ಡಿಕೆ ರವಿ ಸಾವಿನ ನಿಗೂಢತೆ: ಸಿದ್ದುಗೆ ಸತ್ಯ ಗೊತ್ತಾಗಿದ್ಯಾ?
ಬೆಂಗಳೂರು, ಮಾ.27: ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಸೂತಕ ಇನ್ನೂ ಮಾಸಿಲ್ಲ. ಸಾವಿನ ಸುತ್ತ ಹುಟ್ಟಿಕೊಂಡಿರುವ ಅನುಮಾನದ ಹುತ್ತ ಪ್ರತಿದಿನ ಬೆಳೆಯುತ್ತಲೇ ಇದೆ. ಈ ಪ್ರಕರಣದ ತನಿಖೆ ಈಗ ಸಿಬಿಐ ಕೈಲಿದೆ ಇನ್ನೊಂದೆಡೆ ಹೈಕೋರ್ಟ್ ನಲ್ಲಿ ವಿಚಾರಣೆಗೊಳಪಡಲಿದೆ.
ಡಿಕೆ ರವಿ ಸಾವಿನ ಪ್ರಕರಣದ ತನಿಖೆ ಪೊಲೀಸರು ನಂತರ ಸಿಐಡಿ ಈಗ ಸಿಬಿಐ ಕೈ ತಲುಪಿರುವುದು ಎಲ್ಲರಿಗೂ ತಿಳಿದಿದೆ. ಅದರೆ, ಈ ನಡುವೆ ಡಿಕೆ ರವಿ ಹಾಗೂ ಮಹಿಳಾ ಅಧಿಕಾರಿ ನಡುವಿನ ಮಾತುಕತೆ ವಿವರ, ವಾಟ್ಸಪ್ ಸಂದೇಶಗಳು ಲೀಕ್ ಆಗಿವೆ. ಇದಲ್ಲದೆ, ಆಕೆ ತನಿಖಾಧಿಕಾರಿಗಳಿಗೆ ನೀಡಿದ ಅಧಿಕೃತ ಹೇಳಿಕೆ ಕೂಡಾ ಸೋರಿಕೆಯಾಗಿದೆ. [ಮಹಿಳಾ ಅಧಿಕಾರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದಕ್ಕೆ]
ವಿಧಾನಸಭೆಯಲ್ಲಿ ಸದಸ್ಯರ ಮುಂದೆ ಸಿಐಡಿ ತನಿಖಾ ವರದಿಯನ್ನು ಬಹಿರಂಗಗೊಳಿಸದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ನಿರ್ಬಂಧ ತರಲಾಗಿತ್ತು. ಅದರಂತೆ, ಸದನದಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡಿಲ್ಲ. ಎಲ್ಲಾ ಕಡೆಗಳಿಂದ ಒತ್ತಡಕ್ಕೆ ಮಣಿದು ಸಿಬಿಐ ತನಿಖೆಗೆ ವಹಿಸಿದ್ದು ಎಲ್ಲರಿಗೂ ತಿಳಿದಿದೆ.
ಅದರೆ, ಸಿಐಡಿ ತನಿಖೆ ಇನ್ನೂ ಪ್ರಗತಿಯಲ್ಲಿರುವಾಗಲೇ ಸಿದ್ದರಾಮಯ್ಯ ಅವರಿಗೆ ಸತ್ಯದ ಅರಿವಾಗಿದೆಯೆ? ಸಾವಿನ ನಿಗೂಢತೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆಯೇ? ಎಂಬ ಅನುಮಾನ ಸಾರ್ವಜನಿಕರಲ್ಲೂ ಮೂಡಿದೆ. ಜೊತೆಗೆ ಇದೇ ಪ್ರಶ್ನೆಯನ್ನು ಅರ್ಜಿದಾರರು ಕೋರ್ಟಿನಲ್ಲೂ ಪ್ರಶ್ನಿಸಿದ್ದಾರೆ. [ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?]

