್ದಾರೆ. ನಂತರ ಇತರೆ ಚಿತ್ರಗಳತ್ತ ಗಮನ ಹರಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಫೋಟೋವನ್ನು ಅಸಹ್ಯ ರೀತಿಯಲ್ಲಿ ನೋಡುತ್ತಿದ್ದ ಆರೋಪ ಪ್ರಭು ಮೇಲೆ ಬಿದ್ದಿದೆ.

ಸದನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಯುವಾಗ ಶಾಸಕ ಪ್ರಭು ಚವಾಣ್ ಅವರು ಪ್ರಿಯಾಂಕಾ ಅವರ ಫೋಟೋ ಅಸಭ್ಯ ರೀತಿಯಲ್ಲಿ ನೋಡುತ್ತಿರುವ ವರ್ತನೆ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಕ್ಷಣ ಕ್ಷಣದ ಸುದ್ದಿಗಳು ಬರುತ್ತಿವೆ. ['ಡರ್ಟಿ ಪಿಕ್ಚರ್' ವೀಕ್ಷಣೆ ಸಿಬಿಐನಿಂದ ವರದಿ ಬಂದಿಲ್ಲ]

ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಬಳಸುವ ಪ್ರಭು ಅವರು ತಮ್ಮ ಮೊಬೈಲಿನ ಗ್ಯಾಲರಿಯಲ್ಲಿರುವ ಚಿತ್ರಗಳನ್ನು ನೋಡತೊಡಗುತ್ತಾರೆ. ಪ್ರಭು ಅವರ ಪಕ್ಕದಲ್ಲಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಎಚ್ ಡಿ ಕುಮಾರಸ್ವಾಮಿ ಅವರ ವಾದಗಳನ್ನು ಆಲಿಸುವಲ್ಲಿ ಮಗ್ನರಾಗಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಬುಧವಾರ ಬೆಳಗ್ಗೆ ಪಡಿತರ ಚೀಟಿ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಪ್ರಭು ಚೌವಾಣ್ ಅವರು ಪಡಿತರ ಚೀಟಿ ತುಂಬಿದ ಬುಟ್ಟಿಯನ್ನು ಸದನಕ್ಕೆ ಹೊತ್ತು ತಂದು ಎಲ್ಲರ ಗಮನ ಸೆಳೆದಿದ್ದರು. ಆದರೆ, ಮಧ್ಯಾಹ್ನದ ವೇಳೆಯಲ್ಲಿ ಮೊಬೈಲಿನಲ್ಲಿ ಪ್ರಿಯಾಂಕಾ ಗಾಂಧಿ ZOOOM ಮಾಡಿ ನೋಡಿ ಸಿಕ್ಕಿಬಿದ್ದಿದ್ದಾರೆ.

ಮತ್ತೊಂದೆಡೆ ಕೆಜೆಪಿಯಿಂದ ಹಿರೇಕೆರೂರಿನಿಂದ ಶಾಸಕರಾಗಿ ಆಯ್ಕೆಯಾಗಿ ಈಗ ಬಿಜೆಪಿ ಶಾಸಕರಾಗಿರುವ ಯು.ಬಿ ಬಣಕರ್ ಅವರು ಸದನದಲ್ಲಿ ಕ್ಯಾಂಡಿ ಕ್ರಷ್ ಆಟವಾಡುತ್ತಾ ಸಿಕ್ಕಿಬಿದ್ದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi: Aurad MLA Prabhu Chuvan caught misusing his mobile phone at Suvarna Vidhana Soudha during the assembly Session today(Dec.10). MLA Prabhu was watching Priyanka Gandhi photo in his smartphone, Another BJP MLA from Hirekerur caught playing Candy Crush Saga game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more