'ಭಿನ್ನಾಭಿಪ್ರಾಯದ ಡ್ಯಾಮೇಜ್ ಕಂಟ್ರೋಲ್ ಗಾಗಿ ಬಿಜೆಪಿ ಜನಸಂಪರ್ಕ'

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 19: ಕಾಂಗ್ರೆಸ್ ಮುಖಂಡ ವಿಆರ್ ಸುದರ್ಶನ್ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದ ಪರ ಬ್ಯಾಟ್ ಬೀಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಆಡಿದ ಮಾತುಗಳನ್ನು ಇಲ್ಲಿ ಕೊಡಲಾಗಿದೆ.

- ನಮ್ಮ ಕಾಂಗ್ರೆಸ್ ಸರಕಾರವನ್ನು ತೇಜೋವಧೆ ಮಾಡಲು ಬಿಜೆಪಿಯವರು ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದಾರೆ, ಇದು ನೈಜ ಕಾಳಜಿಯಿಂದಲ್ಲ!

- ಬಿಜೆಪಿಯವರದ್ದು ಜನ ಸಂಪರ್ಕ ಅಭಿಯಾನವಲ್ಲ- ಜನರ ಮುಂದೆ ಅಭಿನಯ!

- ಬಿಜೆಪಿಯವರು ತಮ್ಮಲ್ಲಿನ ಭಿನ್ನಾಭಿಪ್ರಾಯಕ್ಕೆ ತೇಪೆ ಹಾಕಿಕೊಂಡು ನಿನ್ನೆಯಿಂದ ಜನ ಸಂಪರ್ಕ ಅಭಿಯಾನದ ಹೆಸರಿನಲ್ಲಿ ಓಡಾಟ ಆರಂಭಿಸಿದ್ದಾರೆ.[ಮೀಸಲಾತಿ ಶೇ. 70 ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ - ಸಿದ್ದರಾಮಯ್ಯ]

Siddaramaiah

- ನಾಲ್ಕು ವರ್ಷಗಳ ಅವಧಿಯಲ್ಲಿ ನಮ್ಮ ಪಕ್ಷದ ಸರಕಾರ ಅತ್ಯುತ್ತಮ ಸಾಧನೆ ಮಾಡುತ್ತಿದೆ. ನಮ್ಮ ಯಶಸ್ವಿ ಪಯಣವನ್ನು ಮೆಚ್ಚಿಯೇ ಈಚೆಗೆ ಜರುಗಿದ ಚುನಾವಣೆಗಳಲ್ಲಿ ಜನತೆ ಬೆಂಬಲಿಸಿದ್ದಾರೆ. ಆದರೆ ಬಿಜೆಪಿ ಆಳ್ವಿಕೆಯ 2008-2013ರ ದಿನಗಳನ್ನು ನೆನೆದರೆ ಜನರು ಈಗಲೂ ಬೆಚ್ಚಿ ಬೀಳುತ್ತಾರೆ.

- ಬಿಜೆಪಿ ಶಾಸಕರು, ಸಂಸದರಿಗೆ ನಮ್ಮ ಸರಕಾರದ ಸಾಧನೆಯ ಅಂಕಿ- ಅಂಶಗಳನ್ನು ಪಡೆದುಕೊಂಡು ವಸ್ತು ನಿಷ್ಠವಾಗಿ ಟೀಕಿಸುವ ಎಲ್ಲಾ ಅವಕಾಶಗಳಿವೆ. ಮಾಹಿತಿ ಹಕ್ಕು ಕಾಯಿದೆಯಿಂದ ಆರಂಭಿಸಿ ಶಾಸಕತ್ವದ- ಸಂಸದರ ಅಧಿಕಾರ ಬಳಸಿಕೊಳ್ಳಬಹುದು. ಆದರೆ ಸಂಸತ್ ಗೆ ಹಾಜರಾಗದೆ ಹಾದಿ ಬೀದಿಗಳಲ್ಲಿ ನಿಂತು ನಮ್ಮನ್ನು ಟೀಕಿಸುತ್ತಿರುವುದು ಅವರು ಹೊಂದಿರುವ ಪದವಿಗೆ ತಕ್ಕದ್ದಲ್ಲ.[ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ - ಸಿದ್ದರಾಮಯ್ಯ]

