ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಫ್ರಾನ್ಸ್ ರಾಯಭಾರಿ ಕಚೇರಿಗೆ ಬೆದರಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜ. 21: ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಅವರು ಭಾರತದ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಅತಿಥಿಯಾಗಿರುವುದನ್ನು ವಿರೋಧಿಸಿ ಬೆದರಿಕೆ ಪತ್ರ ಬಂದಿದೆ. ಬೆಂಗಳೂರಿನಲ್ಲಿರುವ ಫ್ರಾನ್ಸ್ ರಾಯಭಾರಿ ಕಚೇರಿಗೆ ಬೆದರಿಕೆ ಪತ್ರ ಜನವರಿ 11ರಂದೆ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತಂತೆ ಬೆಂಗಳೂರು ಪೊಲೀಸರು ಜನವರಿ 14ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಭಾರತಕ್ಕೆ ಫ್ರೆಂಚ್ ಅಧ್ಯಕ್ಷ ಹೊಲ್ಲಾಂಡೆ ಬರುವುದನ್ನು ವಿರೋಧಿಸುತ್ತೇವೆ ಎಂದು ಚೆನ್ನೈನಿಂದ ಬಂದಿರುವ ಪತ್ರದಲ್ಲಿ ಹೇಳಲಾಗಿದೆ. [ಚಿತ್ರಗಳು : ದೆಹಲಿಯಲ್ಲಿ ಫ್ರಾನ್ಸ್ ಸೈನಿಕರ ತಾಲೀಮು]

French consulate in Bengaluru

ಇಂಗ್ಲೀಷ್ ಭಾಷೆಯಲ್ಲಿರುವ ಪತ್ರ ಚೆನ್ನೈನಿಂದ ಪೋಸ್ಟ್ ಆಗಿರುವುದು ದೃಢಪಟ್ಟಿದೆ. ಆದರೆ, ವಿಳಾಸ ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಹೇಳಿದ್ದಾರೆ. [ಗಣರಾಜ್ಯೋತ್ಸವದ ಮೇಲೆ ISIS ಕಣ್ಣು]

ಗಣತಂತ್ರದಿನದ ಸಂಭ್ರಮ ವೀಕ್ಷಿಸಲು ಭಾರತಕ್ಕೆ ಬರಲಿರುವ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆ ಅವರ ಮೇಲೆ ಗುಂಪೊಂದು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಈ ರೀತಿ ಪತ್ರ ಬಂದಿರುವುದು ಆತಂಕ ಮೂಡಿಸಿದೆ.

ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ವಿರುದ್ಧ ಸಮರ ಸಾರಿರುವ ಫ್ರಾನ್ಸ್ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ತಿರುಗಿ ಬೀಳುವ ಶಂಕೆ ವ್ಯಕ್ತವಾಗಿದೆ. ಐಎಸ್ ಐಎಸ್ ಸಂಘಟನೆ ಪ್ಯಾರೀಸ್ ನಲ್ಲಿ ಇತ್ತೀಚೆಗೆ ದಾಳಿ ನಡೆಸಿ ಅನೇಕ ಜನರ ಸಾವಿಗೆ ಕಾರಣವಾಗಿತ್ತು. (ಒನ್ಇಂಡಿಯಾ ಸುದ್ದಿ)

English summary
A letter warning against the visit of French President Francois Hollande to India has been sent to consulate in Bengaluru. The letter which originates from Chennai was sent to the consulate in Bengaluru on January 11th. A case was registered on January 14th by the Bengaluru police who are probing into the matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X