ಪುಸ್ತಕ ಪ್ರೇಮಿಗಳ ನೆಚ್ಚಿನ ಪುಸ್ತಕ 'ಮಲೆಗಳಲ್ಲಿ ಮದುಮಗಳು!'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: "ಪುಸ್ತಕಗಳು ಕನ್ನಡಿಯಿದ್ದ ಹಾಗೇ. ನಿನ್ನ ಒಳಗೇನಿದೆ ಎಂಬುದನ್ನು ನೀನೇ ನೋಡಿಕೊಳ್ಳುವುದಕ್ಕೆ ಅವು ಸಾಧನ" ಇದು ಮಹಾನುಭಾವರೊಬ್ಬರ ನುಡಿ. ನಮ್ಮೊಳಗನ್ನು ಅರಿತುಕೊಳ್ಳುವುದಕ್ಕೆ ನೆರವಾಗುವ ಸ್ನೇಹಿತರಲ್ಲಿ ಹೊತ್ತಿಗೆಗಿಂತ ಉತ್ತಮ ಯಾರಿದ್ದಾರೆ?

ವರನಟ ರಾಜ್ ಜೊತೆ ರಾಷ್ಟ್ರಕವಿ ಕುವೆಂಪು: ಮತ್ತಷ್ಟು ಅಪರೂಪದ ಚಿತ್ರ

ಆಗಸ್ಟ್ 9 ಅಂದರೆ ನಿನ್ನೆ 'ವಿಶ್ವ ಪುಸ್ತಕ ಪ್ರೇಮಿಗಳ ದಿನ'. ಪ್ರತಿಪುಟದಲ್ಲೂ ಹೊಸತೇನನ್ನೂ ಕಲಿಸುವ, ಪ್ರತಿ ಅಧ್ಯಾಯದಲ್ಲೂ ಮೇರು ನೀತಿಯನ್ನು ಸ್ಫುರಿಸುವ, ಪ್ರತಿ ಪದದಲ್ಲೂ ಜೀವನ ಪ್ರೀತಿಯನ್ನು ತುಂಬುವ ಸಾಕಷ್ಟು ಪುಸ್ತಕಗಳು ನಮ್ಮ ನಡುವಲ್ಲಿವೆ. ಅವುಗಳಲ್ಲಿ ಹಲವನ್ನು ಓದಿ ಆನಂದಿಸಿದ್ದೇವೆ, ಚರ್ಚಿಸಿದ್ದೇವೆ, ಅಳವಡಿಸಿಕೊಂದಿದ್ದೇವೆ, ಅತ್ತಿದ್ದೇವೆ, ಬೈದೂ ಇದ್ದೇವೆ!

ಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನ

ಹೀಗಿರುವಾಗ ನೀವು ಓದಿದ ಅತ್ಯುತ್ತಮ ಕನ್ನಡ ಪುಸ್ತಕ ಯಾವುದು ಎಂಬ ಕುರಿತಂತೆ 'ಒನ್ ಇಂಡಿಯಾ ಕನ್ನಡ' ನಿನ್ನೆ ಫೇಸ್ ಬುಕ್ ನಲ್ಲಿ ನಿಮ್ಮ ಬಳಿ ಅಭಿಪ್ರಾಯ ಕೇಳಿತ್ತು. ಅದಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸಿ, ತಮ್ಮ ನೆಚ್ಚಿನ ಪುಸ್ತಕ ಯಾವುದು ಎಂಬ ಬಗ್ಗೆ ಬರೆದುಕೊಂಡಿದ್ದರು.

ಅವುಗಳಲ್ಲಿ ಆಯ್ದ ಕೆಲವು ನಿಮಗಾಗಿ ಇಲ್ಲಿವೆ...