BSY-Eshwarappa

- ಶಿಕ್ಷಣಕ್ಕೆ ಬಿಜೆಪಿ 55,320 ಕೋಟಿಗಳನ್ನು ಬಿಡುಗಡೆ ಮಾಡಿದ್ದರೆ, ಕಾಂಗ್ರೆಸ್ 99,203 ಕೋಟಿ ಬಿಡುಗಡೆ ಮಾಡಿದೆ. ಆರೋಗ್ಯಕ್ಕೆ ಬಿಜೆಪಿ 10,240 ಕೋಟಿ ಕೊಟ್ಟಿದ್ದರೆ, ಕಾಂಗ್ರೆಸ್ ಸರ್ಕಾರ 21,475 ಕೋಟಿ ಕೊಟ್ಟಿದೆ. ಕೃಷಿಗೆ ಬಿಜೆಪಿ 17,182 ಕೋಟಿ- ಕಾಂಗ್ರೆಸ್ 44,655 ಕೋಟಿ, ಇಂಧನಕ್ಕೆ ಬಿಜೆಪಿ 40,913 ಕೋಟಿ, ಕಾಂಗ್ರೆಸ್ 61,323 ಕೋಟಿ ಬಿಡುಗಡೆ ಮಾಡಿದ ಬಗ್ಗೆ ಅಂಕಿ- ಅಂಶಗಳನ್ನು ತಿಳಿಸಿದರು.

- ಈಚೆಗೆ ಉಪಚುನಾವಣೆಗಳಲ್ಲಿ ಗೆದ್ದೇ ಬಿಟ್ಟೆವೆಂಬ ಸಂಭ್ರಮದಲ್ಲಿದ್ದ ಬಿಜೆಪಿಗೆ ಸೋಲಾಗಿದ್ದು, ಅವರು ಹತಾಶರಾಗಿದ್ದಾರೆ. ಹೀಗಾಗಿ ಅಸಂಬದ್ಧ ಮಾತನಾಡುತ್ತಿದ್ದಾರೆ. ಕರ್ನಾಟಕದ ಜನ ಇವರನ್ನು ನಂಬುವಷ್ಟು ಮೂರ್ಖರಲ್ಲ. ತಕ್ಕ ಪಾಠ ಕಲಿಸುವರು.[ಬಿಜೆಪಿಯವರಿಗೆ ಈಗ ದಲಿತರು, ಅಲ್ಪಸಂಖ್ಯಾತರ ನೆನಪು: ಎಚ್ ಡಿಕೆ ವ್ಯಂಗ್ಯ]

Kumarswamy

- ಜಂತಕಲ್ ಗಣಿಗಾರಿಕೆ ಕುರಿತಂತೆ 3 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ಕೋರ್ಟ್ ಕೊಟ್ಟ ಸೂಚನೆಯಂತೆ ವಿಶೇಷ ತನಿಖಾ ತಂಡ ಕಾರ್ಯನಿರ್ವಹಿಸುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮ್ಮ ಸರಕಾರ ಹಾಗೂ ಸಿಎಂರನ್ನು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ.

Anurag Tiwari

- ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಸಾವಿನ ಬಗ್ಗೆ ಉತ್ತರಪ್ರದೇಶ ಸರಕಾರ ಪಕ್ಷಪಾತ ರಹಿತ ತನಿಖೆ ಮಾಡಿಸಲಿ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader VR Sudarshan criticizes BJP jansampark campaign in Bengaluru. There is a crisis in BJP. So, in damage control mode they are doing jansampark campaign, Sudarshan added.
Please Wait while comments are loading...