'ರುದ್ರೇಶ್ ಮುಗಿಸಿ' ಎಂದು ಕೇರಳದಿಂದ 'ಸುಪಾರಿ' ಕರೆ ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 07: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆಯನ್ನು ಬೆಂಗಳೂರು ಪೊಲೀಸರು ತೀವ್ರಗೊಳಿಸಿದ್ದಾರೆ. ರುದ್ರೇಶ್ ಮುಗಿಸುವಂತೆ ಕೇರಳದಿಂದ ಕರೆ ಮಾಡಲಾಗಿತ್ತು, ಕೊಲೆಗೈದವರಿಗೆ ಭಾರಿ ಮೊತ್ತದ ಭರವಸೆ ನೀಡಲಾಗಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಅಕ್ಟೋಬರ್ 16ರಂದು ಕಾಮರಾಜ ರಸ್ತೆಯಲ್ಲಿ ಪಥಸಂಚಲನ ನಡೆಯುತ್ತಿದ್ದಾಗ ಇಬ್ಬರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು.[ರುದ್ರೇಶ್ ಹತ್ಯೆ : ಶೋಭಾ ವಿರುದ್ಧ ಮಾನನಷ್ಟ ಮೊಕದ್ದಮೆ]

ಈ ಪೈಕಿ ರುದ್ರೇಶ್ ಹತ್ಯೆ ಮಾತ್ರ ಸಾಧ್ಯವಾಯಿತು.ಒಂಟಿಯಾಗಿ ಸಿಕ್ಕ ರುದ್ರೇಶ್ ಕತ್ತನ್ನು ವಾಸಿಂ ಕತ್ತರಿಸಲಾಯಿತು, ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲಲು ಆಗಲಿಲ್ಲ ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.[ಮಾಗಳಿ ರವಿ ಸಾವಿನ ಸುತ್ತ ಅನುಮಾನದ ಹುತ್ತ!]

ಕರೆ ಬಂದಿದ್ದು ಎಲ್ಲಿಂದ?: ರುದ್ರೇಶ್ ಹತ್ಯೆ ಸಂಚು ರೂಪಿಸುವುದಕ್ಕೂ ಮುನ್ನ ಕೊಲೆಗಾರರು ಕೇರಳಕ್ಕೆ ತೆರಳಿದ್ದರು. ನಂತರ ಕೊಲೆಗೂ ಮುನ್ನ ಆರೋಪಿಗಳಿಗೆ ಕೇರಳದಿಂದ ಫೋನ್ ಕರೆ ಬಂದಿದ್ದರ ಬಗ್ಗೆ ಕಾಲ್ ಡಿಟೈಲ್ಸ್ ನಿಂದ ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಖಚಿತ ಪಡಿಸಿಕೊಳ್ಳಲು ಬೆಂಗಳೂರಿನ ತನಿಖಾ ತಂಡ ಸದ್ಯದಲ್ಲೇ ಕೇರಳಕ್ಕೆ ತೆರಳಲಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪೈಕಿ ಪಿಎಫ್ ಐ ಹಾಗೂ ಎಸ್ ಡಿಪಿಐಗೆ ಸೇರಿದವರು ಎನ್ನಲಾದ ನಾಲ್ವರನ್ನು ಪ್ರಮುಖ ಆರೋಪಿಗಳು ಎನ್ನಲಾಗಿದೆ. ಬಂಧಿತ ಆಸೀಂ ಶರೀಫ್ ವಿಚಾರಣೆ ವೇಳೆ ಇನ್ನೂ ಬಾಯ್ಬಿಟ್ಟಿಲ್ಲ. ರುದ್ರೇಶ್ ಅಲ್ಲದೆ ಇನ್ನೂ ಅನೇಕರ ಹತ್ಯ್ಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದು ಬಂದಿದೆ.

