ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ.1ರಿಂದ ಬೆಂಗಳೂರಿನಲ್ಲಿ ಸಾವಯವ ಮಾವು ಮೇಳ!

|
Google Oneindia Kannada News

ಬೆಂಗಳೂರು, ಏ.30:ಮಾವು ಪ್ರಿಯರಿಗೆ ಗುಡ್‌ನ್ಯೂಸ್‌‌.ಮಾರುಕಟ್ಟೆಯಲ್ಲಿ ರಾಸಾಯನಿಕ ಮಿಶ್ರಿತ ಮಾವುಗಳನ್ನು ತಿಂದು ರೋಸಿಹೋಗಿ ಮಾವು ತಿನ್ನುವುದನ್ನು ಬಿಟ್ಟಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.ನಿಮಗಾಗಿಯೇ ಹೊಸ ಮಾವು ನಗರಕ್ಕೆ ಬಂದಿದೆ.

ಬೆಂಗಳೂರಿನ ಮಾವು ಪ್ರಿಯರಿಗಾಗಿ ಜೈವಿಕ್‌‌‌ ಕೃಷಿಕ್‌‌ ಸೊಸೈಟಿ ಸಾವಯವ ಮಾವು ಮಾರಾಟ ಮೇಳ ಆಯೋಜಿಸಿದೆ. ನಗರದ ನಾನಾ ಬಡಾವಣೆಯಲ್ಲಿ ಈ ಮಾವು ಮೇಳ ಮೇ.1ರಿಂದ ಆರಂಭವಾಗಲಿದ್ದು ಹಣ್ಣಿನ ಸೀಸನ್‌ ಮುಗಿಯುವವರೆಗೂ ನಡೆಯಲಿದೆ.

Mango festival starts tomorrow in Bangalore

ಎಲ್ಲಿಯ ಮಾವು? ತುಮಕೂರು, ಕೋಲಾರ, ಮೈಸೂರು, ರಾಮನಗರ, ಚೆನ್ನಪಟ್ಟಣ, ಹೊಸಪೇಟೆಯಲ್ಲಿ ರೈತರು ಸಾವಯವ ಮಾವನ್ನು ಬೆಳೆಯುತ್ತಿದ್ದು,ಈ ಮಾವನ್ನು ಸೊಸೈಟಿ ಖರೀದಿಸುತ್ತಿದೆ. ಯಾವುದೇ ಮಧ್ಯವರ್ತಿ‌ಗಳಿಲ್ಲದೇ ಸೊಸೈಟಿ ನೇರವಾಗಿ ಶೇ.50ರಷ್ಟು ಬೆಲೆಯನ್ನು ನೀಡಿ ರೈತರಿಂದ ಹಣ್ಣನ್ನು ಖರೀದಿಸಿ ಮಾರಾಟ ಮಾಡಲು ಮುಂದಾಗಿದೆ.

ಮಾರಾಟ ಮೇಳ ಎಲ್ಲಿ ನಡೆಯುತ್ತದೆ? ಲಾಲ್‌ಬಾಗ್‌‌ ಡಬ್ಬಲ್‌‌ ರೋಡ್‌‌ ಪ್ರವೇಶ ದ್ವಾರದ ಬಳಿಯಿರುವ ಜೈವಿಕ್‌ ಕೃಷಿ ಸೊಸೈಟಿ, ಸಂಜಯನಗರ, ಬನಶಂಕರಿ, ನಂದಿನಿ ಲೇಔಟ್‌‌ನಲ್ಲಿ ಮೇಳ ನಡೆಯಲಿದೆ.

ಒಂದು ಕೆ.ಜಿಗೆ ಎಷ್ಟು ಬೆಲೆ?
ಬಾದಾಮಿ --- 120 ರೂ.
ರಸಪುರಿ --- 80 ರೂ.
ಬಂಗನ್‌‌‌ಪಲ್ಲಿ --- 80 ರೂ.
ಮಲ್ಲಿಕಾ --- 90 ರೂ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X