1512 ಕಾಲೇಜು ಉಪನ್ಯಾಸಕರ ನೇಮಕಕ್ಕೆ ಕ್ರಮ: ಕುಮಾರಸ್ವಾಮಿ

ಬೆಳಗಾವಿ, ಡಿಸೆಂಬರ್ 11: 1512 ಕಾಲೇಜು ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಕುಮಾರಸ್ವಾಮಿ ಅವರು ಸದನಕ್ಕೆ ತಿಳಿಸಿದರು.

ಸದನದಲ್ಲಿ ಸಾಗರದ ಹಾಲಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ 1204 ಉಪನ್ಯಾಸಕರ ನೇಮಕಾತಿ ಪೂರ್ಣಗೊಳಿಸಲಾಗಿದೆ. ಉಳಿದ ಸ್ಥಾನಗಳಿಗೆ ನೇಮಕ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದರು.

2007ರ ಶಿಕ್ಷಕರ ವರ್ಗಾವಣೆ ಅಧಿನಿಯಮ ಅನುಸಾರ 10 ವರ್ಷ ಮೇಲ್ಪಟ್ಟು ಎ ವಲಯದಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕರನ್ನು ಶೇ.5ರ ಮಿತಿ ಒಳಪಟ್ಟು ಗ್ರಾಮೀಣ ಭಾಗದ ಸಿ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ರೀತಿ 596 ಉಪನ್ಯಾಸಕರನ್ನು ವರ್ಗಾವಣೆ ಮಾಡಲಾಗಿದೆ. ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಿಸಲು 2997 ಅತಿಥಿ ಉಪನ್ಯಾಸಕರನ್ನು ನಿಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

1512 college lecturers will be appointed soon: Kumaraswamy

ಈಗ ನೇಮಕಾತಿ ಮಾಡಿಕೊಂಡಿರುವ 1204 ಉಪನ್ಯಾಸಕರು ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ ನೌಕರಿಗೆ ಹಾಜರಾಗುತ್ತಾರೆ ಎಂದು ಹೇಳಿದರು. ಈ ನಡುವೆ ಶಾಸಕರೊಬ್ಬರು ಎದ್ದು 'ವಿನಾಕಾರಣ ವರ್ಗಾವಣೆ ಮಾಡಿಸಿಕೊಂಡಿರುವ ಉಪನ್ಯಾಸಕರ ಪಟ್ಟಿ ಇದೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೆ' ಎಂದರು. ಇದಕ್ಕೆ ಸಿಎಂ ಅವರು ಸಕಾರಾತ್ಮಕ ಉತ್ತರ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+