ಮಲೆಗಳಲ್ಲಿ ಮದುಮಗಳು

ಮಲೆಗಳಲ್ಲಿ ಮದುಮಗಳು

ರಾಷ್ಟ್ರಕವಿ ಕುವೆಂಪು ಅವರ ಎರಡು ಕಾದಂಬರಿಗಳಲ್ಲಿ ಪ್ರಮುಖವಾದ 'ಮಲೆಗಳಲ್ಲಿ ಮದುಮಗಳು' ಕೃತಿಯನ್ನು ಅತ್ಯತ್ತಮ ಕನ್ನಡ ಕೃತಿ ಎಂದವರ ಸಂಖ್ಯೆ ಸಾಕಷ್ಟಿದೆ. ಶಿವಣ್ಣ ಲೋಕೇಶ್, ಹೇಮಾಮಾಲಿನಿ, ರಂಜನಾ ರಘು, ಅಂಬೋಜಿ ಲಕ್ಶ್ಮಿ, ಪ್ರಸಾದ್, ಮಹೇಶ್ ಸೇರಿದಂತೆ ಹಲವರು 'ಮಲೆಗಳಲ್ಲಿ ಮದುಮಗಳು' ಕೃತಿ ತಮ್ಮ ನೆಚ್ಚಿನ ಕನ್ನಡ ಕೃತಿ ಎಂದಿದ್ದಾರೆ.

ಗೃಹಭಂಗ

ಗೃಹಭಂಗ

ಕಾದಂಬರಿ ಸಾಮ್ರಾಟ್ ಎಸ್.ಎಲ್.ಭೈರಪ್ಪನವರ 'ಗೃಹಭಂಗ' ಕೃತಿಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯಿಲ್ಲ. ಪ್ರಕಾಶ್ ರಾಜಾರಾವ್, ಅಣ್ಣಪ್ಪ ಪೂಜಾರಿ, ರಂಜನಾ ರಘು ಮುಂತಾದವರು ಎಸ್.ಎಲ್.ಭೈರಪ್ಪನವರ ಗೃಹಭಂಗ ಕೃತಿ ತಮ್ಮ ನೆಚ್ಚಿನ ಕನ್ನಡ ಕೃತಿ ಎಂದು ಕಮೆಂಟ್ ಮಾಡಿದ್ದಾರೆ.

ಮೂಕಜ್ಜಿಯ ಕನಸುಗಳು

ಮೂಕಜ್ಜಿಯ ಕನಸುಗಳು

ಕಡಲತೀರದ ಭಾರ್ಗವ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ 'ಮೂಕಜ್ಜಿಯ ಕನಸುಗಳು' ಕೃತಿಯನ್ನೂ ಹಲವರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಅವರದೇ ಕೃತಿಗಳಾದ ಮರಳಿ ಮಣ್ಣಿಗೆ, ಅಳಿದ ಮೇಲೆ, ಬೆಟ್ಟದ ಜೀವ, ಪುಸ್ತಕಗಳೂ ಹಲವರಿಗೆ ನೆಚ್ಚಿನ ಪುಸ್ತಕವಾಗಿದೆ.

ಚಿದಂಬರ ರಹಸ್ಯ

ಚಿದಂಬರ ರಹಸ್ಯ

ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರ 'ಚಿದಂಬರ ರಹಸ್ಯ' ಕೃತಿಯನ್ನೂ ಹಲವರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ತೇಜಸ್ವಿ ಅವರ ಇನ್ನಿತರ ಪ್ರಮುಖ ಕೃತಿಗಳಾದ ಕರ್ವಾಲೋ, ಕಾಡಿನ ಕತೆಗಳನ್ನು ಕೆಲವರು ಮೆಚ್ಚಿಕೊಂಡಿದ್ದಾರೆ.

Government Of Karnataka Textbooks Are Filled With Errors | Oneindia Kannada
ಇತರ ಪುಸ್ತಕಗಳು

ಇತರ ಪುಸ್ತಕಗಳು

ಈ ಎಲ್ಲದರೊಟ್ಟಿಗೆ ರವಿಬೆಳಗೆರೆ, ಸುಧಾಮೂರ್ತಿ, ಯಂಡಮೂರಿ ವೀರೇಂದ್ರನಾಥ್, ಶಂಕರ ಮೊಕಾಶಿ ಪುಣೇಕರ್, ಯಶವಂತ ಚಿತ್ತಾಲರ ಕೆಲವು ಕೃತಿಗಳನ್ನೂ ಪುಸ್ತಕ ಪ್ರೇಮಿಗಳು ಕನ್ನಡದ ಅತ್ಯುತ್ತಮ ಪುಸ್ತಕ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Oneindia Kannada' has made an online poll to ask it's readers about their favourite Kannada book for world book lovers' day which was on August 9th. Here is the result of the poll. The most of the readers like Rashtrakavi Kuvempu's novel 'Malegalalalli Madumagalu' and S.L.Bhyrappa's novel 'Grihabhanga'
Please Wait while comments are loading...