ಹಲಸೂರು ಕೆರೆ ಸಂರಕ್ಷಣೆ ಹೊಣೆ ಯಾರದ್ದು?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 09 : ಹಲಸೂರು ಕೆರೆಯಲ್ಲಿನ ಮೀನುಗಳ ಮಾರಣ ಹೋಮಕ್ಕೆ ಕಾರಣ ಯಾರು?. ಕಳೆದ ವರ್ಷದ ಘಟನೆಗಳ ಬಳಿಕವೂ ಬಿಬಿಎಂಪಿ ಮತ್ತು ಬಿಡಿಎ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಕೆರೆಯ ಒಡಲು ಸೇರುತ್ತಿರುವ ವಿಷಕಾರಿ ನೀರನ್ನು ತಡೆಗಟ್ಟಲು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

2015ರಲ್ಲಿ ಗೌಡನಪಾಳ್ಯ ಮತ್ತು ದೊರೆಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿತ್ತು. ಎರಡೂ ಕೆರೆ ಸೇರಿ ಸುಮಾರು 20000 ಮೀನುಗಳು ಸಾವನ್ನಪ್ಪಿದ್ದವು. ಈ ಬಾರಿ ಹಲಸೂರು ಕೆರೆಯಲ್ಲಿ 1000ಕ್ಕೂ ಅಧಿಕ ಮೀನುಗಳು ಮೃತಪಟ್ಟಿವೆ. [ಹಲಸೂರು ಕೆರೆ ಮಾಲಿನ್ಯಕ್ಕೆ ಬಲಿಯಾದ ಸಾವಿರಾರು ಮೀನುಗಳು]

fish

ಗೌಡನಪಾಳ್ಯ ಕೆರೆಯಲ್ಲಿ ಮೀನುಗಳ ಸಾವಿಗೆ ತ್ಯಾಜ್ಯ ನೀರು ಕೆರೆ ಸೇರಿರುವುದೇ ಕಾರಣ ಎಂದು ತಿಳಿದುಬಂದಿತ್ತು. ಭೂ ಮಾಫಿಯಾದವರ ಕೈವಾಡದಿಂದಾಗಿ ಕೆರೆ ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿತ್ತು. ಇದರಿಂದಾಗಿ ತ್ಯಾಜ್ಯದ ನೀರು ಕೆರೆಗೆ ನೇರವಾಗಿ ಸೇರುತ್ತಿತ್ತು. [ಬೆಳ್ಳಂದೂರು ಕೆರೆ ಬಿಳಿನೊರೆಯ ರಹಸ್ಯ ಲೀಕ್]

ಹಲಸೂರು ಕೆರೆಯಲ್ಲಿನ ಮೀನುಗಳ ಸಾವಿಗೆ ಆಮ್ಲಜನಕದ ಕೊರತೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಪರಿಸರವಾದಿಗಳು ಬಿಬಿಎಂಪಿಯ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಮನೆಗಳ ತ್ಯಾಜ್ಯ ನೀರು ಕೆರೆಗೆ ಸೇರುತ್ತಿದೆ. ಆದ್ದರಿಂದ ಮೀನುಗಳು ಸಾವನ್ನಪ್ಪಿವೆ ಎಂದು ಅವರು ಹೇಳುತ್ತಿದ್ದಾರೆ. [ಗೂಗಲ್ ಮ್ಯಾಪ್ ನಲ್ಲಿ 'ಬೆಳ್ಳಂದೂರು ಲೇಕ್' ಹುಡುಕಬೇಡಿ!]

ಯಾರನ್ನು ದೂರುವುದು? : ಬಿಬಿಎಂಪಿ ಮತ್ತು ಬಿಡಿಎ ಕೆರೆಗಳಿಗೆ ತ್ಯಾಜ್ಯ ನೀರು ಸೇರಲು ನೀವು ಕಾರಣ ಎಂದು ಆರೋಪ ಮಾಡಿಕೊಳ್ಳುತ್ತಿವೆ. ಬಿಡಿಎ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಿದೆ.

ಬಿಬಿಎಂಪಿಗೆ ಕೆರೆಗಳ ನಿರ್ವಹಣೆಗೆ ವಾರ್ಷಿಕವಾಗಿ ಅನುದಾನ ನೀಡಲಾಗುತ್ತದೆ. ಅವರು ಅದನ್ನು ಸರಿಯಾಗಿ ಬಳಸುತ್ತಿಲ್ಲ ಎಂದು ಬಿಡಿಎ ದೂರಿದೆ. ಆದರೆ, ಹಲಸೂರು ಕೆರೆಗೆ ತ್ಯಾಜ್ಯ ನೀರು ಎಲ್ಲಿಂದ ಸೇರುತ್ತಿದೆ? ಎಂದು ಬಿಬಿಎಂಪಿ ಅಥವ ಬಿಡಿಎ ಇನ್ನೂ ಪರಿಶೀಲನೆ ನಡೆಸಿಲ್ಲ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It appears that the authorities in Bengaluru have not learnt their lesson and this resulted in a large number of fish being killed at the Ulsoor lake which is in the heart of the city.
Please Wait while comments are loading...