• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಎಸ್ವೈಗೆ ಮುಗಿಯದ ಸಂಕಷ್ಟ: ಒಂದು ಹುದ್ದೆಗೆ ಮೂರು ಪ್ರಭಾವೀ ಸಚಿವರ ಪಟ್ಟು

|

ರಾಜಕಾರಿಣಿಗಳಿಗೆ ಆಸೆ, ಹುದ್ದೆಯ ಮೇಲಿನ ವ್ಯಾಮೋಹ ಯಾವತ್ತೂ ಕಮ್ಮಿಯಾಗದು ಎನ್ನುವುದಕ್ಕೆ ಹತ್ತು ಹಲವು ನಿದರ್ಶನಗಳು ನಮ್ಮ ಮುಂದೆ ಬಂದು ಹೋಗುತ್ತಲೇ ಇವೆ. ಅದಕ್ಕೆ ಕೊಡಬಹುದಾದ ಲೇಟೆಸ್ಟ್ ಉದಾಹರಣೆ ಯಡಿಯೂರಪ್ಪ ಸರಕಾರದ ಸಚಿವ ಸಂಪುಟ ವಿಸ್ತರಣೆ.

ಆಪರೇಶನ್ ಕಮಲದ ನಂತರದ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ, ಮೊದಲು ಸಚಿವ ಸ್ಥಾನ ಸಿಕ್ಕರೆ ಸಾಕು ಎನ್ನುತ್ತಿದ್ದವರು ನಂತರ, ಇಂತದ್ದೇ ಖಾತೆ ಬೇಕು ಎಂದು ಒತ್ತಡ ಹೇರಲು ಆರಂಭಿಸಿದರು.

ಕೊನೆಗೂ ಯತ್ನಾಳ್ ಮೇಲೆ ಕ್ರಮಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್!ಕೊನೆಗೂ ಯತ್ನಾಳ್ ಮೇಲೆ ಕ್ರಮಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್!

ಇದಾದ ಮೇಲೆ, ಹಲವು ಕಾರಣಗಳಿಂದ ಸಚಿವರಾಗದೇ ಇದ್ದವರು, ಆ ಖಾತೆ ಬೇಕು, ಈ ಖಾತೆ ಬೇಕು ಎಂದು ಒತ್ತಡವನ್ನು ಹೇರುವುದಿಲ್ಲ, ಕೊಟ್ಟ ಖಾತೆಯನ್ನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದವರು ನಂತರ ಉಲ್ಟಾ ಹೊಡೆದರು. ಇದಕ್ಕೆ ಕೊಡಬಹುದಾದ ಉದಾಹರಣೆ ಎಂ.ಟಿ.ಬಿ ನಾಗರಾಜ್.

 ಈ ಬಾರಿ ಬಜೆಟ್ ಕೊರತೆ ಇರಲಿದೆ ಎಂದ ಸಿಎಂ ಯಡಿಯೂರಪ್ಪ ಈ ಬಾರಿ ಬಜೆಟ್ ಕೊರತೆ ಇರಲಿದೆ ಎಂದ ಸಿಎಂ ಯಡಿಯೂರಪ್ಪ

ಡಾ.ಸುಧಾಕರ್ ಅವರೊಬ್ಬರನ್ನು ಹೊರತು ಪಡಿಸಿ, ಮಿಕ್ಕೆಲ್ಲರನ್ನೂ ಯಡಿಯೂರಪ್ಪ ಸಮಾಧಾನ ಮಾಡಿ ಕಳುಹಿಸಿದರು ಎನ್ನುವಷ್ಟರಲ್ಲಿ ಇನ್ನೊಂದು ತಲೆನೋವು ಎದುರಾಗಿದೆ. ಆದರೆ, ಈ ಬಾರಿ ಇದು ಸಚಿವ ಸ್ಥಾನಕ್ಕಾಗಿ ಅಲ್ಲ, ಬದಲಿಗೆ ಜಿಲ್ಲಾ ಉಸ್ತುವಾರಿಗಾಗಿ..

