ಬೆಂಗಳೂರು-ಬೆಳಗಾವಿ ನಡುವೆ ಏರ್ ಬಸ್ ಸಂಚಾರ ಆರಂಭ
ಬೆಳಗಾವಿ, ಆಗಸ್ಟ್ 10 : ಬೆಂಗಳೂರು-ಬೆಳಗಾವಿ ನಡುವೆ ಏರ್ ಬಸ್ ಸಂಚಾರಕ್ಕೆ ಏರ್ ಇಂಡಿಯಾ ಚಾಲನೆ ನೀಡಿದೆ. ವಾರದಲ್ಲಿ 4 ದಿನ ಏರ್ ಬಸ್ ಎರಡು ನಗರಗಳ ನಡುವೆ ಸಂಚಾರ ನಡೆಸಲಿದೆ.
ಶುಕ್ರವಾರ ಬೆಳಗ್ಗೆ 7.30ಕ್ಕೆ ಏರ್ ಬಸ್ 319 ಬೆಳಗಾವಿಗೆ ಆಗಮಿಸಿತು. ಜಲಫಿರಂಗಿ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯತು. 122 ಆಸನವುಳ್ಳ ಏರ್‌ಬಸ್‌ನಲ್ಲಿ 83 ಜನರು ಆಗಮಿಸಿದರು.
ಬೆಳಗ್ಗೆ 9.30ಕ್ಕೆ ಏರ್ ಬಸ್ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. 104 ಜನರು ಇದರಲ್ಲಿ ಪ್ರಯಾಣ ಬೆಳೆಸಿದರು. ಇದೇ ಮೊದಲ ಬಾರಿಗೆ ಏರ್ ಇಂಡಿಯಾ ನಗರಕ್ಕೆ ಏರ್ ಬಸ್ ಸೇವೆ ಆರಂಭಿಸಿದೆ.

ಸೋಮವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರ ಎರಡು ನಗರಗಳ ನಡುವೆ ಏರ್ ಬಸ್ ಹಾರಾಟ ನಡೆಸಲಿದೆ. ಉಳಿದ ಮೂರು ದಿನಗಳ ಕಾಲ ಎಟಿಆರ್ ವಿಮಾನ ಹಾರಾಟ ನಡೆಸಲಿದೆ.
ಉಡಾನ್ ಯೋಜನೆಗೆ ಬೆಳಗಾವಿ : ಉಡಾನ್ ಯೋಜನೆಯ 3ನೇ ಹಂತಕ್ಕೆ ಬೆಳಗಾವಿ ವಿಮಾನ ನಿಲ್ದಾಣವನ್ನು ಸೇರಿಸುವ ಪ್ರಯತ್ನ ಆರಂಭವಾಗಿದೆ. ಸೆಪ್ಟೆಂಬರ್‌ನಲ್ಲಿ ಪ್ರಕ್ರಿಯೆಗಳು ಆರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.












Click it and Unblock the Notifications