ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ತಿ ಚಿದಂಬರಂಗೆ ಸೇರಿದ ಬೆಂಗಳೂರು ಕಚೇರಿ ಮೇಲೆ ದಾಳಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಚೇರಿಯೊಂದರ ಮೇಲೆ ದಾಳಿ ನಡೆಸಲಾಗಿದೆ. ಸೋಮವಾರ ತಡರಾತ್ರಿಯಲ್ಲಿ ಕಾರ್ತಿ ಪಾಲುದಾರಿಕೆಯ ಸೆಕ್ಯೂಯ ಕ್ಯಾಪಿಟಲ್(Sequoia Capital) ಸಂಸ್ಥೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕಾರ್ತಿ ಚಿದಂಬರಂ ಅವರು ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರ ಎಂಬ ಸತ್ಯವನ್ನು ಇತ್ತೀಚೆಗೆ ಹೊರಹಾಕಲಾಗಿತ್ತು. ಇಂಗ್ಲೆಂಡ್, ಅಮೆರಿಕ, ದಕ್ಷಿಣ ಆಫ್ರಿಕಾ,ಯುಎಸ್ಎ, ಫಿಲಿಪೈನ್ಸ್, ಶ್ರೀಲಂಕಾ, ಫ್ರಾನ್ಸ್, ಸ್ಪೇನ್ ಸೇರಿ 14 ದೇಶಗಳಲ್ಲಿ ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದಾರೆ. [ಅಕ್ರಮ ಆಸ್ತಿ ಗಳಿಕೆ : ಚಿದಂಬರಂ ಪುತ್ರ ಕಾರ್ತಿ ಜನ್ಮ ಜಾಲಾಡಿದ 'ಇಡಿ']

ವಾಸನ್ ಸಮೂಹ ಸಂಸ್ಥೆ ಸೇರಿದ 1.5 ಲಕ್ಷ ಷೇರುಗಳನ್ನು ಕೇವಲ 100 ರು ಪ್ರತಿ ಯೂನಿಟ್ ನಂತೆ ಕಾರ್ತಿ ಅವರು ಖರೀದಿಸಿರುವ ಬಗ್ಗೆ ಜಾರಿ ನಿರ್ದೇಶನಾಲಯ ಪ್ರಶ್ನಿಸುತ್ತಿದೆ. ಇದಲ್ಲದೆ ಸೆಕ್ಯೂಯಿಯ ಕ್ಯಾಪಿಟಲ್ ಗೆ 30,000 ಷೇರುಗಳನ್ನು 7,500 ರು ನಂತೆ ಪ್ರತಿ ಷೇರಿಗೆ ಮಾರಾಟಮಾಡಿ 22 ಕೋಟಿ ರು ಲಾಭ ಗಳಿಸಲಾಗಿದೆ.

ED raids Bengaluru office Sequoia Capital firm linked to Karthi Chidambaram

ಬೆಂಗಳೂರಿನ ಕಚೇರಿ ಜತೆಗೆ ಚೆನ್ನೈ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ಕಾರ್ತಿ ಹಾಗೂ ಏರ್ ಸೆಲ್ ನಡುವಿನ ವಾಣಿಜ್ಯ ವ್ಯವಹಾರದ ಬಗ್ಗೆ ತನಿಖೆ ಇನ್ನೂ ಮುಂದುವರೆದಿದೆ.

ಕಾರ್ತಿ ಒಡೆತನದ ಕಂಪನಿಗಳಿಗೆ ಕಡಿಮೆ ಮೊತ್ತದಲ್ಲಿ ಷೇರುಗಳ ಮಾರಾಟ ಮಾಡಿದ್ದು ಹೇಗೆ? ಏರ್ ಸೆಲ್ ಮಾರಾಟದ ವೇಳೆ ಕಾರ್ತಿ ಗಳಿಸಿದ ಲಾಭವೆಷ್ಟು? 2005ರಲ್ಲಿ ದಿವಾಳಿ ಸ್ಥಿತಿಯಲ್ಲಿದ್ದ ಏರ್ ಸೆಲ್ ಸಂಸ್ಥೆಯನ್ನು ಅಂದಿನ ವಿತ್ತ ಸಚಿವ ಪಿ ಚಿದಂಬರಂ ಅವರು ಕೈ ಹಿಡಿದು ಮೇಲೆತ್ತಿದ್ದು ಹೇಗೆ? ಏರ್ ಸೆಲ್ ಮಾಲೀಕ ಶಿವಶಂಕರನ್ ಅವರು ಮ್ಯಾಕ್ಸಿಸ್ ಕಂಪನಿ ಜೊತೆ ಡೀಲ್ ಮಾಡಿದ್ದು ಹೇಗೆ? ಮ್ಯಾಕ್ಸಿಸ್ ಗೆ 74% ಪಾಲು(4,000 ಕೋಟಿ ರು ಡೀಲ್) ನೀಡಿದ್ದೇಕೆ ಎಂಬ ಪ್ರಶ್ನೆಗಳಿಗೆ ಜಾರಿ ನಿರ್ದೇಶನಾಲಯ ಉತ್ತರ ಬಯಸಿದೆ.

ವಾಸನ್ ಕೇಸ್: ವಾಸನ್ ಹೆಲ್ತ್ ಕೇರ್ ಪ್ರೈ ಲಿಮಿಟೆಡ್ ಸಂಸ್ಥೆಯ ಆರ್ಥಿಕ ಅವ್ಯವಹಾರದ ಪ್ರಕರಣದ ತನಿಖೆ ನಡೆಯುತ್ತಿದೆ. ಕಾರ್ತಿ ಚಿದಂಬರಂ ಹಾಗೂ ವಿ ದ್ವಾರಕಾನಾಥನ್ ಸಹ ಮಾಲೀಕತ್ವದ ಸಂಸ್ಥೆ ಭಾರತದಲ್ಲಿ ಸುಮಾರು 175 ಆಸ್ಪತ್ರೆಗಳನ್ನು ಹೊಂದಿದೆ. 2008ರಲ್ಲಿ ಕಡಿಮೆ ಮೊತ್ತಕ್ಕೆ 1.5 ಲಕ್ಷ ಷೇರುಗಳನ್ನು ಅಡ್ವಾನ್ಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈ ಲಿಮಿಟೆಡ್ ಗೆ ನೀಡಲಾಗಿತ್ತು. ಇದಲ್ಲದೆ ಜಿಗಿಟಿಜಾ ಹೆಲ್ತ್ ಕೇರ್ ಲಿ ಆಂಬ್ಯುಲೆನ್ಸ್ ಹಗರಣ ಕೂಡಾ ಕಾರ್ತಿ ಚಿದಂಬರಂ ತಲೆ ಮೇಲಿದೆ.

English summary
The Enforcement Directorate conducted a late night raid at the Bengaluru office of the Singapore based firm Sequoia Capital linked to Karthi C, the son of former union minister P Chidambaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X