ಹಾಲೀ ಆಹಾರ ಖಾತೆಯ ಸಚಿವ ಉಮೇಶ್ ಕತ್ತಿ

ಹಾಲೀ ಆಹಾರ ಖಾತೆಯ ಸಚಿವ ಉಮೇಶ್ ಕತ್ತಿ

ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಬೆಂಗಳೂರು ನಂತರ ಅತಿಹೆಚ್ಚು ಸಚಿವರು ಇರುವುದು ಬೆಳಗಾವಿ ಜಿಲ್ಲೆಯಲ್ಲಿ. ಈ ಪಟ್ಟಿಗೆ ಮೊನ್ನೆ ಮತ್ತೊಂದು ಹಿರಿಯ ನಾಯಕರು ಸೇರ್ಪಡೆಗೊಂಡಿದ್ದರು. ಅದು, ಹುಕ್ಕೇರಿಯ ಶಾಸಕ ಮತ್ತು ಹಾಲೀ ಆಹಾರ ಖಾತೆಯ ಸಚಿವರಾಗಿರುವ ಉಮೇಶ್ ಕತ್ತಿ.

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

ಉಮೇಶ್ ಕತ್ತಿ ಸೇರ್ಪಡೆಯ ನಂತರ ಬೆಳಗಾವಿ ಜಿಲ್ಲೆಯ ಸಚಿವರ ಪೈಕಿ ಪ್ರಭಲರಾಗಿರುವವರು ಎಂದರೆ ನೀರಾವರಿ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಮತ್ತು ಡಿಸಿಎಂ ಕಮ್ ಸಾರಿಗೆ ಸಚಿವ ಲಕ್ಷ್ಮಣ ಸವದಿ. ಸದ್ಯ ಬೆಳಗಾವಿ ಜಿಲ್ಲೆಯ ಉಸ್ತುವಾರಿಯಾಗಿರುವವರು ಜಾರಕಿಹೊಳಿ. ಈಗ ಈ ಹುದ್ದೆಯ ಮೇಲೆ ಇತರಿಬ್ಬರ ಕಣ್ಣು ಬಿದ್ದಿದೆ.

ರಾಯಚೂರು ಜಿಲ್ಲಾ ಉಸ್ತುವಾರಿಯಾಗಿರುವ ಲಕ್ಷ್ಮಣ ಸವದಿ

ರಾಯಚೂರು ಜಿಲ್ಲಾ ಉಸ್ತುವಾರಿಯಾಗಿರುವ ಲಕ್ಷ್ಮಣ ಸವದಿ

ಸದ್ಯ ರಾಯಚೂರು ಜಿಲ್ಲಾ ಉಸ್ತುವಾರಿಯಾಗಿರುವ ಲಕ್ಷ್ಮಣ ಸವದಿ ಮತ್ತು ಉಮೇಶ್ ಕತ್ತಿ 'ಬೆಳಗಾವಿ ಜಿಲ್ಲಾ ಉಸ್ತುವಾರಿ' ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಎಂಟು ಬಾರಿ ನಾನು ಶಾಸಕನಾಗಿದ್ದೇನೆ, ಪಕ್ಷದಲ್ಲಿ ಹಿರಿಯನಿದ್ದೇನೆ ಆ ಹುದ್ದೆ ನನಗೆ ನೀಡಬೇಕು ಎನ್ನುವ ಪಟ್ಟನ್ನು ಕತ್ತಿ ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

  ರಾಜ್ಯದಲ್ಲಿ ಗಣಿಗಾರಿಕೆ ಅವಶ್ಯಕತೆ ಇದೆ, ಆದ್ರೆ illegal mining ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- CM BSY | Oneindia Kannada
  ಬಿಎಸ್ವೈಗೆ ಮುಗಿಯದ ಸಂಕಷ್ಟ

  ಬಿಎಸ್ವೈಗೆ ಮುಗಿಯದ ಸಂಕಷ್ಟ

  ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸವದಿ ಆ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಜಾರಕಿಹೊಳಿಯವರನ್ನು ಎದುರು ಹಾಕಿಕೊಳ್ಳಲಾಗದೇ ಸವದಿಗೆ ಮೊದಲು ಬಳ್ಳಾರಿ ಉಸ್ತುವಾರಿ ನೀಡಲಾಗಿತ್ತು. ಅದಾದ ನಂತರ, ರಾಯಚೂರು ಉಸ್ತುವಾರಿ ನೀಡಲಾಗಿತ್ತು. ಜಾರಕಿಹೊಳಿಯವರಿಂದ ಆ ಹುದ್ದೆ ಕಿತ್ತುಕೊಳ್ಳುವುದು ಕಷ್ಟ ಎನ್ನುವುದು ಸವದಿ ಮತ್ತು ಕತ್ತಿಗೆ ಗೊತ್ತಿದ್ದರೂ, ಸಿಎಂಗೆ ಒತ್ತಡ ಹಾಕುವುದನ್ನು ಮುಂದುವರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  English summary
  After Cabinet Expansion CM Yediyurappa Facing Another Issue Over District Incharge Ministers Post.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X