ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ
ಬೆಂಗಳೂರು, ಏಪ್ರಿಲ್, 14 : ಮಹಾನಗರದಲ್ಲಿ ಬಸ್ ಸ್ಟಾಪ್ ಗಳದ್ದೇ ದೊಡ್ಡ ಸಮಸ್ಯೆ. ನಾವು ಯಾವ ಕಡೆ ತೆರಳಬೇಕು ಎಂದು ಅಂದುಕೊಂಡಿರುತ್ತೆವೆಯೋ ಆ ಕಡೆ ತೆರಳುವ ಬಸ್ ಎಲ್ಲಿ ಬರುತ್ತದೆ ಎಂಬುದು ಎಷ್ಟೋ ಸಂದರ್ಭ ಗೊತ್ತಾಗದೇ ಪರಿತಪಿಸಿರುತ್ತೇವೆ. ಇನ್ನು ಗಂಟೆಗಟ್ಟಲೆ ಬಸ್ ಗೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದು ಇರುತ್ತದೆ.
ಆದರೆ ಈಗ ಈ ಎಲ್ಲ ಸಮಸ್ಯೆಗೆ ಅಂಗೈನಲ್ಲೇ ಪರಿಹಾರ ಕಂಡಿಕೊಳ್ಳಬಹುದು. ಅಲ್ಲದೇ ಯಾವಾಗ ಬಸ್ ಬರುತ್ತೋ ಎಂದು ಕಾಯುತ್ತ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಸರಿಯಾದ ಬಸ್ ಟೈಮಿಂಗ್ ಗುರುತಿಸಿಕೊಳ್ಳಬಹುದು.[ಆದಾಯ ತೆರಿಗೆ ಪಾವತಿಗೆ ಸ್ಮಾರ್ಟ್ ಅಪ್ಲಿಕೇಷನ್]

'Trafi' ಹೆಸರಿನ ಮೊಬೈಲ್ ಅಪ್ಲಿಕೇಶನ್ ನಿಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ. ಮೆಟ್ರೋ ರೈಲಿನ ವೇಳಾಪಟ್ಟಿಯನ್ನು ಒದಗಿಸುತ್ತದೆ. ಬೆಂಗಳೂರು ಮತ್ತು ಮುಂಬೈಗೆ ಸಂಬಂಧಿಸಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ವಿದೇಶಗಳಲ್ಲಿ ಜನಪ್ರಿಯವಾಗಿದ್ದ ಅಪ್ಲಿಕೇಶನ್ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಜನರಿಗೆ ಸಕಲ ಮಾಹಿತಿ ನೀಡುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಹೊಸ ಅಪ್ಲಿಕೇಶನ್ ಕೋ ಫೌಂಡರ್ ಮಾರ್ತಾನ್ಸ್ ತಿಳಿಸಿದ್ದಾರೆ.[ವಾಟ್ಸಪ್ ಗೆ ಕಾಸು ಕೊಡಬೇಕಾಗಿಲ್ಲ, ಮಜಾ ಮಾಡಿ]
ಎಲ್ಲ ಮಾಹಿತಿ ಕ್ರೋಢಿಕರಣಕ್ಕೆ ಅಪ್ಲಿಕೇಶನ್ ಒಂದು ಮಿಲಿಯನ್ ಹಣ ವ್ಯಯಿಸಲಿದೆ. 2013 ರಲ್ಲಿ ಕಾರ್ಯ ಆರಂಭ ಮಾಡಿದ್ದ ಅಪ್ಲಿಕೇಶನ್ ಇದೀಗ ಭಾರತಕ್ಕೆ ಕಾಲಿಟ್ಟಿದ್ದು ಸ್ಮಾರ್ಟ್ ಸಿಟಿಗಳಿಗೆಲ್ಲ ಅನ್ವಯವಾಗುವಂತೆ ಅಪ್ ಡೇಟ್ ಆಗಲಿದೆ.
ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ












Click it and Unblock the Notifications