ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಕಳಿಸಿದ ಕೊನೆ ವಾಟ್ಸಪ್ ಸಂದೇಶದಲ್ಲಿ ಏನಿದೆ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾ.27: ಅತ್ತ ಡಿಕೆ ರವಿ ಅವರ ವೈಕುಂಠ ಸಮಾರಾಧನೆ ಇತ್ತ ಸಿಬಿಐ ತಂಡದಿಂದ ತನಿಖೆ ಆರಂಭ.ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ನಿಗೂಢತೆಯನ್ನು ಪತ್ತೆ ಹಚ್ಚಲು ಮೊದಲಿಗೆ ವಾಟ್ಸಪ್ ಸಂದೇಶಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಿಬಿಐ ತಂಡ ಮುಂದಾಗಿದೆ.

ಮಾ.15 ಹಾಗೂ ಮಾ.16ರಂದು ಡಿಕೆ ರವಿ ಹಾಗೂ ಮಹಿಳಾ ಐಎಎಸ್ ಅಧಿಕಾರಿ ನಡುವೆ ವಿನಿಮಯಗೊಂಡ ಸಂದೇಶಗಳನ್ನು ಓದುವ ಮೂಲಕ ಸಿಬಿಐ ತನ್ನ ತನಿಖೆ ಆರಂಭಿಸಲಿದೆ ಎಂದು ತಿಳಿದು ಬಂದಿದೆ.

ಒನ್ ಇಂಡಿಯಾಗೆ ತಲುಪಿರುವ ಈ ಸಂದೇಶದ ಪ್ರತಿ ನೋಡಿದರೆ ಡಿಕೆ ರವಿ ಅವರು ಸಾಯುವುದಕ್ಕೂ ಒಂದು ದಿನ ಮುಂಚೆ ಕೂಡಾ ಸಂದೇಶಗಳನ್ನು ಕಳಿಸಿರುವುದು ಕಂಡು ಬರುತ್ತದೆ. ಅಲ್ಲದೆ, ಯಾವುದೇ ಆತುರದ ನಿರ್ಧಾರಕ್ಕೆ ಬಂದು ಅತುರಾತುರವಾಗಿ ಸಂದೇಶ ಕಳಿಸಿದಂತೆ ತೋರುವುದಿಲ್ಲ. ಅಥವಾ ಸಂದೇಶ ಬಂದ ಕೂಡಲೇ ಆತುರದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲು ಬರುವುದಿಲ್ಲ.

IAS officer death, Messages show he had not taken an impulsive decision

ಮೇಸೇಜ್ ಏನು ಹೇಳುತ್ತದೆ:
ಸುಮಾರು 11.05 AMಗೆ ಕಳಿಸಲ್ಪಟ್ಟ ಸಂದೇಶದಲ್ಲಿ This is my last message to you. My last wish was to see you but that will not be satisfied. Pray to God Shiva to give me peace!!.ಎಂದಿದೆ. ಇದು ನನ್ನ ಕೊನೆ ಸಂದೇಶ ಎಂಬುದು ಇಲ್ಲಿ ಮುಖ್ಯವಾದರೂ ಕೊನೆ ಆಸೆ ಆಕೆಯನ್ನು ಕಾಣುವುದೇ ಆಗಿತ್ತು ಎಂಬುದಕ್ಕೆ ಸ್ಪಷ್ಟನೆ ಸಿಗಬೇಕಿದೆ.

ಮಾ.15ರಂದು 4.25 PM ಸುಮಾರಿಗೆ ಕಳಿಸಲಾದ ಮತ್ತೊಂದು ಸಂದೇಶದಲ್ಲಿ 'ಇದು ನನ್ನ ಬದುಕಿನ ಅತ್ಯಂತ ಕೆಟ್ಟ ದಿನ, ನಾನು ಕಟ್ಟಕಡೆಯ ನಿರ್ಧಾರ ಕೈಗೊಳ್ಳುವ ಸಮಯ ಬಂದಿದೆ, ನೀನು ನನಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತೀಯಾ ಎಂಬ ನಂಬಿಕೆ ಇದೆ. ನಾನು 9PM ತನಕ ನಿನ್ನ ಕರೆಗಾಗಿ ಕಾಯುತ್ತೇನೆ. ಹಾಗೂ ನಿನ್ನ ಆಹ್ವಾನಕ್ಕೆ ಕೂಡಾ..ಎಂದು ಬರೆಯಲಾಗಿದೆ.

