ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಎಎಲ್ ಇಮೇಲ್ ಐಡಿ ಹ್ಯಾಕ್ ರಾದ್ಧಾಂತ!

By ಒನ್ ಇಂಡಿಯಾ ಸಿಬ್ಬಂದಿ
|
Google Oneindia Kannada News

ಬೆಂಗಳೂರು, ನ.20: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಗೆ ಸೇರಿದ ಕೆಲ ಪ್ರಮುಖ ಮಾಹಿತಿ ಸೋರಿಕೆಯಾಗಿದೆ, ಸಂಸ್ಥೆಯ ಇ ಮೇಲ್ ಹ್ಯಾಕ್ ಎಂಬ ಸುದ್ದಿ ವಾರದ ಆರಂಭದಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಗಳ ಇನ್ ಬಾಕ್ಸ್ ತಲುಪಿ ಸಂಚಲನ, ಆತಂಕ ಮೂಡಿಸಿತ್ತು. ಅದರೆ, ಮರುದಿನವೇ ಈ ಬಗ್ಗೆ ಸ್ಪಷ್ಟನೆ ನೀಡಿದ ಎಚ್ಎಎಲ್ ಯಾವುದೇ ಮಹತ್ವದ ಮಾಹಿತಿ ಸೋರಿಕೆಯಾಗಿಲ್ಲ ಎಂದಿತ್ತು. ಇಮೇಲ್ ಹ್ಯಾಕ್ ಬಗ್ಗೆ ವಿಸ್ತೃತ ವಿವರಣೆ ಇಲ್ಲಿದೆ ಓದಿ...

ಮಾಧ್ಯಮಗಳಿಗೆ ಕಳಿಸಿದ್ದ ಇಮೇಲ್ ನಲ್ಲಿದ್ದ ಲಿಂಕ್ ("Watch this article' with URL http://186.148.231.168/) ಓಪನ್ ಆಗುತ್ತಿರಲಿಲ್ಲ. ಸತತ ಪ್ರಯತ್ನದ ನಂತರ ಈ ಲಿಂಕ್ ಹಾಗೂ ಇಮೇಲ್ ಹ್ಯಾಕ್ ಆಗಿರುವುದು ದೃಢಪಟ್ಟಿತ್ತು. [email protected]. ದಿಂದ ಮಾಧ್ಯಮಗಳಿಗೆ ಇಮೇಲ್ ರವಾನೆಯಾಗಿತ್ತು.

ಅದರೆ, ಎಚ್ಎಎಲ್ ಈ ಬಗ್ಗೆ ಸ್ಪಷ್ಟನೆ ನೀಡಿ ಈ ಇಮೇಲ್ ನಿಂದ ಯಾವುದೇ ಸೂಕ್ಷ್ಮ ವಿಷಯಗಳನ್ನು ಸಂಸ್ಥೆಯಿಂದ ಹೊರಕ್ಕೆ ಕಳಿಸಲಾಗಿಲ್ಲ. ಮಾಧ್ಯಮಗಳ ಜೊತೆ ಸಂಪರ್ಕ ಹೊಂದಲು ಇಮೇಲ್ ಐಡಿ ಬಳಸುತ್ತಿದ್ದೆವು. ಇದರ ಜೊತೆಗೆ ಇನ್ನಿತರ ಅಧಿಕೃತ ಇಮೇಲ್ ಐಡಿಗಳನ್ನು ಬಳಸಿದ್ದೇವೆ. ಅದರೆ, ಮಾಧ್ಯಮಗಳಿಗೆ ಮಾಹಿತಿ ರವಾನೆ ಅನುಕೂಲಕ್ಕಾಗಿ ಮೇಲ್ಕಂಡ ಜಿಮೇಲ್ ಐಡಿಯನ್ನು ಸಕ್ರಿಯವಾಗಿ ಬಳಸಲಾಗುತ್ತಿತ್ತು ಎಂದು ಹೇಳಿದೆ.

Hacked email ID contained no sensitive info: HAL

ಇಮೇಲ್ ಐಡಿ ಪುನರ್ ಸ್ಥಾಪನೆ
ಈ ಘಟನೆ ನಂತರ ಯಾವ ಮಾಹಿತಿ ಹೊರ ಹೋಗಿದೆ, ಯಾವ ಸಂದೇಶ ಲೀಕ್ ಆಗಿದೆ ಎಂಬುದರ ಸುಳಿವು ಕೂಡಾ ತಿಳಿದು ಬಂದಿಲ್ಲ. ಅದರೆ, ತಕ್ಷಣ ಎಚ್ಚೆತ್ತುಕೊಂಡ ಎಚ್ಎಎಲ್ ಇಮೇಲ್ ಐಡಿಯನ್ನು ಪುನರ್ ಪರಿಶೀಲನೆ ಮಾಡಿ ಸೈಬರ್ ಸುರಕ್ಷತಾ ನಿಯಮಗಳನ್ನು ಶಿಸ್ತಿನಿಂದ ಅಳವಡಿಸಲಾಗಿದೆ ಎಂದಿದೆ. ಈ ಸಂಬಂಧ ಕರ್ನಾಟಕ ಸೈಬರ್ ಸೆಲ್ ನಲ್ಲಿ ದೂರು ಕೂಡಾ ದಾಖಲಿಸಲಾಗಿದೆ. ಹ್ಯಾಕ್ ಆಗಿದ್ದ ಇಮೇಲ್ ಐಡಿಯಿಂದ ಸ್ಥಳೀಯ ಪತ್ರಕರ್ತರಲ್ಲದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳ ಇಮೇಲ್ ಐಡಿಗಳಿಗೆ ಸಂದೇಶ ತಲುಪಿದೆ. ಹೆಚ್ಚಿನ ಸಂಸ್ಥೆಗಳು ಏರೋ ಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದ ಸುದ್ದಿ ಪ್ರಸಾರಮಾಡುತ್ತಿರುವ ಸಂಸ್ಥೆಗಳಾಗಿವೆ ಎಂದು ತಿಳಿದು ಬಂದಿದೆ.

