Get Updates
Get notified of breaking news, exclusive insights, and must-see stories!

ಅಂಬರೀಶ್ ಅಂತ್ಯಕ್ರಿಯೆ: ರಮ್ಯಾಗೆ ನಾನೇ ಕಾಲ್ ಮಾಡಿ ಕರೆದಿದ್ದೆ ಎಂದ ಡಿಕೆಶಿ

Recommended Video

      Ambareesh : ಅಂಬಿ ಅಂತ್ಯಸಂಸ್ಕಾರಕ್ಕೆ ಬರುವಂತೆ ಡಿಕೆಶಿ ಕರೆ ಮಾಡಿದಾಗ ರಮ್ಯಾ ಏನಂದ್ರು ಗೊತ್ತಾ? |Oneindia Kannada

      ಬೆಂಗಳೂರು, ನವೆಂಬರ್ 27: ಚಿತ್ರನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕಾಲು ಮೂಳೆಯ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡದಂತಹ ಸ್ಥಿತಿಯಲ್ಲಿದ್ದಾರೆ ಹೀಗಾಗಿ ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

      ರಮ್ಯಾ ಅವರಿಗೆ ನಾನೇ ಖುದ್ದಾಗಿ ದೂರವಾಣಿ ಕರೆ ಮಾಡಿದ್ದೆ ನನಗೆ ಬರಲು ಆಗುವುದಿಲ್ಲ ಎಂದು ತಿಳಿಸಿದ್ದರು,ಕಳೆದ ಕೆಲವು ದಿನಗಳ ಹಿಂದೆ ರಮ್ಯಾ ಅವರು ಕಾಲು ಮುರಿದುಕೊಂಡಿದ್ದು ನಡೆದಾಡದಂತಹ ಸ್ಥಿತಿಯಲ್ಲಿದ್ದಾರೆ ಹೀಗಾಗಿ ವೈದ್ಯರ ಸಲಹೆ ಮೇರೆಗೆ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಹೀಗಾಗಿ ಈ ವಿಚಾರದಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

      ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಮ್ಯಾ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಿರಲು ಬೇರೇನೂ ಕಾರಣಗಳಿಲ್ಲ, ಕಾಲಿನ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

      ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದಲೇ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ ಎಂದು ಖಾಸಗಿ ವಾಹಿನಿಯೊಂದರ ವರದಿ ಆಧರಿಸಿ ದಿವ್ಯ ಸ್ಪಂದನ/ರಮ್ಯಾ ಅಭಿಮಾನಿಗಳ ಕ್ಲಬ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

      ಅಂಬಿ ಅಂತ್ಯಕ್ರಿಯೆಗೆ ಬಾರದ ರಮ್ಯಾಗೆ ಜಗ್ಗೇಶ್ ಉತ್ತರ

      ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ವಿರುದ್ಧ ಹಲವಾರು ಮಂದಿ ಹಲವಾರು ರೀತಿಯಲ್ಲಿ ಮಾತನಾಡಿದ್ದಾರೆ, ಹಾಗೆಯೇ ನವರಸನಾಯಕ ಜಗ್ಗೇಶ್ ಕೂಡ ಟ್ವೀಟ್ ಮಾಡಿದ್ದಾರೆ. ಆದರೆ ಎಲ್ಲಿಯೂ ರಮ್ಯಾ ಅವರ ಹೆಸರು ಪ್ರಸ್ತಾಪಿಸಿಲ್ಲ, ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು.! ದೇವನೊಬ್ಬ ಇರುವ ಅವ ಎಲ್ಲ ನೋಡುತಿರುವ! ದೋಸೆ ಮೊಗಚಿ ತಳಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ!'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

      ರಮ್ಯಾ ಫ್ಯಾನ್ಸ್ ಏನಂತಾರೆ

      ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿಲ್ಲ. ಎಂದು ರಮ್ಯಾ ಫ್ಯಾನ್ಸ್ ಕ್ಲಬ್‌ ಟ್ವೀಟ್ ಮಾಡಿದೆ.

      ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ

      ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳ ಆಕ್ರೋಶ

      ಮಂಡ್ಯದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಮಾಜಿ ಸಚಿವ ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಅವರು ರಮ್ಯಾಗೆ ರಾಜಕೀಯದ ದಾರಿ ತೋರಿಸಿದ್ದಾರೆ. ಆದ್ದರಿಂದ, ಮಂಡ್ಯಕ್ಕೆ ಬಂದು ರಮ್ಯಾ ಅವರು ಅಂತಿಮ ದರ್ಶನ ಪಡೆಯಬೇಕಿತ್ತು ಎಂಬುದು ಜನರ ಒತ್ತಾಯವಾಗಿತ್ತು. ಆದರೆ, ರಮ್ಯಾ ಅವರು ಮಂಡ್ಯಕ್ಕೆ ಬರಲೇ ಇಲ್ಲ ಇದಕ್ಕೆ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

      ರಮ್ಯಾಗೆ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

      ರಮ್ಯಾಗೆ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

      ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಬಾರದ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಮಂಡ್ಯ ಜನರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಮ್ಯಾ ಇಂದು ಮಂಡ್ಯ ಜನತೆಯ ಪಾಲಿಗೆ ಇಂದು ನಿಧನರಾಗಿದ್ದಾರೆ ಎಂಬ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+