ನೋಟು ಬ್ಯಾನ್: ಮೋದಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ಕನ್ನಡ ಲೇಖಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 13: ದೊಡ್ಡ ಮೌಲ್ಯದ ನೋಟುಗಳ ಮೇಲೆ ನಿಷೇಧ ಹೇರಿರುವ ಪ್ರಧಾನಿ ಮೋದಿ ವಿರುದ್ಧ ಕನ್ನಡ ಲೇಖಕ, ನಿರ್ದೇಶಕ ದಯಾನಂದ ಟಿಕೆ ಅವರು ಕಿಡಿಕಾರಿದ್ದಾರೆ.

ಮೋದಿ ಅವರನ್ನು ಟೀಕಿಸುವ ಭರದಲ್ಲಿ ದಯಾನಂದ ಅವರು ಬಳಸಿರುವ ಪದಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.

Demonetisation: Kannada writer abuses PM, receives flak

ಮೋದಿ ಅವರ ದಿಢೀರ್ ನಿರ್ಣಯದಿಂದಾಗಿ ಸಾರ್ವಜನಿಕರಿಗೆ ಭಾರಿ ತೊಂದರೆಯುಂಟಾಗಿದೆ. ಈ ರೀತಿ ಜನ ಸಾಮಾನ್ಯರಿಗೆ ಕಿರುಕುಳ ನೀಡುವವರು ಎಂಥವರು ಎಂಬುದನ್ನು ಫೇಸ್ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದರು.

Dayanand TK

ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕ ಮಂದಿ ನಿಮ್ಮ ಕಾಳಜಿ, ಪ್ರತಿಕ್ರಿಯೆ ಸರಿ ಇದ್ದರೂ, ನೀವು ಬಳಸಿಕ ಪದ ಸರಿಯಿಲ್ಲ ಎಂದು ಹೇಳಿದ್ದಾರೆ. ಕೆಲ ಮಂದಿ ದಯಾನಂದ್ ಟಿಕೆ ಅವರ ಫೇಸ್ ಬುಕ್ ವಾಲ್ ಸ್ಕ್ರೀನ್ ಶಾಟ್ ತೆಗೆದು ಬೆಂಗಳೂರು ಪೊಲೀಸ್ ಫೇಸ್ ಬುಕ್ ಪುಟಕ್ಕೆ ಟ್ಯಾಗ್ ಮಾಡಿ ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಮಾಧ್ಯಮಗಳ ವರದಿಯಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರ ಇದರ ಹೊಣೆ ಹೊರಬೇಕಿದೆ ಎಂದು ದಯಾನಂದ್ ಅವರು ಹೇಳಿಕೊಂಡಿದ್ದಾರೆ. ಆದರೆ, ದಯಾನಂದ್ ಅವರ ಭಾಷೆ ಬಳಕೆ ಬಗ್ಗೆ ಅನೇಕ ಮಂದಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಟೀಕಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dayanand TK, a Kannada writer and film maker has come under severe fire on social networking sites after he hurled obscenities against Prime Minister Modi in a series of Facebook posts and comments.
Please Wait while comments are loading...