ಗುಜರಾತ್‌ನಿಂದ ಖಾನಾಪುರಕ್ಕೆ ಬಂದಿದ್ದ 11 ತಬ್ಲೀಘೀಗಳು ನಾಪತ್ತೆ
ಬೆಳಗಾವಿ, ಏಪ್ರಿಲ್ 05: ದೆಹಲಿಯ ನಿಜಾಮುದ್ದಿನ್ ತಬ್ಲೀಘೀ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 24 ಯಾತ್ರಿಕರು ಬೆಳಗಾವಿ ಜಿಲ್ಲೆಯ ಖಾನಾಪುರಕ್ಕೆ ಮಾರ್ಚ್ 18 ರಂದು ಬಂದಿದ್ದರು.
ಗುಜರಾತ್ ನಿಂದ ಖಾನಾಪುರಕ್ಕೆ ಬಂದಿದ್ದ 24 ಯಾತ್ರಿಕರಲ್ಲಿ ಈಗ 11 ಜನ ತಬ್ಲೀಘೀಗಳು ನಾಪತ್ತೆಯಾಗಿದ್ದಾರೆ. ಮಾರ್ಚ್ 18 ರಿಂದ ಮಾರ್ಚ್ 31ರವರೆಗೆ ಖಾನಾಪುರದಲ್ಲೇ 24 ಯಾತ್ರಿಕರು ಇದ್ದರು.
ಖಾನಾಪುರ ಪಟ್ಟಣದ ವಿವಿಧ ಮಸೀದಿಗಳಿಗೆ ತೆರಳಿ ಸಭೆ, ಪ್ರಾರ್ಥನೆ ಮಾಡಿದ್ದರು ಎನ್ನಲಾಗಿದೆ. ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಜಿಲ್ಲಾಡಳಿತ 13 ಜನರನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿತ್ತು.

ಖಾನಾಪುರ ಪಟ್ಟಣದ ಮನೆಯೊಂದರಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಿದ್ದರು, ಪರಾರಿಯಾಗಿರುವ 11 ಜನ ತಬ್ಲೀಘೀಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.












Click it and Unblock the Notifications