ಅದೇ ದಿನ 5.20PMಕ್ಕೆ ಮತ್ತೊಂದು ಸಂದೇಶ ಕಳಿಸಿರುವ ಮಾಹಿತಿ ಸಿಕ್ಕಿದೆ. "ನನಗೆ ಕರೆ ಮಾಡಲು ಯತ್ನಿಸಬೇಡ ನನ್ನ ಜೊತೆ ಮಾತನಾಡಬೇಡ. ಮುಂದಿನ ಜೀವನ ಅಂಥ ಒಂದಿದ್ದರೆ ನಾವು ಒಟ್ಟಿಗೆ ಸೇರೋಣ.. ನಾನು ನಿರ್ಗಮಿಸುತ್ತೇನೆ"

ಇದಕ್ಕೆ ಉತ್ತರಿಸಿದ ಹೀಗಿದೆ: ಸ್ಟುಪಿಡ್ ಥರಾ ಆಡ್ಬೇಡ. ನಾನು ನಿನ್ನೊಟ್ಟಿಗೆ ಮಾತನಾಡಬಾರದು ಎಂದಾದರೇ ನಾನು ಮಾತನಾಡುವುದಿಲ್ಲ. ಇಂದೆಂಥ ಹುಚ್ಚುತನ? ಎಂದು ಪ್ರಶ್ನಿಸಲಾಗಿದೆ.

Messages show he had not taken an impulsive decision


ಸಂದೇಶಗಳು ಸಿಬಿಐ ತನಿಖೆಗೆ:

ವಾಟ್ಸಪ್ ನಲ್ಲಿ ವಿನಿಮಯಗೊಂಡ ಎಲ್ಲಾ ಸಂದೇಶಗಳನ್ನು ಸಿಬಿಐ ಹೊರಕ್ಕೆ ತೆಗೆದು ಪರೀಕ್ಷಿಸಲಿದೆ. ಸಂದೇಶಗಳ ಆಧಾರದ ಮೇಲೆ ಇದೊಂದು ಆತ್ಮಹತ್ಯೆ ಪ್ರಕರಣ ಎಂಬು ಬಿಂಬಿಸುತ್ತಿರುವುದರ ಸತ್ಯಾಸತ್ಯತೆಯನ್ನು ಮೊದಲಿಗೆ ವಿಶ್ಲೇಷಿಸಲಾಗುತ್ತದೆ. ಸಿಐಡಿಗೆ ಲಭ್ಯವಾಗಿರುವ ಈ ಸಂದೇಶಗಳು ಚೆನ್ನೈನಿಂದ ಬರಲಿರುವ ಸಿಬಿಐ ತಂಡ ಕೈ ಸೇರಲಿದೆ.

ಆತ್ಮಹತ್ಯೆ ಪೂರ್ವ ನಿರ್ಧಾರಿತವಾಗಿತ್ತು, ವಾಟ್ಸಪ್ ಸಂದೇಶಗಳು ಪೂರಕವಾಗಿ ಪರಿಣಮಿಸಿತು ಎಂಬುದನ್ನು ಸದ್ಯದ ಸಿಐಡಿ ತನಿಖೆ ವರದಿ ಹೇಳುತ್ತಿದೆ. ಆದರೆ, ಸಾಯುವುದಕ್ಕೂ ಎರಡು ದಿನ ಮುಂಚೆ ನಡೆದ ಸಂದೇಶ ವಿನಿಯಮದಿಂದ ಆತ ಆತುರದ ನಿರ್ಧಾರ ಕೈಗೊಂಡಿಲ್ಲ ಎಂಬುದು ಈ ಸಂದೇಶಗಳಿಂದ ಸ್ಪಷ್ಟವಾಗುತ್ತದೆ.

English summary
Whether IAS officer D K Ravi had committed suicide or was it something else is something that the Central Bureau of Investigation would determine now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X