ರಾಮಚಂದ್ರಾಪುರ ಮಠದ ಗೋರಕ್ಷಣಾ ಅಭಿಯಾನಕ್ಕೆ ಬಿಎಸ್ ವೈ ಬೆಂಬಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 15: ಬರದಿಂದಾಗಿ ಮೇವಿಲ್ಲದೆ ಪರದಾಡುತ್ತಿರುವ ಗೋವುಗಳ ರಕ್ಷಣೆಗಾಗಿ ರಾಮಚಂದ್ರಪುರ ಮಠ GiveUpAMeal ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆನ್ ಲೈನ್ ಅಭಿಯಾನ ಆರಂಭಿಸಿರುವ ಬಗ್ಗೆ ಒನ್ ಇಂಡಿಯಾದಲ್ಲಿ ನೀವು ಈಗಾಗಲೇ ಓದಿದ್ದೀರಿ.

ಒಂದು ಹೊತ್ತಿನ ಆಹಾರ ಬಿಟ್ಟು, ಉಳಿಸಿದ ಹಣವನ್ನು ಗೋವಿಗೆ ಮೇವು ಒದಗಿಸುವುದಕ್ಕಾಗಿ ನೀಡುವ ಶ್ರೀಮಠದ ಈ ವಿಭಿನ್ನ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೆಚ್ಚುಗೆ ಸೂಚಿಸಿದ್ದಾರೆ.[ರಾಮಚಂದ್ರಾಪುರ ಮಠದ ಯಶಸ್ವೀ 'ಗೋಯಾತ್ರೆ'ಗೆ ಮತ್ತೊಂದು ಗರಿ]

I will support GiveUpAMeal campaign by Ramachandrapura math: BSY

ಯಡಿಯೂರಪ್ಪನವರ ಆಹ್ವಾನದ ಮೇರೆ GiveUpAMeal ನಿಯೋಗ ನಿನ್ನೆ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿತ್ತು. ಆ ಸಂದರ್ಭದಲ್ಲಿ, ಗೋವುಗಳ ರಕ್ಷಣೆಗೆ ಮಠ ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳಿಗೆ ತಿಳಿಸಲಾಯಿತು.

GiveUpAMeal ಹೇಗೆ ಜನಪ್ರಿಯ ಆನ್ಲೈನ್ ಅಭಿಯಾನವಾಗಿದೆ, ಈ ಅಭಿಯಾನದಿಂದಾಗಿ ಜನರಲ್ಲಿ ಗೋ ರಕ್ಷಣೆಯ ಬಗ್ಗೆ ಹೇಗೆ ಅರಿವು ಮೂಡಿದೆ ಎಂಬಿತ್ಯಾದಿ ಮಾಹಿತಿಯನ್ನು ನಿಯೋಗ ನೀಡಿತು. ಸಮಾಧಾನದಿಂದ ಎಲ್ಲವನ್ನೂ ಆಲಿಸಿಕೊಂಡ ಯಡಿಯೂರಪ್ಪ, ಗೋ ರಕ್ಷಣೆಯ ಕುರಿತ ಮಠದ ಎಲ್ಲ ನಡೆಗೂ ತಮ್ಮ ಬೆಂಬಲವಿದೆ ಎಂದು ಹೇಳಿದರು. ಯಡಿಯೂರಪ್ಪ ಗೋರಕ್ಷಣೆಗೆ ಕೈಜೋಡಿಸುವುದಾಗಿ ಅಭಯ ನೀಡಿದ ವಿಡಿಯೋ ಇಲ್ಲಿದೆ.[ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ]

ಗೋರಕ್ಷಣೆಗಾಗಿ ಮಠಕ್ಕೆ 10 ಲಕ್ಷ ರೂ. ಗಳನ್ನು ತಕ್ಷಣವೇ ನೀಡಿದ ಯಡಿಯೂರಪ್ಪ, GiveUpAMeal ಅಭಿಯಾನಕ್ಕೆ ಶುಭ ಹಾರೈಸಿದರು.

ಮಲೆಹದೇಶ್ವರ ಬೆಟ್ಟದಲ್ಲಿ ಮೇವಿಲ್ಲದೆ ಹೈರಾಣಾಗಿರುವ ಗೋವುಗಳಿಗೂ ಈಗಾಗಲೇ ಗೋವು ಪೂರೈಸುವ ಕೆಲಸವನ್ನು ರಾಮಚಂದ್ರಾಪುರ ಮಠ ಮಾಡಿದ್ದು, ಕಳದ ತಿಂಗಳಷ್ಟೇ 880 ಟನ್ ಮೇವನ್ನು ಮಲೆಮಹದೇಶ್ವರ ಬೆಟ್ಟಕ್ಕೆ ಕಳಿಸಿತ್ತು.

ಜಗ್ಗೇಶ್ ಬೆಂಬಲ

ನವರಸ ನಾಯಕ ಜಗ್ಗೇಶ್ ಅವರು ಸಹ ಬಿ ಎಸ್ ಯಡಿಯೂರಪ್ಪ ಅವರ ನಡೆಯನ್ನು ಬೆಂಬಲಿಸಿದ್ದಾರೆ. ಗೋರಕ್ಷಣೆಯನ್ನು ಆದ್ಯ ಕರ್ತವ್ಯ ಎಂದುಕೊಂಡಿರುವ ರಾಮಚಂದ್ರಾಪುರ ಮಠದ GiveUpAMeal ಅಭಿಯಾನಕ್ಕೆ ತಮ್ಮ ಪೂರ್ಣ ಪ್ರೋತ್ಸಾಹವಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ ವಿಡಿಯೋ ನಿಮಗಾಗಿ ಇಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
I will support GiveUpAMeal campaign by Ramachandrapura math, former chief minister of Karnataka, BJP state president B S Yeddyurappa told.
Please Wait while comments are loading...