ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03:ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರದಂದು ನಡೆಸಿದ ದಾಳಿ ಗುರುವಾರವೂ ಮುಂದುವರೆಯಲಿದೆ.

ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?

ಸರಿ ಸುಮಾರು 65ಕ್ಕೂ ಅಧಿಕ ಕಡೆಗಳಲ್ಲಿ 80ಕ್ಕೂ ಅಧಿಕ ಅಧಿಕಾರಿಗಳು ವಶ ಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.

ಡಿಕೆಶಿ ಬಂಧನ ಸಾಧ್ಯತೆ; ಲಾಕರ್ ನಲ್ಲಿ 10 ಕೋಟಿ ನಗದು, ಚಿನ್ನ ಪತ್ತೆ

ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಅವರ ಬೆಂಗಳೂರನ ಸದಾಶಿವನಗರದ ಮನೆಯಲ್ಲಿ ಸಿಕ್ಕಿರುವ ರಹಸ್ಯ ಲಾಕರ್ ನ ಪಾಸ್ ವರ್ಡ್ ತಿಳಿಯುವ ಯತ್ನ ನಡೆದಿದೆ. ಎರಡು ಲಾಕರ್ ಗಳಲ್ಲಿ ಕೀ ಬಳಸಿಕೊಂಡು ಸುಲಭವಾಗಿ ತೆರೆಯಲಾಗಿದ್ದು, ಒಳಗಿದ್ದ ನಗದು, ನಗ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಧಾನಸಭೆ ಚುನಾವಣೆಗೆ ಎಂಟು ತಿಂಗಳು ಬಾಕಿ ಉಳಿದಿದ್ದು, ಸರ್ಕಾರದ ಹಾಗೂ ಸಚಿವರ ವರ್ಚಸ್ಸು ಕುಗ್ಗಿಸಲು ಮತ್ತಷ್ಟು ದಾಳಿಗಳು ನಡೆಯಬಹುದು ಎಂಬ ಆತಂಕ ಹಲವಾರು ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ. ಲಾಕರ್ ನಲ್ಲಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಲಾಕರ್ ನಲ್ಲಿ ಏನಿದೆ?

ಲಾಕರ್ ನಲ್ಲಿ ಏನಿದೆ?

ಲಾಕರ್ ನಲ್ಲಿ 10 ಕೋಟಿ ನಗದು, 10 ಕೆಜಿ ಚಿನ್ನಾಭರಣ ಸಿಕ್ಕಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಲಾಕರ್ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರರಿಗೆ ಸೇರಿದ್ದು ಎನ್ನಲಾಗಿದ್ದು, ಇದರಲ್ಲಿರುವ 10 ಕೆ.ಜಿ. ಚಿನ್ನಾಭರಣವು, ನೋಟ್ ಬ್ಯಾನ್ ಗೂ ಮೊದಲೇ ಖರೀದಿಸಿದ್ದಾಗಿ ಡಿಕೆ ಶಿವಕುಮಾರ್ ಅವರು ಐಟಿ ಅಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆಂದು ಹೇಳಲಾಗಿದೆ.

