ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತೂಹಲ ಘಟ್ಟ ತಲುಪಿದ ತೊಗಾಡಿಯಾ ಭಾಷಣ ವಿವಾದ

By Mahesh
|
Google Oneindia Kannada News

ಬೆಂಗಳೂರು, ಫೆ.8: ಹಿಂದೂ ಸಮಾಜೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೇಸರಿ ಮಯವಾಗಿರುವ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪ್ರವೀಣ್ ತೊಗಾಡಿಯಾ ಭಾಷಣ ವಿಡಿಯೋ ಪ್ರಸಾರ ಕಾಣಲು ಕಾದಿದ್ದ ಜನಕ್ಕೆ ನಿರಾಶೆಯಾಗಲಿದೆ.

ವಿರಾಟ್‌ ಹಿಂದೂ ಸಮಾಜೋತ್ಸವದಲ್ಲಿ ವಿಡಿಯೋ ಮೂಲಕ ಭಾಷಣ ಮಾಡಲು ಅನುಮತಿ ನೀಡಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ. [ತೊಗಾಡಿಯಾ ಬೆಂಗಳೂರಿಗೆ ಬರುವಂತಿಲ್ಲ : ಹೈಕೋರ್ಟ್]

ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಬೆಂಗಳೂರು ನಗರ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ವಿಎಚ್‌ಪಿಯು ಅವರ ವಿಡಿಯೋ ಭಾಷಣವನ್ನು ಸಮಾಜೋತ್ಸವ ಸಂದರ್ಭದಲ್ಲಿ ಬಿತ್ತರಿಸಲು ಸಿದ್ಧತೆ ನಡೆಸಿತ್ತು.

ಆದರೆ, ಪ್ರವೀಣ್ ಅವರ ಭಾಷಣದ ದೃಶ್ಯ ಅಥವಾ ಧ್ವನಿ ಮುದ್ರಿತ ನೇರ ಪ್ರಸಾರಕ್ಕೆ ಅನುಮತಿ ನೀಡಿಲ್ಲ. ಪ್ರವೀಣ್ ಅವರಿಗೆ ವಿಧಿಸಿರುವ ನಿರ್ಬಂಧದಲ್ಲಿ ಇದೂ ಸೇರಿದೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

Organisers prohibited from transmitting Praveen Togadia's speech

ಏನಿದೆ ಆದೇಶದಲ್ಲಿ?: ಸಮಾಜೋತ್ಸವಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ನಗರ ಪೊಲೀಸ್‌ ಆಯುಕ್ತರು ಸಿಆರ್‌ಪಿಸಿ ಕಲಂ 144 (3) ಅಡಿ ಈ ನಾಲ್ಕು ಪುಟಗಳ ಪರಿಷ್ಕೃತ ಆದೇಶ ಮಾಡಿದ್ದಾರೆ. ಅದರಂತೆ, ಏಳು ದಿನಗಳು ಅಂದರೆ ಫೆ.5ರಿಂದ 11ರವರೆಗೆ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ತೊಗಾಡಿಯಾ ಪ್ರವೇಶಿಸುವಂತಿಲ್ಲ. [ತೊಗಾಡಿಯಾಗೆ ನಿಷೇಧ ಯಾರು, ಏನು ಹೇಳಿದರು?]

ಶನಿವಾರದಂದು ತೊಗಾಡಿಯಾ ಅವರು ಬೆಂಗಳೂರು ಗಡಿ ಭಾಗದಲ್ಲಿರುವ ಹೊಸೂರಿಗೆ ಆಗಮಿಸಿ ಭಾಷಣ ಮಾಡಿದ್ದಾರೆ. ಸದ್ಯಕ್ಕೆ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಫೆ.8ರ ಭಾನುವಾರ ಸಂಜೆ 4 ಗಂಟೆಗೆ 'ವಿರಾಟ ಹಿಂದೂ ಸಮಾಜೋತ್ಸವ' ನಡೆಯಲಿದೆ. ನ್ಯಾಷನಲ್ ಕಾಲೇಜು ಮೈದಾನ ರಸ್ತೆ ಸೇರಿದಂತೆ ಸುತ್ತ ಮುತ್ತ ಪ್ರದೇಶವೆಲ್ಲ ಕೇಸರಿ ಧ್ವಜಗಳಿಂದ ತುಂಬಿ ಹೋಗಿವೆ.

English summary
Bengaluru police issued an order, prohibiting organisers from displaying and transmitting his speech through any form of media for two days, beginning on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X