ಕಾರ್ಪೊರೇಟ್ ಕಮ್ಯೂನಿಕೇಷನ್
2005ರಲ್ಲಿ ಎಚ್ಎಎಲ್ ಹೊಸ ಸಾಧನವನ್ನು ಬಳಸಿ ಕಂಪನಿಯ ಪಾರದರ್ಶಕತೆ ಹೆಚ್ಚಿಸಲು ಯತ್ನಿಸಿತು. ಕಾರ್ಪೊರೇಟ್ ಕಮ್ಯೂನಿಕೇಷನ್ ಮೂಲಕ ಕಂಪನಿಯ ಕಾರ್ಯಕ್ಷಮತೆ ಹೆಚ್ಚಳಕ್ಕೆ ಕರೆ ನೀಡಲಾಗಿತ್ತು. ಈ ಸಂದರ್ಭದಲ್ಲೇ ಹ್ಯಾಕ್ ಆಗಿದ ಐಡಿ ([email protected]) ಮೂಲ ಉದ್ದೇಶ ರಾಷ್ಟ್ರೀಯ ಮಾಧ್ಯಮಗಳ ಜೊತೆ ಸಂಪರ್ಕ ಹೊಂದುವುದಾಗಿತ್ತು.

ಕಾಲ ಬದಲಾದಂತೆ ಎಚ್ಎಎಲ್ ನಲ್ಲಿ ಹೊಚ್ಚ ಹೊಸ ಸಂವಹನ ತಂಡ ಸೃಷ್ಟಿಸಲಾಯಿತು. ಅದರೆ, ಇಮೇಲ್ ಐಡಿ ಮಾತ್ರ ಬದಲಾಗಲಿಲ್ಲ. 2005ರಲ್ಲಿ ಸೃಷ್ಟಿಯಾದ ಈ ಐಡಿಯಿಂದ ಕೇವಲ ಪ್ರೆಸ್ ರಿಲೀಸ್ ಗಳನ್ನು ಮಾತ್ರ ಕಳಿಸಲಾಗುತ್ತಿತ್ತು ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ಎಚ್ಎಎಲ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಕಬ್ಬನ್ ರಸ್ತೆಯಲ್ಲಿ ಎಚ್ಎಎಲ್ ನ ಸಂವಹನ ಕೇಂದ್ರ ಕಾರ್ಯ ನಿರ್ವಹಿಸುತ್ತದೆ. ಸಂಸ್ಥೆಯ ಪ್ರತಿ ಸಾಧನೆ, ಯೋಜನೆ ಬಗ್ಗೆ ಜಗತ್ತಿಗೆ ತಿಳಿಯುವಂತೆ ಮಾಡಲು ಮಾಧ್ಯಮಗಳ ಜೊತೆ ಸಂಪರ್ಕ ಹೊಂದುವುದು ಸಂವಹನ ಕೇಂದ್ರದ ಕಾರ್ಯವಾಗಿದೆ.

ಕಾರ್ಪ್ ಕಾಮ್ ತಂಡಕ್ಕೆ ಆಶೀಶ್ ದತ್ತಾ ಮುಖ್ಯಸ್ಥರಾಗಿದ್ದರೆ, ಮಾಜಿ ಪತ್ರಕರ್ತ ಜಿಬಿ ಸುತಾರ್ ಅವರು ಮಾಧ್ಯಮ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ, ನಿವೃತ್ತ ಯೋಧ ಎಂ.ಪಿ ಕೃಷ್ಣ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾಗಿದ್ದಾರೆ. ಆದರೆ, 2005 ರಿಂದ 2009ರ ತನಕ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಈ ಕೇಂದ್ರ ಮುಚ್ಚಲು ಶಿಫಾರಸು ಮಾಡಲಾಗಿತ್ತು. ಅದರೆ, ನಂತರ ಪುನಶ್ಚೇತನ ಕಂಡ ಮೇಲೆ ಈಗ ಹ್ಯಾಕಿಂಗ್ ಸಮಸ್ಯೆ ಸುಳಿಯಲ್ಲಿದೆ. ಇದು ಎಚ್ಚರಿಕೆ ಗಂಟೆಯಾಗಿದೆ. ನಮ್ಮ ಐಟಿ ನಿಯಮ ಸದೃಢವಾಗಿದ್ದು, ಸುರಕ್ಷಿತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ಎಚ್ಎಎಲ್ ನ ಈ ಕೇಂದ್ರ ಹೇಳಿದೆ.

English summary
Hindustan Aeronautics Ltd (HAL) said on Tuesday that it lost no sensitive information, following the hacking of one of its email IDs on Monday. It was on Monday evening that the members of national media received an email from HAL's Corporate Communication department with a one-line message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X