ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಲಿ, ಶಾಗೆ ಆಗ್ರಹ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏ.3: "ನಿಮ್ಮ ಎಲ್ಲಾ ಕನಸು ನನಸಾಗಬೇಕಾದರೆ, ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಹಿಡಿಯಬೇಕಾದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ" ಎಂದು ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ಹಿರಿಯ ಮುಖಂಡ ಪ್ರಭಾಕರ್ ಕೋರೆ ತಮ್ಮ ನೇತೃತ್ವದ 20 ಮಂದಿ ಶಾಸಕರುಗಳ ತಂಡ ಭೇಟಿ ಮಾಡಿ ಬಿಎಸ್ ಯಡಿಯೂರಪ್ಪ ಪರ ಲಾಬಿ ಮಾಡಿದೆ. ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಅಧಿಕಾರ ಅವಧಿ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಬೇಡಿಕೆ ಹುಟ್ಟಿಕೊಂಡಿದೆ. ['ಬಿಜೆಪಿ ತಪ್ಪು ಹುಡುಕುವ ಬದಲು ರಾಹುಲ್ ಗಾಂಧಿ ಹುಡುಕಿ']

ಯಡಿಯೂರಪ್ಪ ಅವರೇ ಏಕೆ?: 2018ರ ವೇಳೆ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಇದಕ್ಕೂ ಮುನ್ನ ಸಾಕಷ್ಟು ಪೂರ್ವ ತಯಾರಿ ನಡೆಸಬೇಕಿದೆ. ಇದಕ್ಕಾಗಿ ಪಕ್ಷ ಸಂಘಟನಾ ಚತುರ ಎನಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸಬೇಕಿದೆ. ಈ ಮೂಲಕ ಕರ್ನಾಟಕದಿಂದ ಕಾಂಗ್ರೆಸ್ ಸರ್ಕಾರವನ್ನು ಓಡಿಸಬೇಕಿದೆ ಎಂದು ಕೋರೆ ನೇತೃತ್ವದ ತಂಡ ಆಗ್ರಹಿಸಿದೆ.

Make yeddyurappa party chief in Karnataka- Amit Shah petitioned

ಶಿಕಾರಿಪುರದ ಸಂಸದರಾಗಿರುವ ಯಡಿಯೂರಪ್ಪ ಅವರು ನರೇಂದ್ರ ಮೋದಿ ಅವರ ಕ್ಯಾಬಿನೆಟ್ ಸೇರುವ ಅರ್ಹತೆ ಹೊಂದಿದ್ದರು. ಅದರೆ, ರಾಷ್ಟ್ರಮಟ್ಟದ ಯಾವುದೇ ಹುದ್ದೆ ನನಗೆ ಬೇಡ, ರಾಜ್ಯದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಗೊಳಿಸಲು ಶ್ರಮಿಸುತ್ತೇನೆ ಎಂದು ಯಡಿಯೂರಪ್ಪ ಅವರು ಅಮಿತ್ ಶಾ ಅವರ ಬಳಿ ಹೇಳಿಕೊಂಡಿದ್ದಾರಂತೆ.

ಅಮಿತ್ ಶಾ ಅವರು ಸದ್ಯಕ್ಕೆ 1 ಕೋಟಿ ಮಂದಿಯನ್ನು ಪಕ್ಷದ ಸದಸ್ಯರನ್ನಾಗಿಸುವ ಗುರಿ ನೀಡಿದ್ದಾರೆ. ಈ ಗುರಿಯನ್ನು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಇತರೆ ರಾಜ್ಯ ಮುಖಂಡರ ನೆರವಿನಿಂದ ಸಾಧಿಸಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 2016ರ ತನಕ ಪ್ರಹ್ಲಾದ್ ಜೋಶಿ ಅವರ ಅವಧಿ ಇರುವುದರಿಂದ ಸದ್ಯಕ್ಕೆ ಯಡಿಯೂರಪ್ಪ ಅವರಿಗೆ ಹೊಸ ಹುದ್ದೆ ಸಿಗುವುದು ಸಾಧ್ಯವಿಲ್ಲ ಎನ್ನಲಾಗಿದೆ.

English summary
Around 20 MLAs from the BJP in Karnataka met with Party President Amit Shah and urged him to appoint B S Yeddyurappa as the head of the party’s Karnataka unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X