ಉಪವಾಸವಿರುವ ಗೋರಕ್ಷಣೆಗಾಗಿ ಒಪ್ಪೊತ್ತಿನ ಊಟ ಬಿಡಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಗೋ ರಕ್ಷಣೆಯಲ್ಲಿ ಸದಾ ಮುಂದಿರುವ ರಾಮಚಂದ್ರಪುರ ಮಠ ಇದೀಗ ಬಿಸಿಲ ಝಳದಿಂದ ಮೇವಿಲ್ಲದೆ ಪರದಾಡುತ್ತಿರುವ ಗೋವುಗಳ ರಕ್ಷಣೆಗೆ ಹೊಸ ಅಭಿಯಾನವೊಂದನ್ನು ಆರಂಭಿಸಿದೆ.

GiveUpAMeal ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಆನ್ ಲೈನ್ ಅಭಿಯಾನ ಆರಂಭಿಸಿರುವ ಶ್ರೀಮಠ, ಒಂದು ಹೊತ್ತಿನ ಆಹಾರ ಬಿಟ್ಟು, ಉಳಿಸಿದ ಹಣವನ್ನು ಗೋವಿಗೆ ಮೇವು ಒದಗಿಸುವುದಕ್ಕಾಗಿ ನೀಡಬೇಕೆಂದಯ ಕೋರಿದೆ. ಅಷ್ಟೇ ಅಲ್ಲ, ಪ್ರತಿಯೊಬ್ಬರೂ ಸರಳ ಡಯೆಟ್ ಪಾಲಿಸುವಂತೆಯೂ, ದಿನಕ್ಕೊಂದು ಹೊತ್ತು ಊಟ ಬಿಡುವುದು ಅಥವಾ ವಾರಕ್ಕೊಮ್ಮೆ ಉಪವಾಸ ಮಾಡುವ ಮೂಲಕ ಉಳಿಸುವ ಹಣವನ್ನು ಗೋ ರಕ್ಷಣೆಗಾಗಿ ಮೀಸಲಿಡಬೇಕಾಗಿ ವಿನಂತಿಸಿದೆ.

ಈ ಆನ್ ಲೈನ್ ಆಂದೋಲನಕ್ಕೆ ಬೆಂಬಲ ನೀಡುವವರೆಲ್ಲರೂ ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಿಸಕೊಳ್ಳಬೇಕೆಂದೂ ಕೋರಲಾಗಿದೆ.

ರಾಮಚಂದ್ರಾಪರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋವಿಗೆ ಮೇವು ನೀಡುತ್ತಿರುವ ಚಿತ್ರವುಳ್ಳ, "ಗೋ ಪ್ರಾಣ ಭಿಕ್ಷಾ, ಭೀಕರ ಬರಗಾಲ ಎದುರಿಸುತ್ತಿರುವ ಗೋವುಗಳಿಗೆ ಮೇವು ಪೂರೈಸುವ ಬೃಹದಾಂದೋಲನ" ಎಂಬ ಹೇಳಿಕೆಯನ್ನೊಳಗೊಂಡ ಚಿತ್ರವನ್ನು ಶ್ರೀಮಠದ ಅನುಯಾಯಿಗಳು, ಗೋರಕ್ಷಣೆಗೆ ಬೆಂಬಲ ನೀಡುವವರು ತಮ್ಮ ಪ್ರೊಫೈಲ್ ಚಿತ್ರವನ್ನಾಗಿ ಬದಲಾಯಿಸಿಕೊಂಡಿದ್ದಾರೆ.

ಇದು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರನ್ನು ತಲುಪಿ, ಅವರನ್ನು ಗೋರಕ್ಷಣೆಯತ್ತ ಕಂಕಣಬದ್ಧರನ್ನಾಗಿಸುವ ಗುರಿ ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To save cows from drought and to provide fodder to them, Ramachandrapura math has started an online campaign under hashtag GiveUpAMeal. The math requested to give up a meal and give that saved money to provide fodder to the cows.
Please Wait while comments are loading...