ಸಿದ್ದರಾಮಯ್ಯರಿಗೆ ಸತ್ಯ ಗೊತ್ತಾಗಿದೆಯೆ?
ಸಿಐಡಿ ತನಿಖೆ ಮುಗಿಯುವುದಕ್ಕೂ ಮೊದಲೇ ಮಧ್ಯಂತರ ವರದಿ ಪಡೆದು ಸದನದಲ್ಲಿ ಮಂಡಿಸಲು ಸಿದ್ದರಾಮಯ್ಯ ಅವರು ಮುಂದಾಗಿದ್ದು ಏಕೆ? ಡಿಕೆ ರವಿ ಸಾವಿನ ನಿಗೂಢತೆ ಬಗ್ಗೆ ಸಿದ್ದರಾಮಯ್ಯ ಅವರಿಗೆ ತಿಳಿದಿರುವ ಸತ್ಯವಾದರೂ ಏನು? ಇದೇ ಸತ್ಯವನ್ನು ಸದನದ ಮುಂದಿಡಲು ಮುಂದಾಗಿದ್ದರೆ? ತನಿಖೆಗೂ ಮುನ್ನ ಸತ್ಯ ಗೊತ್ತಿದೆ ಎಂದು ಸಿದ್ದರಾಮಯ್ಯ ಬಿಂಬಿಸಿದ್ದು ಏಕೆ? ಇದು ತನಿಖೆಯ ದಿಕ್ಕು ತಪ್ಪಿಸುವ ಕಾರ್ಯತಂತ್ರವೇ? ತನಿಖೆ ಹಂತದಲ್ಲೇ ಖಾಸಗಿ ಮಾಹಿತಿಗಳು ಬಹಿರಂಗಗೊಳ್ಳುತ್ತಿರುವುದೇಕೆ? ಎಂಬ ಪ್ರಶ್ನೆಗಳು ಕಾಡುತ್ತಿವೆ. [ರವಿ ಕೇಸ್: ಸಾವು, ಸಿಐಡಿ, ಸಿಬಿಐ ತನಕ ಟೈಮ್ ಲೈನ್]
ಕೋರ್ಟಿನಲ್ಲಿ ಅರ್ಜಿ: ವಿಪಕ್ಷಗಳ ಕೈವಾಡವಿಲ್ಲ
ಕರ್ನಾಟಕ ಸರ್ಕಾರದ ವಿರುದ್ಧ ಅರ್ಜಿ ಹಾಕುತ್ತಿದ್ದಂತೆ ಇದು ವಿಪಕ್ಷಗಳ ಕೃತ್ಯ ಎಂದು ಸರ್ಕಾರದ ಪ್ರತಿನಿಧಿಗಳು ಆರೋಪಿಸತೊಡಗಿದರು. ಆದರೆ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಕೋರ್ಟಿಗೆ ಕ್ಷಣಾರ್ಧದಲ್ಲೇ ತಿಳಿಯಿತು.[ಸದನಕ್ಕೆ ಸಿದ್ದು ಕೊಟ್ಟ ಲಿಖಿತ ಉತ್ತರ]
ಅರ್ಜಿದಾರರ ಪತ್ನಿ ಐಎಎಸ್ ಅಧಿಕಾರಿಯಾಗಿದ್ದು, ಆಕೆಯ ವೈಯಕ್ತಿಕ ವಿಷಯಗಳು, ಆಕೆ ಗಳಿಸಿರುವ ಗೌರವಕ್ಕೆ ಸರ್ಕಾರದ ನಡೆ ಕುಂದುಂಟು ಮಾಡುತ್ತಿರುವುದು ಇಲ್ಲಿ ಮುಖ್ಯವಾಗಿದೆ. ಇದು ವ್ಯಕ್ತಿಯೊಬ್ಬರ ಖಾಸಗಿ ಬದುಕಿಗೆ ಅತಿಕ್ರಮಣ ಪ್ರವೇಶ ಮಾಡಿದ್ದಂತಾಗುತ್ತದೆ ಎಂಬ ನಿಟ್ಟಿನಲ್ಲಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬುದು ಮನವರಿಕೆಯಾಯಿತು. [ರವಿ ವೈಕುಂಠ ಸಮಾರಾಧನೆಯಲ್ಲಿ ದುಃಖತಪ್ತ ಬಳಗ]

ಇಷ್ಟಕ್ಕೂ ಸರ್ಕಾರಕ್ಕೆ ಇದ್ದ ಆತುರವಾದರೂ ಏನು? ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ. ತನಿಖೆ ಮುಗಿಯುವ ಮುನ್ನ ವರದಿಯನ್ನು ಕೇಳಿದ್ದೇಕೆ? ಸಿಬಿಐಗೆ ನೀಡಲು ಇಲ್ಲದ ಆತುರ ಸಿಐಡಿ ಮಧ್ಯಂತರ ತನಿಖಾ ವರದಿ ಬಹಿರಂಗ ಪಡಿಸಲು ಸಿದ್ಧವಾಗಿದ್ದೇಕೆ? ಎಂಬ ಪ್ರಶ್ನೆ ಕೇಳಿದ್ದಾರೆ. ಇದು ಪೂರ್ವಗ್ರಹ ಪೀಡಿತ ಮನೋಭಾವ ತೋರುತ್ತದೆ ಎಂದು ವಾದ ಮಂಡಿಸಲಾಯಿತು. [ಮಧ್ಯಂತರ ವರದಿ ಮಂಡಿಸಲು ಕೋರ್ಟ್ ತಡೆ]
ಸರ್ಕಾರದ ಉದ್ದೇಶವಾದರೂ ಏನು?
ಪ್ರಕರಣದ ಸತ್ಯಾಸತ್ಯತೆ ತಿಳಿಯುವುದರ ಬಗ್ಗೆ ಮಾತನಾಡದೇ ರವಿ ವೈಯಕ್ತಿಕ ಬದುಕಿನ ವಿವರಗಳತ್ತ ಸರ್ಕಾರ ಹೆಚ್ಚಿನ ಗಮನ ಹರಿಸಿ, ವೈಯಕ್ತಿಕ ಕಾರಣಗಳಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರ ಹೇಳಿದ್ದರ ಹಿಂದಿನ ಉದ್ದೇಶವೇನು? [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]
ರವಿ ಹಾಗೂ ಅಧಿಕಾರಿ ಜೊತೆಗಿನ ಸಂಬಂಧ ಹಳಸಿತ್ತು. ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂಬುದನ್ನು ಕೋರ್ಟ್ ಮುಂದೆ ಹೇಳಿದ್ದರ ಹಿಂದಿನ ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ನ್ಯಾಯಾಂಗದಿಂದ ಉತ್ತರ ದೊರೆಯುವ ಭರವಸೆ ಅರ್ಜಿದಾರರಿಗಿದೆ.












Click it and Unblock the Notifications