ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್ ಟೆಲ್ ಹುಳುಕು ತೋರಿಸಿದ ಟೆಕ್ಕಿಗೆ ಲೀಗಲ್ ನೋಟಿಸ್

By Mahesh
|
Google Oneindia Kannada News

ಬೆಂಗಳೂರು, ಜೂ.09: ಭಾರ್ತಿ ಏರ್ ಟೆಲ್ ನ ಇಂಟರ್ನೆಟ್ ಪ್ಯಾಕೇಜ್ ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಆತಂಕಕಾರಿ ಸುದ್ದಿಯೊಂದು ಇಲ್ಲಿದೆ. ಏರ್ ಟೆಲ್ 3ಜಿ ಇಂಟರ್ನೆಟ್ ಪ್ಯಾಕೇಜ್ ಮೂಲಕ ಇಸ್ರೇಲಿ ಕಂಪನಿಯೊಂದು ಗ್ರಾಹಕರ ಮಾಹಿತಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ತೋರಿಸಿದ ಸಾಫ್ಟ್ ವೇರ್ ತಂತ್ರಜ್ಞನಿಗೆ ಲೀಗಲ್ ನೋಟಿಸ್ ನೀಡಲಾಗಿದೆ.

ಇಸ್ರೇಲಿ ಮೂಲದ ಫ್ಲಾಶ್ ನೆಟ್ವರ್ಕ್ ಕಂಪನಿ ಏರ್ ಟೆಲ್ ಗ್ರಾಹಕರ ಬ್ರೌಸಿಂಗ್ ಹಾಗೂ ಖಾಸಗಿ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂಬ ವಿಷಯವನ್ನು ಬೆಂಗಳೂರಿನ ಸಾಫ್ಟ್ ವೇರ್ ತಂತ್ರಜ್ಞ ತೇಜೇಶ್ ಜಿ.ಎನ್ [ವೆಬ್ ಪುಟ ನೋಡಿ] ಪತ್ತೆ ಹಚ್ಚಿದರು. ನಂತರ ಸೋರ್ಸ್ ಕೋಡ್ ಇರುವ ಬ್ರೌಸರ್ ಪೇಜ್ ಸ್ಕ್ರೀನ್ ಶಾಟ್ ತೆಗೆದು Github.com ನಲ್ಲಿ ಹಾಕಿದರು.

Thejesh GN

ಕಳೆದ ವಾರ ಏರ್ ಟೆಲ್ ಹಾಗೂ ಇಸ್ರೇಲ್ ಕಂಪನಿ ಅಚಾತುರ್ಯದ ಬಗ್ಗೆ ವರದಿ ಮಾಡಿದ್ದರು. ಗ್ರಾಹಕರ ವೆಬ್ ಬ್ರೌಸರ್ ನೊಳಗೆ ಗ್ರಾಹಕರಿಗೆ ಅರಿವಿಲ್ಲದ್ದಂತೆ ಜಾಹೀರಾತು ಅಥವಾ ಇನ್ಯಾವುದೇ ಕೋಡ್ ಗಳನ್ನು ಅಳವಡಿಸಲಾಗುತ್ತಿದೆ ಎಂಬ ಅಂಶವನ್ನು ತೇಜೇಶ್ ಹೊರ ಹಾಕಿದ್ದರು. [ನಳಿನ್ ಖಾಸಗಿ ಮಾಹಿತಿ ಸೋರಿಕೆ, ಏರ್ ಟೆಲ್ ಗೆ ನೋಟಿಸ್]


ಗ್ರಾಹಕರ ಅನುಮತಿ ಇಲ್ಲದೆ ವೈಯಕ್ತಿಕ ವಿವರ ಅಥವಾ ಬ್ರೌಸಿಂಗ್ ವಿವರ ಪಡೆಯುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ.

ಈ ಬಗ್ಗೆ ಏರ್ ಟೆಲ್ ನಿಂದ ಉತ್ತರ ನೀರಿಕ್ಷೆಯಲ್ಲಿದ್ದ ತೇಜೇಶ್ ಗೆ ಇಸ್ರೇಲಿ ಕಂಪನಿ ಫ್ಲಾಶ್ ನೆಟ್ವರ್ಕ್ ಲಿಮಿಟೆಡ್ ನಿಂದ ಬೆದರಿಕೆ ನೋಟಿಸ್ ಬಂದಿದೆ.

ನಂತರ Github ನಿಂದಲೂ ಕೋಡ್ ತೆಗೆದು ಹಾಕುವಂತೆ ಮಾಡಿದ್ದಾರೆ. ಈ ಬಗ್ಗೆ ಭಾರ್ತಿ ಏರ್ ಟೆಲ್ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲಿ ಕಂಪನಿ ನೋಟಿಸ್ ನೀಡಿದ್ದರ ಬಗ್ಗೆ ನಮಗೆ ಅರಿವಿಲ್ಲ. ಏರ್ ಟೆಲ್ ನಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದಿದ್ದಾರೆ.

ತಪ್ಪು ತೋರಿಸಿದ್ದಕ್ಕೆ ತೇಜೇಶ್ ಮೇಲೆ ಇಂಥ ಪ್ರಹಾರ ಏಕೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿದೆ. (ಒನ್ ಇಂಡಿಯಾ ಸುದ್ದಿ)

English summary
An Indian coder Who exposed about Israeli company spying and collecting personal and browsing information gets Legal notice. Thejesh GN, an infoactivist and programmer from Bengaluru noticed that Airtel is secretly injecting scripts into user’s web browser.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X