ಪಿಎಫ್ ಐ ನಂಟು

ಪಿಎಫ್ ಐ ನಂಟು

ಇತ್ತೀಚೆಗೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಅಧ್ಯಕ್ಷ ಆಸೀಮ್ ಶರೀಫ್ ರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು. ಆದರೆ, ಆದರೆ, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪಿಎಫ್ಐನ ಅಧ್ಯಕ್ಷರು, 'ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ', ಒತ್ತಡದಿಂದ ಪಿಎಫ್ ಐ ಮೇಲೆ ಸುಳ್ಳು ಆರೋಪ ಹೊರೆಸಲಾಗಿದೆ ಎಂದಿದ್ದರು.

ಚಾರ್ಜ್ ಶೀಟ್ ಯಾವಾಗ?

ಚಾರ್ಜ್ ಶೀಟ್ ಯಾವಾಗ?

Unlawful Activities Prevention Act (UAPA) ಕಾಯ್ದೆ ಜಾರಿಗೊಳಿಸಿ ಆರೋಪಿಗಳನ್ನು ಇನ್ನಷ್ಟು ಕಾಲ ಪೊಲೀಸ್ ವಶದಲ್ಲಿ ವಿಚಾರಣೆ ನಡೆಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ. ಈ ಕಾಯ್ದೆ ಮೂಲಕ ಆರೋಪಿಗಳನ್ನು 30 ದಿನಗಳ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಬಹುದು ಹಾಗೂ ದೋಷಾರೋಪಣ ಪಟ್ಟಿ ಸಲ್ಲಿಸಲು 180ದಿನಗಳ ಕಾಲಾವಕಾಶವಿರುತ್ತದೆ.

ರುದ್ರೇಶ್ ಹತ್ಯೆಗೆ ಶಾರ್ಪ್ ಶೂಟರ್ಸ್ ಏಕೆ

ರುದ್ರೇಶ್ ಹತ್ಯೆಗೆ ಶಾರ್ಪ್ ಶೂಟರ್ಸ್ ಏಕೆ

ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆಗೆ ಶಾರ್ಪ್ ಶೂಟರ್ಸ್ ಏಕೆ ಬಳಸಲಿಲ್ಲ ಎಂಬುದಕ್ಕೆ ಉತ್ತರ ಸರಳವಿದೆ. ಶಾರ್ಪ್ ಶೂಟರ್ಸ್ ಗೆ ಸುಪಾರಿ ನೀಡಿದರೆ ಸುಪಾರಿ ಮೊತ್ತವೂ ದುಬಾರಿ. ಅಲ್ಲದೆ ಅವರು ಬಳಸುವ ಬುಲೆಟ್ ಏನಾದರೂ ಪೊಲೀಸರ ಕೈಗೆ ಸಿಕ್ಕರೆ, ಅದರ ಆಧಾರದ ಮೇಲೆ ಕೊಲೆಗಡುಕರನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಸುಲಭ ಸಿಕ್ಕಿ ಬೀಳದೆ ಎದುರಾಳಿಯನ್ನು ಈ ರೀತಿ ಕೊಚ್ಚಿ ಕೊಲ್ಲುವ ಯೋಜನೆ ಇತ್ತೀಚೆಗೆ ಜಾರಿಯಲ್ಲಿದೆ.

 ಶೋಭಾ ಕರಂದ್ಲಾಜೆ ಹೇಳಿಕೆ

ಶೋಭಾ ಕರಂದ್ಲಾಜೆ ಹೇಳಿಕೆ

ಸಚಿವ ರೋಷನ್ ಬೇಗ್ ಅವರಿಗೂ ರುದ್ರೇಶ್ ಹತ್ಯೆಗೂ ನಂಟಿದೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ನೇರವಾಗಿ ಆರೋಪ ಮಾಡಿದ್ದಾರೆ. ಶೋಭಾ ಅವರು ಶುಕ್ರವಾರ ನೀಡಿದ ಹೇಳಿಕೆ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾರೆ. ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸುವುದಾಗಿ ಸಚಿವ ಬೇಗ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Karnataka police will invoke the stringent provisions of the Unlawful Activities Prevention Act (UAPA) against the killers of RSS leader R Rudresh. By invoking this provision, the police can seek 30 days custody of the killers and also file the chargesheet in 180 days.
Please Wait while comments are loading...