ರಹಸ್ಯ ಲಾಕರ್

ರಹಸ್ಯ ಲಾಕರ್

ಡಿ.ಕೆ ಶಿವಕುಮಾರ್ ಮನೆಯಲ್ಲಿ ಸಿಕ್ಕಿರುವ ಲಾಕರ್ ಗಳ ಪೈಕಿ ಒಂದೆರಡು ಲಾಕರ್ ಒಡೆದಿರುವ ಐಟಿ ಅಧಿಕಾರಿಗಳಿಗೆ ಹೆಚ್ಚಿನದ್ದೇನು ಸಿಕ್ಕಿಲ್ಲ. 2,000 ರು ಮುಖಬೆಲೆಯ ನೋಟುಗಳ ಕಂತೆ, ಚಿನ್ನಾಭರಣ ಬಿಟ್ಟರೆ ಮತ್ತೇನು ಸಿಕ್ಕಿಲ್ಲ ಮಿಕ್ಕ ಮೂರು ಲಾಕರ್ ಓಪನ್ ಮಾಡಲು ಅಧಿಕಾರಿಗಳು ತಿಣುಕಾಡುತ್ತಿದ್ದಾರೆ. ಗುರುವಾರ ಬೆಳಗ್ಗೆ ಲಾಕರ್ ಓಪನ್ ಮಾಡಲು ಡಿಕೆಶಿ ಅವರು ಈ ಬಗ್ಗೆ ಸಹಕಾರ ನೀಡದಿದ್ದರೆ, ಐಟಿ ಅಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂಬುದು ಕುತೂಹಲವಾಗಿದೆ.

ಗೋವಿಂದರಾಜು ಡೈರಿ

ಗೋವಿಂದರಾಜು ಡೈರಿ

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಮನೆಯ ಮೇಲೆ ಐ.ಟಿ ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡ ಡೈರಿಯಲ್ಲಿ ಹೈಕಮಾಂಡಿಗೆ ಕಪ್ಪ ನೀಡಿರುವ ಪ್ರಭಾವಿ ಸಚಿವರ ಸಂಕೇತಾಕ್ಷರಗಳು ಇವೆ.

ಡೈರಿಯಲ್ಲಿ ಎಂಬಿಪಿ, ಡಿಕೆಎಸ್, ಎಚ್‌ಸಿಎಂ, ಆರ್‌ವಿಡಿ, ಕೆಜೆಜೆ ಎಂಬ ಸಂಕೇತಾಕ್ಷರಗಳ ಉಲ್ಲೇಖ ಇತ್ತು. ಅದನ್ನು ಬೆನ್ನು ಹತ್ತಿದ ಐ.ಟಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್‌ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

I T Raid On Dk Shivakumar House Behind Govindaraju Dairy ? | Oneindia Kannada
ದ್ವಾರಕನಾಥ್ ಮನೆಯಲ್ಲಿ ತನಿಖೆ

ದ್ವಾರಕನಾಥ್ ಮನೆಯಲ್ಲಿ ತನಿಖೆ

ಬೆಂಗಳೂರಿನ ಆರ್‌ಟಿ ನಗರದಲ್ಲಿ ವಾಸವಿರುವ ಡಿಕೆ ಶಿವಕುಮಾರ್ ಅವರ ಆಪ್ತರಾದ ದ್ವಾರಕನಾಥ್ ಗುರೂಜಿ ಅವರ ಮನೆಯಲ್ಲೂ ದಾಳಿ, ತನಿಖೆ, ದಾಖಲೆ ಪರಿಶೀಲನೆ ಮುಂದುವರೆದಿದೆ. ಅವರ ಮನೆಯವರ ಮೊಬೈಲ್ ಫೋನ್ ಗಳು ಅಧಿಕಾರಿಗಳ ವಶದಲ್ಲಿದೆ. ರಾತ್ರಿ ಅವರ ಮನೆಯಲ್ಲೇ ಉಳಿದ ಅಧಿಕಾರಿಗಳು, ಯಾವುದೇ ದಾಖಲೆಗಳು ಮನೆಯಿಂದ ಹೊರಕ್ಕೆ ಹೋಗದಂತೆ ತಡೆಯಲು ಭಾರಿ ಎಚ್ಚರಿಕೆ ವಹಿಸಿದ್ದಾರೆ. ಡಿಕೆಶಿ ಆಸ್ತಿ ವಿವರ ಗುರೂಜಿ ಬಳಿ ಇದೆ ಎಂಬ ಗುಮಾನಿ ದಟ್ಟವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With incriminating evidence, cash seizure of around Rs 10 crore, the Income Tax department which raided D K Shivakumar, Karnataka minister and handler of the Gujarat MLAs has intensified its probe into the case.
Please Wait while comments are loading...