ಬ್ಲೂ ವ್ಹೇಲ್ ಬಲೆಯಲ್ಲಿ ಬಿದ್ದ ಬೆಳಗಾವಿಯ 20 ಮಕ್ಕಳು

ಬೆಳಗಾವಿ, ಸೆಪ್ಟೆಂಬರ್ 20: ವಿವಾದಾತ್ಮಕ ಬ್ಲೂವ್ಹೇಲ್ ಗೇಮ್ ಬಲೆಗೆ ಬೆಳಗಾವಿಯ ಕೇಂದ್ರೀಯ ವಿದ್ಯಾಲಯದ 8 ರಿಂದ 10 ನೇ ತರಗತಿಯ ಸುಮಾರು 20 ಕ್ಕೂ ಹೆಚ್ಚು ಜನ ಬಿದ್ದಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಲಭಿಸಿದೆ.

ಈ ಎಲ್ಲ ಮಕ್ಕಳ ಕೈಗಳ ಮೇಲೂ ಕತ್ತರಿಸಿಕೊಂಡ ಗುರುತುಗಳಿದ್ದು, ಇದು ಬೈಸಿಕಲ್ ನಿಂದ ಬಿದ್ದು ಆದ ಗಾಯ ಎಂದು ಮಕ್ಕಳು ಶಿಕ್ಷಕರಿಗೆ ಸುಳ್ಳು ಹೇಳಿದ್ದಾರೆ. 16 ಬಾಲಕರು ಮತ್ತು 4 ಬಾಲಕಿಯರ ಕೈಮೇಲೆ ಗಾಯದ ಗುರುತುಗಳಿರುವುದು ಶಿಕ್ಷಕರಲ್ಲಿ ಅನುಮಾನ ಹುಟ್ಟಿಸಿದೆ.

20 students in Belagavi are playing blue whale game?

ಈ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ತಾವ್ಯಾರೂ ಬ್ಲೂ ವ್ಹೇಲ್ ಗೇಮ್ ಆಡುತ್ತಿಲ್ಲ, ಆದರೆ ತರಗತಿಯಲ್ಲಿರುವ ಬೇರೆ ವಿದ್ಯಾರ್ಥಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದೇವೆಂದು ಹೇಳಿಕೊಂದಿದ್ದಾರೆ.

ಆದರೂ ಈ ಬಗ್ಗೆ ಹೆಚ್ಚಿನ ತನಿಖೆ ನಡೆವ ಅಗತ್ಯವಿದೆ ಎಂದು ಪಾಲಕರೂ, ಶಿಕ್ಷಕರೂ ಅಭಿಪ್ರಾಯಪಟ್ಟಿದ್ದಾರೆ.

ಬ್ಲೂವ್ಹೇಲ್ ಎಂಬುದು ಒಂದು ಆನ್ ಲೈನ್ ಗೇಮ್ ಆಗಿದ್ದು, 50 ಅಪಾಯಕಾರಿ ಟಾಸ್ಕ್ ಗಳನ್ನು ಹೊಂದಿರುತ್ತದೆ. ಆಟಗಾರ ತನಗೆ ತಾನೇ ಹಿಂಸೆ ಕೊಟ್ಟುಕೊಂಡು, ಕೊನೆಯ ಟಾಸ್ಕ್ ನಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಯುವ ಜನಾಂಗವನ್ನು ಆತ್ಮಹತ್ಯೆಗೆ ಪ್ರಚೋದಿಸುವ ರಷ್ಯಾ ಮೂಲದ ಈ ವಿಚಿತ್ರ, ಮಾರಣಾಂತಿಕ ಆಟದ ಕುರಿತು ಜಗತ್ತಿನಾದ್ಯಂತ ವಿರೋಧ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+